ಮೂರನೇ ಮಗುವಿನತ್ತ ಯಶ್ ದಂಪತಿಗಳು, ಹೊಸ ವರ್ಷಕ್ಕೆ ಸಿಹಿಸುದ್ದಿ ಸಂಭ್ರಮ
Dec 31, 2024, 07:39 IST
|
ಭಾರತದ ಸೂಪರ್ ಸ್ಟಾರ್ ಯಶ್ ಅವರು ಇದೀಗ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಎರಡನೇ ಮಗುವಿಗೆ ಜನ್ಮ ಕೊಟ್ಟಿದ್ದ ರಾಧಿಕಾ ಪಂಡಿತ್, ನಂತರದಲ್ಲಿ ಮಗುವಿನ ವಿಚಾರಕ್ಕೆ ಹೋಗಿರಲಿಲ್ಲ.
ಆದರೆ, ಇದೀಗ ಈ ಜೋಡಿ ಮೂರನೇ ಸಿಹಿಸುದ್ದಿಯತ್ತ ಕಾಲಿಟ್ಟಿದ್ದಾರೆ. ಇನ್ನು ಹೊಸವರ್ಷದ ಸಂಭ್ರಮದಲ್ಲಿ ಯಶ್ ದಂಪತಿಯಿಂದ ಮೂರನೇ ಸಿಹಿಸುದ್ದಿಗೆ ಇಡೀ ಕುಟುಂಬವೇ ಎದುರು ನೋಡುತ್ತಿದೆ. ಇನ್ನು ಇದರ ಜೊತೆಗೆ ಯಶ್ ಅವರ ಮುಂದಿನ ಸಿನಿಮಾ Toxic 2025 ರಲ್ಲಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಯಶ್ ಅವರ ಕಡೆಯಿಂದ ಈ ಬಾರಿ ಡಬ್ಬಲ್ ಧಮಾಕಾ ಎನ್ನಬಹುದು.
ಇನ್ನು ಯಶ್ ಅವರು ಸದ್ಯಕ್ಕೆ Toxic ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪತ್ನಿ ಹಾಗೂ ಮಕ್ಕಳ ಜೊತೆ ಬಿಡುವಿನ ಸಮಯದಲ್ಲಿ ಕಾಲಕಳೆಯುತ್ತಿದ್ದಾರೆ. ಇನ್ನು ಯಶ್ ಅವರಿಗೆ ಮಕ್ಕಳು ಎಂದರೆ ಬಹುಪ್ರೀತಿ ಹಾಗಾಗಿ ಮೂರನೇ ಸಿಹಿಸುದ್ದಿ ಪಕ್ಕಾ ಎನುತ್ತಾರೆ ಅಭಿಮಾನಿಗಳು.