ಅವಳಿಂದ ಅಮ್ಮ ಬೇರೆ ಮಗ ಬೇರೆ ಆಗಿಬಿಟ್ಟಿದೆ, ಮೌನಮುರಿದು ಬಿಟ್ಟ ಯಶ್ ತಾಯಿ ಪುಷ್ಪ

 | 
Ghu
ವೀಕ್ಷಕರೆ ಕೊತ್ಯಲವಾಡಿ ಸಿನಿಮಾ ಮೂಲಕ ಹೊಸ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಆಗ್ತಿರುವ ಮೊದಲ ಚಿತ್ರಕ್ಕೆ ಯಶ್ ತಾಯಿ ಅವರು ಇದೀಗ ಮಾಧ್ಯಮಗಳ ಮುಂದೆ ಸ್ವಲ್ಪ ಗರಂ ಆಗಿಯೇ ಮಾತನಾಡಿದ್ದಾರೆ. ನಿಮ್ಮ ಹೊಸ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 
ಯಶ್​ಗೆ ಸಿನಿಮಾ ತೋರಿಸಿ ಅಭಿಪ್ರಾಯ ಪಡೆಯುತ್ತೀರಾ ಎಂದು ಕೇಳಿದ್ದಕ್ಕೆ ಪುಷ್ಪ ಅವರು ಗರಂ ಆಗಿಯೇ ಮರು ಉತ್ತರ ಕೊಟ್ಟಿದ್ದಾರೆ. ಯಶ್ ಆಗಲಿ ರಾಧಿಕಾ ಯಾರಿಗೂ ನಾನು ಸಿನಿಮಾ ತೋರಿಸಲ್ಲ. ಮಗ ಬೇರೆ, ಅಮ್ಮ ಬೇರೆ. ಮಗ ಎಂದಮಾತ್ರಕ್ಕೆ ನನ್ನ ಮಾತು ಕೇಳಬೇಕು ಅಂತ ಏನೂ ಇಲ್ಲ. 
ಅವನು ನನ್ನ ಸಿನಿಮಾ ನೋಡುತ್ತಾನೆ ಅಂತ ನಾನು ನಿರೀಕ್ಷೆ ಮಾಡಲ್ಲ. ಮೊದಲು ಕನ್ನಡದ ಜನತೆ ಸಿನಿಮಾ ನೋಡಬೇಕು. ಯಶ್ ನೋಡಿದ ತಕ್ಷಣ ಸಿನಿಮಾ ಓಡುತ್ತಾ? ನನ್ನ ದುಡ್ಡು ವಾಪಸ್ ಬರುತ್ತಾ? ಮೊದಲು ಪ್ರೇಕ್ಷಕರು ನೋಡಬೇಕು. ಮಗನ ಅಭಿಪ್ರಾಯ ನನಗೆ ಬೇಕಿಲ್ಲ. ನನಗೆ ಜನರ ಅಭಿಪ್ರಾಯ ಬೇಕು ಎಂದು ಯಶ್ ತಾಯಿ ಖಡಕ್ ಆಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.