ಮನೆಯಲ್ಲಿ ಊಟ ಮಾಡುತ್ತಾ ಚಿಕ್ಕಣ್ಣನ ಸಿನಿಮಾಗೆ ಸಪೋರ್ಟ್ ಮಾಡಿದ ಯಶ್, ನೆಟ್ಟಿಗರು ಹೇ.ಳಿದ್ದೇನು ಗೊ ತ್ತಾ

 | 
I

ಚಿಕ್ಕಣ್ಣ & ರಾಕಿಂಗ್ ಸ್ಟಾರ್ ಯಶ್ ನಡುವೆ ಅಣ್ಣತಮ್ಮನ ರೀತಿ ಸಂಬಂಧ ಇದೆ. ಅದರಲ್ಲೂ ಸಿನಿಮಾ ಸಹವಾಸವೇ ಬೇಡ ಅಂತಾ ಇದ್ದ ನಟ ಚಿಕ್ಕಣ್ಣ ಅವರಿಗೆ, ಬೆನ್ನೆಲುಬಾಗಿ ನಿಂತಿದ್ದ ರಾಕಿಂಗ್ ಸ್ಟಾರ್ ಯಶ್ ಸಾಕಷ್ಟು ಸಹಾಯ ಮಾಡಿದ್ದಾರೆ. ಚಿಕ್ಕಣ್ಣ ಅವರಿಗೆ ಒಳ್ಳೆ ಒಳ್ಳೆಯ ಪಾತ್ರಗಳನ್ನು ನೀಡಿ, ಅವರ ಸಿನಿಮಾಗೆ ಸಪೋರ್ಟ್ ಕೂಡ ಮಾಡಿದ್ದಾರೆ. ಹೀಗಿದ್ದಾಗ ನಟ ಚಿಕ್ಕಣ್ಣ ಹೀರೋ ಆಗಿ ಎಂಟ್ರಿ ಕೊಟ್ಟಿದ್ದು, ಉಪಾಧ್ಯಕ್ಷನಿಗೆ ಯಶ್ ತಬ್ಬಿಕೊಂಡು ಶುಭ ಕೋರಿದ್ದಾರೆ.

ಅಂದಹಾಗೆ ನಿಮಗೆಲ್ಲಾ ಗೊತ್ತಿರುವಂತೆ ಕೆಜಿಎಫ್ ಖ್ಯಾತಿಯ ರಾಕಿಭಾಯ್ ಯಶ್ ಸಖತ್ ಬ್ಯುಸಿಯಾಗಿದ್ದಾರೆ. ಯಸ್-19 ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಿದ್ಧವಾಗುತ್ತಿದೆ. ಹೀಗಿದ್ದಾಗ ನಟ ಯಶ್ ವಿದೇಶ ಪ್ರವಾಸದಲ್ಲಿ ಇದ್ದಾರೆ. ಹೀಗಾಗಿ ಚಿಕ್ಕಣ್ಣ ಅವರ 'ಉಪಾಧ್ಯಕ್ಷ' ಸಿನಿಮಾ ಬಿಡುಗಡೆ ವೇಳೆ ಯಶ್ ಅವರು ಚಿಕ್ಕಣ್ಣ ಅವರನ್ನ ಮೀಟ್ ಮಾಡಿರಲಿಲ್ಲ. ಆದರೆ ಇದೀಗ ತಮ್ಮ ಮನೆಗೆ ಚಿಕ್ಕಣ್ಣ ಅವರನ್ನ ಕರೆಸಿಕೊಂಡು ಮಾತನಾಡಿದ್ದಾರೆ. ಅಲ್ಲದೆ ತಬ್ಬಿಕೊಂಡು, ಶುಭಾಶಯ ಕೂಡ ಕೋರಿದ್ದಾರೆ. ಒಟ್ಟಿಗೆ ಕೂತು ತಿಂಡಿ ಕೂಡ ಮಾಡಿದ್ದಾರೆ.

ಚಿಕ್ಕಣ್ಣ ಸಿನಿಮಾ ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ನೆಲೆಯೂರಲು ಯಶ್ ಅವರ ಸಲಹೆ ಕೂಡ ಪ್ರಮುಖ ಕಾರಣ. ಹಲವು ಸಿನಿಮಾಗಳ ಸ್ಕ್ರಿಪ್ಟ್ ಕೂಡ ಚೆಕ್ ಮಾಡಿದ್ದಾರಂತೆ ಯಶ್ ಅವರು. ಇದರ ಜೊತೆ ಸಣ್ಣಪುಟ್ಟ ತಿದ್ದುಪಡಿ ಮಾಡಿ ಉಪಾಧ್ಯಕ್ಷ ಸಿನಿಮಾ ತಂಡಕ್ಕೆ ಸಲಹೆಯನ್ನು ಕೊಟ್ಟಿದ್ದರು ಯಶ್. ಅದನ್ನೆಲ್ಲಾ ಸರಿ ಮಾಡಿಕೊಂಡು ಉಪಾಧ್ಯಕ್ಷ ಸಿನಿಮಾ ಈಗ ಭರ್ಜರಿ ಸಕ್ಸಸ್ ಪಡೆದಿದೆ. ಹೀಗಾಗಿ ಇದೇ ಖುಷಿಯಲ್ಲಿ ನಟ ಯಶ್ ಮನೆಗೆ ಹೋಗಿರುವ ಚಿಕ್ಕಣ್ಣ & ಉಪಾಧ್ಯಕ್ಷ ಸಿನಿಮಾ ನಾಯಕಿ ಮಲೈಕಾ, ಒಟ್ಟಿಗೆ ಕೂತು ತಿಂಡಿ ಮಾಡಿದ್ದಾರೆ. ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಜೊತೆಗೆ ಇದ್ದು ಉಪಾಧ್ಯಕ್ಷ ಸಿನಿಮಾಗೆ ಶುಭ ಕೋರಿದ್ದಾರೆ.

ನಟ ಯಶ್ ಅವರು ಮೊದಲಿನಿಂದ ಹೊಸಬರಿಗೆ ಸಾಥ್ ಕೊಡುತ್ತಾರೆ. ಹಾಗೇ ಅವರ ಬೆನ್ನಿಗೆ ನಿಂತು ಅವರ ಯಶಸ್ಸಿಗೆ ಕೈಜೋಡಿಸಿದ್ದಾರೆ. ಚಿಕ್ಕಣ್ಣ ಗೆಲುವಿನಲ್ಲಿ ಯಶ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮಾತನ್ನು ಆಗಾಗ ಚಿಕ್ಕಣ್ಣ ಕೂಡ ಹೇಳಿಕೊಂಡು, ಯಶ್ ಅವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಉಪಾಧ್ಯಕ್ಷ ಸಿನಿಮಾಗೆ ಕೂಡ ನಟ ಯಶ್ ಸೇರಿದಂತೆ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಶುಭಾಶಯ ಕೋರಿದ್ದಾರೆ.

ಕನ್ನಡ ಸಿನಿ ರಂಗಕ್ಕೆ 2011ರಲ್ಲಿ ನಟ ಚಿಕ್ಕಣ್ಣ ಎಂಟ್ರಿ ಕೊಟ್ಟಿದ್ದರು. ಕಿರಾತಕ ಸಿನಿಮಾ ಮೂಲಕ ಕನ್ನಡಿಗರ ಬಣ್ಣದ ಲೋಕಕ್ಕೆ ಬಂದಿದ್ದರು ಚಿಕ್ಕಣ್ಣ. ಇದಾದ ಬಳಿಕ ಚಿಕ್ಕಣ್ಣಗೆ, ಸಾಲು ಸಾಲು ಆಫರ್ಸ್ ಬಂದವು. ಹೀಗೆ ನೋಡ ನೋಡುತ್ತಲೇ ದೊಡ್ಡದಾಗಿ ಕನ್ನಡ ಸಿನಿ ರಂಗದಲ್ಲಿ ಬಿಡುವೆ ಇಲ್ಲದ ನಟನಾಗಿ ಬೆಳೆದು ನಿಂತರು ಚಿಕ್ಕಣ್ಣ. ಈ ನಟ ಮೊದಲ ಬಾರಿ ಹೀರೋ ಆಗಿ ನಟಿಸಿದ್ದು ಉಪಾಧ್ಯಕ್ಷ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸಮಯದಲ್ಲೇ, ಪ್ರೇಕ್ಷಕರು & ಕನ್ನಡಿಗರು ಉಪಾಧ್ಯಕ್ಷನ ಅವತಾರಕ್ಕೆ ಫಿದಾ ಆಗಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.