ವಷ೯ ವಷ೯ ವರಮಹಾಲಕ್ಷ್ಮಿ ಪೂಜೆ ಮಾಡಿ ಕೋಟ್ಯಾಧಿಪತಿ ಆದ ಯಶ್ ಕುಟುಂಬ, ಈ ಸಲನೂ ಅದ್ದೂರಿ ಸಂಭ್ರಮ

 | 
Hd

      ವರಮಹಾಲಕ್ಷ್ಮಿ ಹಬ್ಬವನ್ನು ಎಲ್ಲ ಕಡೆಗಳಲ್ಲಿ ಸಡಗರದಿಂದ ಆಚರಣೆ ಮಾಡಲಾಗಿದೆ. ಚಿತ್ರರಂಗದ ಸೆಲೆಬ್ರಿಟಿಗಳು ಸಹ ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ರಾಧಿಕಾ ಪಂಡಿತ್, ಯಶ್ ಮನೆಯಲ್ಲಿ ಕೂಡ ಹಬ್ಬದ ಸಡಗರ ಜೋರಾಗಿದೆ. ರಾಧಿಕಾ ಪಂಡಿತ್ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬ ಸುಖ, ಸಮೃದ್ಧಿಯನ್ನು ತರಲಿ. ನಿಮ್ಮ ಹಾಗೂ ನಿಮ್ಮ ಕುಟುಂಬದ ಸಂತೋಷ ಮತ್ತು ಸೌಕರ್ಯ ವೃದ್ಧಿಯಾಗಲಿ. ನಿಮ್ಮೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಆತ್ಮೀಯ ಶುಭಾಶಯಗಳು’ ಎಂದು ರಾಧಿಕಾ ಪಂಡಿತ್ ಹಾರೈಸಿದ್ದಾರೆ. Hs
     ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ಕುಟುಂಬಕ್ಕೆ ಸಮಯ ನೀಡುತ್ತಾರೆ. ಪತ್ನಿ ಮತ್ತು ಮಕ್ಕಳ ಜೊತೆ ಸೇರಿ ಅವರು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿ ಖುಷಿಪಟ್ಟಿದ್ದಾರೆ.
      ರಾಧಿಕಾ ಪಂಡಿತ್ ಅವರಿಗೆ ಹಬ್ಬಗಳಲ್ಲಿ ವಿಶೇಷ ಆಸಕ್ತಿ. ಎಲ್ಲ ಹಬ್ಬವನ್ನು ಅವರು ಸಂಭ್ರಮದಿಂದ ಆಚರಿಸುತ್ತಾರೆ. ಅಭಿಮಾನಿಗಳಿಗಾಗಿ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಅವರು ಶುಭಾಶಯ ತಿಳಿಸಿದ್ದಾರೆ.