ಯಶ್ ದರ್ಶನ್ ಸುದೀಪ್ ನಿರ್ದೇಶಕ ಇನ್ನಿ ಲ್ಲ, ಕರುನಾಡಿಗೆ ನುಂಗಲಾದ ನಷ್ಟ

 | 
Hii
ಸ್ಯಾಂಡಲ್​ವುಡ್​ನ ಹಿರಿಯ ನಿರ್ದೇಶಕ, ಅವಳೇ ನನ್ನ ಹೆಂಡತಿ ಸಿನಿಮಾ ಖ್ಯಾತಿಯ ಎಸ್. ಉಮೇಶ್ ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ನಿಧನ ಹೊಂದಿದ್ದು ಬನಶಂಕರಿಯ ಚಿತಾಗಾರದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ.
ದಿವಂಗತ ನಟ ಕಾಶಿನಾಥ್ ಹಾಗೂ ಭವ್ಯ ಅವರು ಅಭಿನಯ ಮಾಡಿದ್ದ ಅವಳೇ ನನ್ನ ಹೆಂಡತಿ ಸಿನಿಮಾವನ್ನು ನಿರ್ಮಾಪಕ ಕೆ.ಪ್ರಭಾಕರ್ ಜೊತೆ ಸೇರಿ ಎಸ್​.ಉಮೇಶ್ ಅವರು ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಮೂಲಕವೇ ಇವರು ಹೆಚ್ಚು ಪ್ರಖ್ಯಾತಿ ಗಳಿಸಿದರು. ಈ ಸಿನಿಮಾ ದೊಡ್ಡ ಹಿಟ್ ಆಗಿದ್ದಲ್ಲದೆ, ತಮಿಳು, ತೆಲುಗು, ಹಿಂದಿಗೂ ರಿಮೇಕ್ ಆಗಿತ್ತು. ಇದಾದ ಮೇಲೆ ಪ್ರೇಮ ಪರೀಕ್ಷೆ, ಬನ್ನಿ ಒಂದ್ಸಲ ನೋಡಿ, ಸಿಡಿದೆದ್ದ ಗಂಡು, ದಾಯಾದಿ, ತುಂಬಿದ ಮನೆ ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ 24 ಚಿತ್ರಗಳನ್ನು ನೀಡಿದ್ದಾರೆ.
ಕನ್ನಡ ಮಾತ್ರವಲ್ಲದೆ, ತಮಿಳಲ್ಲೂ ಫೇಮಸ್ ಆಗಿದ್ದ ಉಮೇಶ್‌ ಅವರು, ವೃತ್ತಿ ಜೀವನದಲ್ಲಿ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ, ಈಚೆಗೆ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಚಿಕಿತ್ಸೆ ಪಡೆಯಲು ಕೂಡ ಅವರ ಬಳಿ ಹಣವಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ದಾನಿಗಳಿಂದ ಹಣಕಾಸಿನ ನೆರವನ್ನು ಕೋರಿದ್ದರು. ಆಗ ಅವರ ಸಂಕಷ್ಟಕ್ಕೆ ಲಹರಿ ಮ್ಯೂಸಿಕ್ ಸಂಸ್ಥೆಯ ಮನೋಹರ್ ನಾಯ್ಡು, ಲಹರಿ ವೇಲು ನೆರವಾಗಿದ್ದರು. ಹರ್ಷಿಕಾ ಪೊಣಚ್ಚ ಅವರ ಪತಿ ಭುವನ್ ಪೊನ್ನಣ್ಣ ಸಹಾಯ ಮಾಡಿದ್ದರು. ಆದರೆ ಇದೀಗ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
​ಎಸ್ ಉಮೇಶ್ ಆರಂಭದಲ್ಲಿ ಸಹಾಯಕ ನಿರ್ದೇಶಕರಾಗಿ 1974ರಲ್ಲಿ ಸ್ಯಾಂಡಲ್​ವುಡ್​ಗೆ ಬಂದಿದ್ದರು. ಸಹಾಯಕ ನಿರ್ದೇಶಕರಾಗಿದ್ದ ಇವರು ಮುಂದೆ ನಿರ್ದೇಶಕರಾದರು. ಈ ವೇಳೆ ಕಾಶಿನಾಥ್ ಅವರ ನಟನ ನೆಚ್ಚಿ 1988ರಲ್ಲಿ ಅವರ ಜೊತೆ ಕೆಲಸ ಮಾಡಿದರು. ಅವಳೇ ನನ್ನ ಹೆಂಡ್ತಿ ಸಿನಿಮಾದಲ್ಲಿ ಕಾಶಿನಾಥ್ ಅದ್ಭುತ ಅಭಿನಯದ ಮೂಲಕ ಎಲ್ಲರ ಗಮನೆ ಸೆಳೆದರು. 
ಇದರ ಕ್ರೇಡಿಟ್ ಎಲ್ಲ ಎಸ್​ ಉಮೇಶ್ ಅವರಿಗೆ ಸಲ್ಲಬೇಕು. ಏಕೆಂದರೆ ಈ ಮೂವಿ ಜನರ ಮನ ಗೆದ್ದಿತ್ತು. ಎಸ್.ಉಮೇಶ್​ಗೂ ಖ್ಯಾತಿ ತಂದುಕೊಟ್ಟಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.