ಇಲ್ಲಿನ ಮಹಿಳೆಯರನ್ನು ಮದುವೆ ಮುನ್ನ ಗ‌.ರ್ಭಿಣಿ ಮಾಡಿದರೆ ಮಾತ್ರ ಮದುವೆಗೆ ಅವಕಾಶ

 | 
Ueu

ಮದುವೆ ಅನ್ನೋದು ಜೀವನದ ಪ್ರಮುಖ ಘಟ್ಟ. ಮದುವೆ ಸಂಪ್ರದಾಯಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತವೆ. ಆದ್ರೆ ಈ ಪ್ರದೇಶದ ಮಹಿಳೆಯರು ಮದುವೆಗೂ ಮುಂಚೆಯೇ ತಾಯಿ ಆಗುತ್ತಾರೆ. ಹೌದು ಅಚ್ಚರಿ ಆದರೂ ಸತ್ಯವಿದು.ಮದುವೆಗೆ ಮುಂಚೆಯೇ ಜೊತೆಯಾಗಿರೋ ಟ್ರೆಂಡ್ ಮಹಾನಗರಗಳಲ್ಲಿ ಶುರುವಾಗಿದೆ. 

ಇದನ್ನ ಲಿವ್ ಇನ್ ರಿಲೇಶನ್​ಶಿಪ್ ಎಂದು ಕರೆಯಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಲಿವ್-ಇನ್ ಸಂಬಂಧಗಳು ಕಂಡು ಬರುತ್ತಿರುತ್ತವೆ. ಆದರಲ್ಲಿಯೂ ಬುಡಕಟ್ಟು ಸಮುದಾಯವೊಂದರಲ್ಲಿ ಲಿವ್-ಇನ್ ಸಂಬಂಧವನ್ನುಎಲ್ಲರೂ ಒಪ್ಪುತ್ತಾರಂತೆ.ಈ ಬುಡಕಟ್ಟು ಸಮುದಾಯದಲ್ಲಿ ಲಿವ್ ಇನ್ ಸಂಬಂಧಗಳು ತುಂಬಾ ಸಾಮಾನ್ಯ. 

ಈ ಸಂಬಂಧದ ಮೂಲಕ ತಮ್ಮ ಸಂಗಾತಿಯನ್ನು ಇಲ್ಲಿಯ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಗರಾಸಿಯಾ ಬುಡಕಟ್ಟುಗಳ ಜನರು ರಾಜಸ್ಥಾನ ಮತ್ತು ಗುಜರಾತ್‌ನ ಹೆಚ್ಚಿನ ಭಾಗಗಳಲ್ಲಿ ವಾಸಿಸುತ್ತಾರೆ. ಈ ಬುಡಕಟ್ಟಿನ ಹೆಚ್ಚಿನ ಮಹಿಳೆಯರು ಮದುವೆಗೆ ಮುಂಚೆಯೇ ತಾಯಂದಿರಾಗುತ್ತಾರೆ. ನಂತರ ಆ ಸಂಗಾತಿಯೊಂದಿಗೆ ಮದುವೆಯಾಗಿ ಸಾಂಸರಿಕ ಜೀವನ ನಡೆಸುತ್ತಾರೆ.

ಈ ಬುಡಕಟ್ಟಿನಲ್ಲಿಯ ಪುರುಷರು ಮತ್ತು ಮಹಿಳೆಯರು ಮದುವೆಗೂ ಮುನ್ನವೇ ಜೊತೆಯಾಗಿ ವಾಸಿಸಲು ಆರಂಭಿಸುತ್ತಾರೆ. ಆದ್ದರಿಂದ ಮದುವೆಗೂ ಮೊದಲೇ ತಾಯಿ ಆಗುತ್ತಾರೆ. ಈ ಬುಡಕಟ್ಟಿನಲ್ಲಿ . ಮಹಿಳೆಯರಿಗೆ ಪುರುಷ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ.ಈ ಸಮುದಾಯದಲ್ಲಿ ಮದುವೆಗಾಗಿಯೇ ಎರಡು ದಿನದ ಜಾತ್ರೆಯನ್ನು ಆಚರಿಸಲಾಗುತ್ತದೆ. ಇಲ್ಲಿ ಸಂಗಾತಿ ಆಯ್ಕೆಗಾಗಿ ಮೇಳವನ್ನು ನಡೆಸಲಾಗುತ್ತದೆ. ಈ ಮೇಳದಲ್ಲಿ ಭಾಗಿಯಾಗಲಿ ಹೆಚ್ಚಿನ ಸಂಖ್ಯೆಯ ಯುವಕ ಮತ್ತು ಯುವತಿಯರು ಸೇರುತ್ತಾರೆ. ಇಲ್ಲಿ ಯುವತಿಗೆ ಯಾರಾದ್ರು ಇಷ್ಟವಾದ್ರೆ ಆತನೊಂದಿಗೆ ವಾಸಿಸಲು ಆರಂಭಿಸುತ್ತಾರೆ.