ಯಶ್ ಪ್ರಚಾರಕ್ಕೆ ಬರಲ್ಲ ಅಂದಿದ್ದೆ ತಡ; ಮಾಧ್ಯಮದ ಮುಂದೆ ರೊ.ಚ್ಚಿಗೆದ್ದ ಸುಮಲತಾ ಮೇಡಂ

 | 
Hh

ಸುಮಲತಾ & ಯಶ್ ಅವರ ನಡುವೆ ಅಮ್ಮ & ಮಗನ ಬಾಂಧವ್ಯ ಇದೆ. ಈ ಕಾರಣಕ್ಕಾಗಿ ಯಶ್ ಅವರು ಅಭಿಷೇಕ್ ಅಂಬರೀಶ್ ಅವರನ್ನು ತಮ್ಮ ಎಂದು ಕರೆಯುತ್ತಾರೆ. ಹೀಗಾಗಿ, ಅಭಿಷೇಕ್ ಅಂಬರೀಶ್ ಕೂಡ ಯಶ್ ಅವರನ್ನ 'ಅಣ್ಣಾ' ಎಂದೇ ಕರೆಯುತ್ತಾರೆ. ಇಷ್ಟೆಲ್ಲಾ ಹೊಂದಾಣಿಕೆ ಇರುವ ಯಶ್ & ಅಂಬರೀಶ್ ಅವರ ಕುಟುಂಬ ಒಂದೇ ಫ್ಯಾಮಿಲಿ ರೀತಿಯೆ ಇದೆ. 

ಹೀಗಿದ್ದಾಗ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲಿ ಮತ್ತೊಮ್ಮೆ ಲೋಕಸಭೆಗೆ ಸ್ಪರ್ಧೆ ಮಾಡಿದ್ರೆ ಯಶ್ ಪ್ರಚಾರಕ್ಕೆ ಹೋಗುತ್ತಾರಾ? ಇಲ್ವಾ? ಅವರೇ ಉತ್ತರಿಸಿದ್ದಾರೆ ಕೇಳಿ.ಕರ್ನಾಟಕದಲ್ಲಿ ಬಿಜೆಪಿ & ಜೆಡಿಎಸ್ ನಡುವೆ ದೋಸ್ತಿ ಮಾತುಕತೆ ನಡೆಯುತ್ತಿದೆ. ಈ ಕಾರಣ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ಬಿಜೆಪಿ ಕಡೆಯಿದ ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ಸಿಗುವುದು ಬಹುತೇಕ ಅನುಮಾನ. ಹೀಗಾಗಿ ಸುಮಲತಾ ಅಂಬರೀಶ್ ಅವರು ಈಗ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಅಖಾಡಕ್ಕೆ ಇಳಿಯೋಕೆ ಎಲ್ಲಾ ರೀತಿ ದ್ಧತೆ ನಡೆಸಿದ್ದಾರೆ.

ಹೀಗಿದ್ದಾಗಲೇ ಕಳೆದ ಬಾರಿಯಂತೆ ನಟ ಯಶ್ & ದರ್ಶನ್ ಈ ಬಾರಿ ಕೂಡ ಸುಮಲತಾ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಾರಾ? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆಗೆ ಖುದ್ದು ಯಶ್ ಅವರೇ ಉತ್ತರವನ್ನೂ ಈಗ ನೀಡಿದ್ದಾರೆ.ಅಷ್ಟಕ್ಕೂ, ಗಣಿನಾಡು ಬಳ್ಳಾರಿ ಜಿಲ್ಲೆಯ ಅಮೃತೇಶ್ವರ ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಬಂದು ದೇವರಿಗೆ ನಮಿಸಿದರು ರಾಕಿಂಗ್ ಸ್ಟಾರ್ ಯಶ್. ಇನ್ನು ರಾಕಿಭಾಯ್ ಯಶ್ ಅವರು ಕುರ್ತಾ-ಪೈಜಾಮಾ ಸೆಟ್‌ನಲ್ಲಿ, ನೀಲಿ ಬಣ್ಣದ ಬಂಡಾನಾ & ಸನ್‌ಗ್ಲಾಸ್‌ ಹಾಕಿಕೊಂಡು ಕ್ಲಾಸ್ ಆಗಿ ಭರ್ಜರಿ ಎಂಟ್ರಿ ಕೊಟ್ಟರು. ದೇವಸ್ಥಾನ ಉದ್ಘಾಟನೆ ವೇಳೆ ಭಕ್ತಿ & ಭಾವ ಮೆರೆದ ಕನ್ನಡಿಗ ಯಶ್ ಅವರು, ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. 

ಇದೇ ಸಮಯದಲ್ಲಿ ಅವರು ಸುಮಲತಾ ಅವರ ಪರ ಎಲೆಕ್ಷನ್, ಕ್ಯಾಂಪೇನ್ ಮಾಡುತ್ತಾರಾ? ಇಲ್ವಾ? ಅನ್ನೋ ಪ್ರಶ್ನೆಗೂ ಉತ್ತರ ನೀಡಿದರು. ಹಾಗಾದ್ರೆ ಈ ಪ್ರಶ್ನೆಗೆ ಯಶ್ ಅವರು ಹೇಳಿದ್ದೇನು ಅಂದರೆ ರೆಬೆಲ್ ಸ್ಟಾರ್ ಅಂಬರೀಶ್ ಅವ್ರು ಕಾಲವಾದ ಬಳಿಕ ಮಂಡ್ಯದಲ್ಲಿ ದೊಡ್ಡ ರಾಜಕೀಯ ಯುದ್ಧ ಆರಂಭ ಆಗಿತ್ತು. ಅದ್ರಲ್ಲೂ ಸುಮಲತಾ ಅಂಬರೀಶ್ ತಾವು ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ನಿಂತೆ ನಿಲ್ಲುತ್ತೇನೆ ಅಂತಾ ಸವಾಲು ಹಾಕಿ ಎಲೆಕ್ಷನ್ ಫೇಸ್ ಮಾಡಿದ್ದರು. ಹೀಗಿದ್ದಾಗ 2019ರ ವೇಳೆ, ಜೋಡೆತ್ತುಗಳ ರೀತಿ ರಾಕಿಂಗ್ ಸ್ಟಾರ್ ಯಶ್ & ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಾಗಿ ನಿಂತು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿದರು.

ಆದ್ರೆ ಈ ಬಾರಿ ನಟ ಯಶ್ ಅವರು ಸುಮಲತಾ ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ಹೋಗಲ್ಲವಂತೆ. ಈ ಮಾತನ್ನ ಅವರು ಈಗ ಸ್ಪಷ್ಟಪಡಿಸಿದ್ದು, ನಾನು ಯಾವುದೇ ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಈ ಮೂಲಕ ಸುಮಲತಾ ಅವರ ಪರ ಕೂಡ ಯಶ್ ಅವರು ಎಲೆಕ್ಷನ್ ಪ್ರಚಾರಕ್ಕೆ ಹೋಗಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಹಾಗೇ ಮಂಡ್ಯದ ಚುನಾವಣೆ ಮತ್ತಷ್ಟು ರಂಗೇರುವುದು ಬಹುತೇಕ ಗ್ಯಾರಂಟಿ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.