ದೋಸೆ ಮಾರಿ ದಿನಕ್ಕೆ ಮೂರು ಸಾವಿರ ಸಂಪಾದನೆ ಮಾಡುತ್ತಿರುವ ಮಹಿಳೆ

 | 
Hhh

ಬದುಕಿನಲ್ಲಿ ಯಾವಾಗ ಏನು ಸಂಭವಿಸುತ್ತದೆ ಎಂದು ಹೇಳಲಾಗದು ಹೌದು ಇಲ್ಲೊಬ್ಬ ಮಹಿಳೆ ಎಂಬಿಎ ಮುಗಿಸಿ ಐಟಿ ಕಂಪನಿ ಒಂದರಲ್ಲಿ ನೆಮ್ಮದಿಯಾಗಿ ದುಡಿದು ನೆಮ್ಮದಿಯ ಜೀವನ ನಡೆಸುತ್ತಿದ್ದಾಗ ಬದುಕು ಅವರ ಬದುಕನ್ನೇ ಬದಲಿಸಿದೆ. ಹಲವರಿಗೆ ಆದರ್ಶ ಪ್ರಾಯವಾಗಿದೆ.

ಬೆಂಗಳೂರು ಮೂಲದ ವೀಣಾ ಅವರು ಹುಟ್ಟಿದ್ದು ಬೆಳೆದಿದ್ದು ಎಂಬಿಎ ಓದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೆ ಓದಿ ಮುಗಿಯುತ್ತಿದ್ದಂತೆ ಐಟಿ ಕಂಪನಿ ಒಂದರಲ್ಲಿ ಒಳ್ಳೆಯ ಸಂಬಳ ಪಡೆದು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ ಕಾಡುವ ಕಾಲು ನೋವು ಅವರನ್ನು ನೆಮ್ಮದಿಯಾಗಿ ಏಳೆಂಟು ತಾಸು ಕೆಲಸ ಮಾಡಲು ಕೂರಲು ಬಿಡುತ್ತಿರಲಿಲ್ಲ.

ಹಾಗಾಗಿ ವೀಣಾ ಐಟಿ ಕಂಪನಿಯ ಕೆಲಸಕ್ಕೆ ಗುಡ್ ಬೈ ಹೇಳಿ ಏನು ಮಾಡುವದು ಎಂದು ಯೋಚಿಸಿ ತಮ್ಮದೇ ಸ್ವಂತ ಉದ್ಯೋಗ ಮಾಡಬೇಕೆಂದು ಬಯಸಿ ರೋಡ್ ಸೈಡ್ ಅಲ್ಲಿ ದೋಸೆ ಅಂಗಡಿ ತೆರೆದು ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಸಾಗಿದರು. ಇನ್ನು 2012 ರಲ್ಲಿ ನಡೆದ ಒಂದು ಅಕ್ಸಿಡೆಂಟ್ ಅಲ್ಲಿ ಇವರ ಕಾಲ ಮೇಲೆ ಬಿಎಂಟಿಸಿ ಬಸ್ ಹತ್ತಿ ಹೋಗಿದ್ದ ಪರಿಣಾಮ ಕಾಲು ಟ್ವಿಸ್ಟ್ ಅಗಿತ್ತು. 

ಹಾಗಾಗಿ ಆ ನೋವು ಮತ್ತೆ ಕಾಡುತ್ತದೆ ಎಂದೇ ವೀಣಾ ಅವರು ಯಾರ ಅಡಿಯಲ್ಲಿ ಕೆಲಸ ಮಾಡಲು ಬಯಸದೆ ಸ್ವಂತ ಉದ್ಯೋಗ ಮಾಡಲು ಶುರು ಮಾಡಿದರು. ಇದೀಗ ವಿವಿಧ ಬಗೆಯ ದೋಸೆಗಳನ್ನು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿ ಪ್ರತಿದಿನ ಮೂರು ಸಾವಿರಕ್ಕೂ ಹೆಚ್ಚು ಹಣ ದುಡಿಯುತ್ತಿದ್ದಾರೆ. ಈ ತನಕ ಇವರಿಗೆ ಯಾಕಾದ್ರು ಕೆಲಸಾ ಬಿಟ್ಟೆ ಎನ್ನುವ ಭಾವ ಮೂಡಿಯೆ ಇಲ್ಲ ಎಂದು ಅವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.