ಸುಮಲತಾ ಅವರಿಗೆ ಸಪೋರ್ಟ್ ಮಾಡ್ತಿರಾ ಸರ್? ಒಮ್ಮೆಲೇ ದರ್ಶನ್ ಹೇಳಿದ್ದೇನು ಗೊ.ತ್ತಾ

 | 
Ju

ಅಮ್ಮ ಎಂದಿದ್ದರೂ ನಮ್ಮ ಅಮ್ಮ ಎಂದು ಸುಮಲತಾ ಅವರು ನಮ್ಮ ಅಮ್ಮ, ಅವರ ಜೊತೆ ನಾನು ಯಾವಾಗಲೂ ಇರುತ್ತೇನೆ ಎಂದು ಹೇಳುವ ಮೂಲಕ ಈ ಬಾರಿ ಕೂಡ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸುವುದಾಗಿ ನಟ ದರ್ಶನ್ ತಾಯಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಹೆತ್ತ ತಾಯಿಯನ್ನು ಎಂದಾದರೂ ಬಿಟ್ಟು ಕೊಡಲಿಕ್ಕಾಗುತ್ತದೆಯೇ, ಮೊನ್ನೆಯವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ. ಈಗ ಅವರ ಕೈಬಿಟ್ಟರೆ ಆಗುತ್ತದೆಯೇ ಸರ್, ನಿಮ್ಮ ಮನೆಯಲ್ಲಿ ನಿಮ್ಮ ತಾಯಿಯನ್ನು ಬಿಟ್ಟು ಬಿಡುತ್ತೀರಾ, ಸುಮಲತಾ ಅಮ್ಮ ಅಮ್ಮನೇ ಸಾರ್ ಎಂದರು.ಅಮ್ಮ ಅಮ್ಮನೇ ಅವಳೊಂದಿಗೆನೇ‌ ಇರೋದು. ಬೇರೆಯವರಿಗಾಗಿ ಅಮ್ಮನನ್ನು ಬಿಡೋಕಾಗುತ್ತಾ? ಎಂದು ಪ್ರಶ್ನಿಸಿದರು. 

ದರ್ಶನ್​ ಕೂಡ ಸುಮಲತಾ ಅವರನ್ನು ತಾಯಿಯಂತೆ ಕಾಣ್ತಾರೆ. ಸುಮಲತಾ ಕೂಡ ದರ್ಶನ್ ನನಗೆ ದೊಡ್ಡ ಮಗನಿದ್ದಂತೆ ಎಂದು ಅನೇಕ ಬಾರಿ ಹೇಳಿದ್ರು. ಮಂಡ್ಯದಲ್ಲಿ ನಡೆದ ದರ್ಶನ್​ ಬೆಳ್ಳಿ ಪರ್ವ ಕಾರ್ಯಕ್ರಮದಲ್ಲೂ ಸುಮಲತಾ ದೊಡ್ಮಗನ ಗುಣಗಾನ ಮಾಡಿದ್ರು. ನಾವು ನಡೆದು ಬಂದ ಹಾದಿಯನ್ನು ಯಾರು ಮರೆಯಬಾರದು, ಇದನ್ನು ನಾವು ದರ್ಶನ್ ನೋಡಿ ಕಲಿಯಬೇಕು ಎಂದು ಸುಮಲತಾ ಹೇಳಿದ್ರು.

ದರ್ಶನ್​ ಸಾಕಷ್ಟು ಕಷ್ಟ, ಸವಾಲುಗಳನ್ನ ಎದುರಿಸಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ದರ್ಶನ್ ಕಷ್ಟಪಟ್ಟು ಬೆಳೆದಿದ್ದರ ಬಗ್ಗೆ ನೀವು ಯಾರು ಮರೆಯಬಾರದು. ತಾಯಿಯಾಗಿ ನಾನು ಹೆಮ್ಮೆ ಪಡ್ತೀನಿ. ಮಕ್ಕಳ ಯಶಸ್ಸಿಗಿಂತ ತಾಯಿಗೆ ಇನ್ನೇನು ಬೇಕು. ದರ್ಶನ್ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ. ಅಂಬರೀಶ್ ಇಲ್ಲದಿದ್ರೂ ಅಭಿಗೆ ನೀನಿದ್ಯಾ ಎಂದು ದರ್ಶನ್ ಗೆ ನಾನು ಅನೇಕ ಬಾರಿ ಹೇಳಿದ್ದೇನೆ. ಅಭಿಗೆ ದರ್ಶನ್​ ದೊಡ್ಡಣ್ಣ, ಸಲಹೆ ಕೊಡ್ತಾನೆ ಜೊತೆ ಬೈತಾನೆ ಎಂದು ಸುಮಲತಾ ಹೇಳಿ ದರ್ಶನ್ ಗೆ ಮಗನ ಸ್ಥಾನ ನೀಡಿದ್ದಾರೆ. ಅದನ್ನು ನಟ ದರ್ಶನ್ ಉಳಿಸಿಕೊಂಡಿದ್ದಾರೆ ಕೂಡಾ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.