ಮದುವೆಯಾಗಿ ಒಂದೇ ವಾರಕ್ಕೆ ಪತ್ನಿಯ ಸು.ಖದಾಟ ಕಣ್ಣಾರೆ ಕಂಡ ಪತಿ, ತಲೆಕೆಡಿಸಿಕೊಂಡ ಹೆಂಡತಿ

 | 
Hjs

ಪ್ರೀತಿ ಮಾಯೆ ಹುಷಾರು ಅಂತ ಸುಮ್ನೆ ಹೇಳಿಲ್ಲ.ಪ್ರೀತಿಸಿ ಕೈಕೊಡುವುದರ ಜೊತೆಗೆ ಮದುವೆ ಮುರಿದ ಪಾಗಲ್ ಪ್ರೇಮಿ ಈಗ ಎಸ್ಕೇಪ್ ಆಗಿದ್ದಾನೆ. ಯುವಕನ ಹುಚ್ಚಾಟಕ್ಕೆ ಕುಟುಂಬಸ್ಥರು, ಸ್ಥಳೀಯರು ಯುವತಿಯ ಬೆನ್ನಿಗೆ ನಿಂತಿದ್ದು ಯುವತಿ ಪಾಗಲ್ ಪ್ರೇಮಿಯ ಮನೆ ಮುಂದೆ ನ್ಯಾಯಕ್ಕಾಗಿ ಇಡೀ ರಾತ್ರಿ ಪ್ರತಿಭಟನೆಗೆ ಕುಳಿತಿದ್ದಾರೆ.

ಬೆಳಗಾವಿ  ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಲವ್ ಸೆಕ್ಸ್ ದೋಖಾ ಪ್ರಕರಣ ನಡೆದಿದೆ. ಕಿತ್ತೂರು ಪಟ್ಟಣದ ನೇಕಾರ ಕಾಲೋನಿ ನಿವಾಸಿ ಮುತ್ತುರಾಜ್ ಇಟಗಿ ಎಂಬಾತ ಯುವತಿ ಬಾಳು ಹಾಳು ಮಾಡಿದವ. ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಯುವಕನೂ ಕೈಕೊಟ್ಟ, ಸಪ್ತಪದಿ ತುಳಿದ ಗಂಡನೂ ನೀ ನನಗೆ ಬೇಡ ಎಂದಿದ್ದು ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿಯ ಕುಟುಂಬ ಬೀದಿಗೆ ಬಂದಿದೆ.

ಕಳೆದ ಆರು ವರ್ಷಗಳಿಂದ ತಮ್ಮ ಮನೆಯ ಪಕ್ಕದ ಮನೆಯ ಯುವತಿಯನ್ನು ಪ್ರೀತಿಸುತ್ತಿದ್ದ ಮುತ್ತುರಾಜ್ ಮದುವೆ ಆಗುವುದಾಗಿ ನಂಬಿಸಿ ಆಕೆಯ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದನು. ಸಾಲದೆಂಬಂತೆ ಇಬ್ಬರ ಖಾಸಗಿ ವೀಡಿಯೋ, ಫೋಟೋಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದನು. ಆರು ವರ್ಷಗಳ ಕಾಲ ಯುವತಿ ಜೊತೆಗೆ ಸುತ್ತಾಡಿ ಕುಟುಂಬಸ್ಥರು ಮದುವೆಗೆ ಒಪ್ಪುತ್ತಿಲ್ಲ. ನೀನು ಬೇರೆ ಮದುವೆ ಆಗು ಎಂದು ದಿಢೀರ್ ಮದುವೆ ಆಗಲ್ಲವೆಂದು ಕೈ ಎತ್ತಿದ್ದಾನೆ. ಬಳಿಕ ಪೋಷಕರು ತೋರಿಸಿದ್ದ ವರನ ಜೊತೆಗೆ ಕೆಲ ದಿನಗಳ ಹಿಂದಷ್ಟೇ ಖಾನಾಪುರ ತಾಲೂಕಿನ ಯುವಕನ ಜೊತೆಗೆ ಯುವತಿಯ ವಿವಾಹ ಆಗಿತ್ತು.

ಸಾಲಸೋಲ ಮಾಡಿದ ಪೋಷಕರು, ಪುತ್ರಿಯ ಮದುವೆ ಮಾಡಿಕೊಟ್ಟಿದ್ದರು.ಮದುವೆ ಆದ ಮೊದಲ ದಿನವೇ ವರನ ಮನೆಯಲ್ಲಿ ಪಾಗಲ್ ಪ್ರೇಮಿಯ ಹೈಡ್ರಾಮಾ ಮಾಡಿದ್ದು, ಗಂಡನ ಮನೆಗೆ ಹೋಗಿ ವರನ ಸಂಬಂಧಿಗೆ ಯುವತಿ ಜೊತೆಗಿನ ಖಾಸಗಿ ವೀಡಿಯೋ ಶೇರ್ ಮಾಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಯುವತಿ ಪೋಷಕರ ಜೊತೆಗೆ ವರನ ಪೋಷಕರು ವಾಗ್ವಾದ ನಡೆಸಿದ್ದಾರೆ. 

ಮದುವೆ ಆದ ಮೊದಲ ದಿನವೇ ನೀ ನನಗೆ ಬೇಡವೆಂದು ತವರು ಮನೆಗೆ ವಧುವನ್ನ ಕಳುಹಿಸಿದ್ದಾರೆ. ತಮ್ಮದೇ ನೂತನ ಮನೆಯ ಗೃಹ ಪ್ರವೇಶ ಇದ್ದರೂ ಗೈರಾಗಿ ಎಸ್ಕೆಪ್ ಆಗಿದ್ದಾನೆ‌‌. ಇನ್ನು ನ್ಯಾಯ ಕೊಡಿಸುವಂತೆ ಎರಡ್ಮೂರು ಸಲ ಕಿತ್ತೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಕಿತ್ತೂರು ಪಿಎಸ್ ಐ ಸಕಾರಾತ್ಮಕ ಸ್ಪಂದನೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಜೀವನ ಹಾಳು ಮಾಡಿದ ಪಾಗಲ್ ಪ್ರೇಮಿ ಮುತ್ತುರಾಜ್ ಮನೆ ಎದುರು ಯುವತಿ ಪ್ರತಿಭಟನೆಗೆ ಮುಂದಾಗಿದ್ದು, ಯುವತಿ ಮನೆ ಎದುರು ಬರುತ್ತಿದ್ದಂತೆಯೇ‌ ಮುತ್ತುರಾಜ್‌ನ ಸಹೋದರಿಯರು ಬಾಗಿಲು ಹಾಕಿಕೊಂಡು ಒಳಗೆ ಕುಳಿತುಕೊಂಡಿದ್ದಾರೆ. ಈ ವೇಳೆ ಮುತ್ತುರಾಜ್ ಪೋಷಕರು, ಸಹೋದರಿಯರ ವಿರುದ್ಧ ಯುವತಿ ಪೋಷಕರ ಆಕ್ರೋಶ ವ್ಯಕ್ತಪಡಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.