ಮಹಿಳೆಯರ ಯೋನಿ ಪೂಜೆಯ ದೇವಾಲಯ, ಶಾಕ್ ಅದ ಕನ್ನಡಿಗರು

 | 
ಸಮ

ಅಸ್ಸಾಂನ ಗುವಾಹಟಿಯ ನೀಲಾಚಲ ಬೆಟ್ಟದಲ್ಲಿರುವ ಕಾಮಾಕ್ಯದೇವಿ ದೇವಸ್ಥಾನ 51 ಶಕ್ತಿ ಪೀಠಗಳಲ್ಲಿ ಒಂದು. ಸಂತಾನ ಬಯಸುವವರಿಗೆ ವರವನ್ನು ಕರುಣಿಸುವ ಶಕ್ತಿ ಮಾತೆ. ಸತಿದೇವಿಯ ಅಕಾಲಿಕ ಮರಣದಿಂದ ದುಃಖಿತನಾದ ಶಿವ ತಾಂಡವ ನೃತ್ಯ ಮಾಡುತ್ತಾನೆ. ಅದರಿಂದ ಇಡೀ ಬ್ರಹ್ಮಾಂಡ ಅಲ್ಲೋಲ ಕಲ್ಲೋಲವಾಗುತ್ತದೆ.

ಇದನ್ನು ಶಾಂತಗೊಳಿಸಲು ವಿಷ್ಣುದೇವ ಸುದರ್ಶನ ಚಕ್ರವನ್ನು ಬಳಸುತ್ತಾನೆ. ಸತಿದೇವಿಯ ದೇಹ 51 ಭಾಗಗಳಾಗಿ ಬೇರೆ ಬೇರೆ ಸ್ಥಳಗಳಲ್ಲಿ ಬೀಳುತ್ತದೆ. ದೇವಿಯ ದೇಹ ಭಾಗಗಳು ಬಿದ್ದ ಸ್ಥಳಗಳು ಶಕ್ತಿ ಪೀಠಗಳಾಗುತ್ತವೆ. ಸತಿಯ ಯೋನಿ ಭಾಗ ಬಿದ್ದ ಸ್ಥಳದಲ್ಲಿ ಕಾಮಾಕ್ಯ ದೇವಿಯ ನೆಲೆಯಾಗುತ್ತದೆ.
ತಾಯಿಯು ಪ್ರತಿವರ್ಷ ಜೂನ್‌ ತಿಂಗಳ 2ನೇ ವಾರದಲ್ಲಿ ರಜಸ್ವಲೆ ಆಗುತ್ತಾಳೆ. 

ಆ ಸಮಯದಲ್ಲಿ ದೇವಾಲಯವನ್ನು ಮೂರು ದಿನ ತೆರೆಯುವುದಿಲ್ಲ. 4ನೇ ದಿನದಂದು ದೇವಾಲಯ ಶುಚಿಗೊಳಿಸಿ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ. ಆ ಸಮಯದಲ್ಲಿ ನಡೆಯುವ ಉತ್ಸವವನ್ನು ಅಭುಬಾಚಿ ಮೇಳ ಎಂದು ಕರೆಯಲಾಗುತ್ತದೆ. ಸಹಜವಾಗಿಯೇ ಆ ದಿನಗಳಲ್ಲಿ ಅಲ್ಲಿ ಒಸರುವ ನೀರು ಹರಿಯುತ್ತದೆ. ಕಲ್ಲಿನಾಕಾರದ ಯೋನಿಯೇ ಕಾಮಾಕ್ಯ ದೇವಿಯ ನಿವಾಸ ಎಂದು ಹೇಳಲಾಗುತ್ತದೆ. ಹತ್ತಿರದಲ್ಲಿ ಗಣೇಶ, ಸರಸ್ವತಿ ವಿಗ್ರಹವನ್ನು ಕಾಣಬಹುದು. 

ಕಾಮಾಕ್ಯ ದೇವಿ ದರ್ಶನ ಮಾಡುವ ಮೊದಲು ಲಿಂಗ ಸ್ವರೂಪಿಯಾಗಿರುವ ಲಿಂಗವನ್ನು ದರ್ಶನ ಮಾಡಿಕೊಳ್ಳಬೇಕು. ಕಾಮಾಕ್ಯ ದೇವಿಯನ್ನು ಮಾತ್ರ ದರ್ಶನ ಮಾಡಿ ಲಿಂಗವನ್ನು ದರ್ಶನ ಮಾಡದಿದ್ದರೆ ಯಾತ್ರೆ ಪೂರ್ತಿಯಾಗುವುದಿಲ್ಲ ಎಂದು ಭಕ್ತರು ಭಾವಿಸುತ್ತಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.