ಸೀರೆ ಬಿಚ್ಚಿ ಮಿಡಿ ಹಾಕಿಕೊಂಡ ಭಾಗ್ಯ, ಇನ್ಮುಂದೆ ಸೀರಿಯಲ್ ನೋಡಲ್ಲ ಎಂದ ಮಹಿಳಾ ಮಣಿಗಳು
Updated: Nov 6, 2024, 07:14 IST
|

ಅವಮಾನ ಸಹಿಸಲಾಗದೇ ಭಾಗ್ಯ ಮತ್ತು ಮನೆಯವರು ನಾಚಿಕೆಯಿಂದ ತಲೆ ತಗ್ಗಿಸಿ ಕುಗ್ಗಿ ಹೋಗುವುದನ್ನು ನೋಡಿ ಖುಷಿ ಪಡುವ ಕನಸು ಕಾಣುತ್ತಿದ್ದ ತಾಂಡವ್. ಆದ್ರೆ ಅಲ್ಲಿ ಆದದ್ದೇ ಬೇರೆ! ಭಾಗ್ಯ ಡ್ರೆಸ್ ಹಾಕಿಕೊಳ್ಳದೇ ಲಕ್ಷಣವಾಗಿ ಸೀರೆಯುಟ್ಟು ಬಂದಳು. ಇದನ್ನು ನೋಡಿ ಬಂದವರು ಹಾಗೂ ತಾಂಡವ್ ಸ್ಥಿತಿ ಇಂಗು ತಿಂದ ಮಂಗನಂತಾಗಿದ್ದರೆ, ಕುಸುಮಾ, ಪೂಜಾ, ಸುಂದ್ರಿ ಎಲ್ಲರಿಗೂ ತಾಂಡವ್ ಕೊಟ್ಟ ಡ್ರೆಸ್ ಭಾಗ್ಯ ಹಾಕಲಿಲ್ಲ ಎನ್ನುವ ಸಿಟ್ಟು ಬಂದಿದೆ.
ಆದ್ರೆ ಸೀರಿಯಲ್ ಏನೇ ಆಗಿರಲಿ, ಈಗ ಅದೇ ಡ್ರೆಸ್ ಅನ್ನು ಭಾಗ್ಯ ಅರ್ಥಾತ್ ಸುಷ್ಮಾ ಕೆ. ರಾವ್ ಅವರು ಧರಿಸಿಕೊಂಡು ರೀಲ್ಸ್ ಮಾಡಿದ್ದಾರೆ. ಭಾಗ್ಯಳನ್ನು ಮಿನಿ ಡ್ರೆಸ್ನಲ್ಲಿ ನೋಡಲು ಕಾತರರಾಗಿದ್ದವರಿಗೆ ಬೇಸರ ಆಗಿದ್ದರಿಂದ ಈಗ ಅದೇ ಡ್ರೆಸ್ ತೊಟ್ಟು ಸುಷ್ಮಾ ಕಾಣಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರೋ ನಟಿ, ಇದೀಗ ಸೀರಿಯಲ್ ಗಂಡ ಕೊಟ್ಟ ಉಡುಗೆಯನ್ನು ರಿಯಲ್ ಆಗಿ ಹಾಕಿಕೊಂಡು ಅಭಿಮಾನಿಗಳ ಎದುರು ಕಾಣಿಸಿಕೊಂಡಿದ್ದಾರೆ.
ತುಂಬಾ ಕ್ಯೂಟ್ ಆಗಿ ಕಾಣಿಸೋ ಸುಷ್ಮಾ ಅವರನ್ನು ನೋಡಿ ಅಭಿಮಾನಿಗಳಿಂದ ಲವ್ ಇಮೋಜಿಗಳ ಸುರಿಮಳೆಯಾಗುತ್ತಿದೆ. ಇದನ್ನೇನಾದ್ರೂ ತಾಂಡವ್ ನೋಡಿದ್ರೆ, ಶ್ರೇಷ್ಠಾಳನ್ನು ಬಿಟ್ಟು ಓಡಿ ಬರೋದು ಗ್ಯಾರೆಂಟಿ ಅಂತಿದ್ದಾರೆ ಅಭಿಮಾನಿಗಳು.ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ.ಇವರಿಗೆ ಈಗ 38 ವರ್ಷ ವಯಸ್ಸು.
ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023