'ಬಡವನ ಗೂಡಾಂಗಡಿಯಲ್ಲಿ ಹೆಂಡತಿಗೆ ಐಸ್ ಕ್ಯಾಂಡಿ ತಿನ್ನಿಸಿದ ಯಶ್' ಮೆಚ್ಚಿಕೊಂಡ ಕನ್ನಡಿಗರು

 | 
Jjfvv

ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ನಟಿ ರಾಧಿಕಾ ಪಂಡಿತ್‌ ಅವರು ಕಿರಾಣಿ ಅಂಗಡಿ ಮುಂದೆ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ವೈರಲ್ ಆಗಿದೆ.ತಾರಾ ದಂಪತಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿರುವ ಚಿತ್ರಾಪುರ ಮಠಕ್ಕೆ ಮೊನ್ನೆ ಭೇಟಿ ನೀಡಿದ್ದರು. ಮಠದೊಳಗೆ ಧಾರ್ಮಿಕ ವಿಧಿ ವಿಧಾನ ಮುಗಿಸಿ ಸ್ವಾಮೀಜಿ ಬಳಿ ಮಾತನಾಡಿ ಹೊರಗೆ ಬಂದಾಗ ಅಭಿಮಾನಿಗಳು ಯಶ್-ರಾಧಿಕಾರನ್ನು ನೋಡಲು ಜಮಾಯಿಸಿದ್ದರು.

ಯಶ್, ಮಗಳು ಐರಾ ಹಾಗೂ ರಾಧಿಕಾ ತಂದೆ ಕಿರಾಣಿ ಅಂಗಡಿಗೆ ಭೇಟಿ ಕೊಟ್ಟಿದ್ದಾರೆ. ಫೋಟೊದಲ್ಲಿ ಮಗಳು ಐರಾಗೆ ಯಶ್ ಏನೋ ತಿನಿಸು ಕೊಡಿಸುತ್ತಿದ್ದಾರೆ. ಇನ್ನು ರಾಧಿಕಾ ಪಂಡಿತ್‌ ಸಾಮಾನ್ಯರಂತೆ ಕಟ್ಟೆ ಮೇಲೆ ಕುಳಿತು ಐಸ್ ಕ್ರೀಮ್ ಸವಿಯುತ್ತಿದ್ದಾರೆ. ರಾಕಿಂಗ್ ದಂಪತಿ ಸಾಮಾನ್ಯರಂತೆ ಕಿರಾಣಿ ಅಂಗಡಿಯಲ್ಲಿ ಖರೀದಿಸುತ್ತಿರುವ ಫೋಟೊ ಕಂಡು ಫ್ಯಾನ್ಸ್ ಬಹಳ ಖುಷಿಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯಲ್ಲಿ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ ಯಶ್ ಅವರು ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಮಠದ ಸುತ್ತ ಯಶ್ ಅಭಿಮಾನಿಗಳು ನೆರೆದಿದ್ದರು. ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದರು. ಚಿತ್ರಾಪುರ ಮಠಕ್ಕೆ ಭೇಟಿ ಕೊಟ್ಟ ಯಶ್ ದಂಪತಿಯನ್ನು ನೋಡಲು ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿತ್ತು.

ಚಿತ್ರಪುರದ ಮಠದಲ್ಲಿ ಭವಾನಿ ಶಂಕರ ದೇವರನ್ನು ಪೂಜಿಸಲಾಗುವುದು. ಪರಮಶಿವನ ಅವತಾರವೇ ಭವನಿ ಶಂಕರ. ಈ ಮಠದಲ್ಲಿ 6 ಗುರುಗಳ ಸಮಾಧಿಯೂ ಇದೆ. ಅಷ್ಟೇ ಅಲ್ಲದೆ ಸರೋವರ, ಗೋಶಾಲೆಯೂ ಇದೆ.ನಟ ಯಶ್ ಅವರು ದೈವಭಕ್ತ. ಕುಟುಂಬದ ಜೊತೆಗೆ ಅವರು ಆಗಾಗ ದೇಗುಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇನ್ನು ಯಶ್ ಅವರು ಅಂಗಡಿಯೊಂದರಲ್ಲಿ ಮಕ್ಕಳಿಗೆ ಚಾಕೋಲೇಟ್, ಪತ್ನಿ ರಾಧಿಕಾಗೆ ಐಸ್‌ಕ್ರೀಮ್ ಕೊಡಿಸಿದ್ದರು. ಯಶ್ ಅವರೇ ಈ ಪುಟ್ಟ ಅಂಗಡಿಗೆ ಹೋಗಿ ತಂದುಕೊಟ್ಟಿರೋದು ಅವರ ಸರಳತೆ ಎಂದು ವೀಕ್ಷಕರು ಅಭಿಪ್ರಾಯಪಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.