ಪತ್ನಿಯ ಆಸೆಗಾಗಿ ಗಡ್ಡ ಹಾಗೂ ಕೂದಲು ತೆಗೆದ ಯಶ್; ಹೊಸ ಲುಕ್ ಗೆ ಕನ್ನಡಿಗರು ಫಿದಾ
ದೇಶದ ಅತೀ ಶ್ರೀಮಂತ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ಮದುವೆ ಕಾರ್ಯಕ್ರಮಕ್ಕೆ ತಾರಾ ಮೆರುಗು ಹೆಚ್ಚಲಿದೆ. ಮೂರು ದಿನಗಳ ಈ ಮದುವೆಯಲ್ಲಿ ಪಾಲ್ಗೊಳ್ಳಲು ಕನ್ನಡದ ನಟ ಯಶ್ ತಮ್ಮ ಪತ್ನಿ, ನಟಿ ರಾಧಿಕಾ ಪಂಡಿತ್ ಜೊತೆ ಮುಂಬೈಗೆ ತೆರಳಿದ್ದಾರೆ.
ಈಗಾಗಲೇ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ಅವರ ಗೆಳತಿ ರಾಧಿಕಾ ಮರ್ಚೆಂಚ್ ಮದುವೆಯಲ್ಲಿ ಪಾಲ್ಗೊಳ್ಳಲು ದೇಶ ವಿದೇಶಗಳಿಂದ ಸೆಲಬ್ರಿಟಿಗಳು ಮುಂಬೈ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾರೆ. ಹಾಲಿವುಡ್ ಸೆಲಬ್ರಿಟಿಗಳು, ಡಬ್ಲೂಡಬ್ಲೂಎಫ್‌ನ ಖ್ಯಾತಿಯ ಜಾನ್ ಸೀನಾ ಕೂಡ ಕಾಣಿಸಿಕೊಂಡಿದ್ದಾರೆ. ಈಗ ಎಲ್ಲರ ಗಮನ ನಟ ಯಶ್ ಮತ್ತು ರಾಧಿಕಾ ಪಂಡಿತ್ ಮೇಲೆ ನಿಂತಿದೆ.
ಅಂಬಾನಿ ಪುತ್ರನ ಅದ್ಧೂರಿ ವಿವಾಹದಲ್ಲಿ ಇಡೀ ಬಾಲಿವುಡ್ ಹಾಜರಾಗುವುದಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ದಕ್ಷಿಣ ಭಾರತದಿಂದ ಯಾವ ಯಾವ ನಟರು ಮದುವೆಯಲ್ಲಿ ಫೋಟೋಗೆ ಫೋಸ್ ನೀಡುತ್ತಾರೆ ಎಂಬುದನ್ನು ಅಭಿಮಾನಿಗಳು ಕಾತೂರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಬಳಿಕ ನಟ ಯಶ್ ಬಗ್ಗೆ ಬಾಲಿವುಡ್‌ನಲ್ಲಿ ಫಾನ್ ಫಾಲೋವಿಂಗ್ ಜಾಸ್ತಿಯಿದ್ದು, ಅವರನ್ನು ಅಂಬಾನಿ ಕುಟುಂಬದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಇನ್ನು, ಮುಂಬೈನಲ್ಲಿ ಕಾಣಿಸಿಕೊಂಡಿರುವ ಯಶ್ ಅವರ ಲುಕ್ ಸಕತ್ ಹವಾ ಎಬ್ಬಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ತಮ್ಮ ನೆಚ್ಚಿನ ನಟನ ಹೊಸ ಅವತಾರ ಕಂಡು ಅವರ ಮುಂಬರುವ ಸಿನಿಮಾದ ಬಗ್ಗೆ ತಮ್ಮದೆ ಊಹಾಪೋಹಗಳನ್ನು ಹರಿಯಬಿಡುತ್ತಿದ್ದಾರೆ.ಕೆಜಿಎಫ್ ಪಾತ್ರದ ಅವತಾರದಲ್ಲಿಯೇ ತುಂಬಾ ಕಾಲ ಕಾಣಿಸಿಕೊಂಡಿದ್ದ ನಟ ಯಶ್, ತಮ್ಮ ಲುಕ್ ಬದಲಿಸಿದ್ದಾರೆ. ಕಪ್ಪು ಉಡುಪಿನಲ್ಲಿ ಮತ್ತು ಹೊಸ ಗಡ್ಡದಲ್ಲಿ ಸೂಪರ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಲುಕ್ ನೋಡಿ ಅವರ ಫ್ಯಾನ್ಸ್ ಇದು 'ಟಾಕ್ಸಿಕ್' ಸಿನಿಮಾದ ಲುಕ್ ಎಂದು ಅಂದಾಜಿಸುತ್ತಿದ್ದಾರೆ. ಯಶ್ ಫೋಟೋಗಳು ಸೋಶೀಯಲ್ ಮಿಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದುಮ ಟಾಕ್ಸಿಕ್ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.