ನನ್ನ ಸಿನಿಮಾಗೆ ಕೋಟಿ ಕೋಟಿ ಹಣ ಬರುತ್ತೆ, ಸಿನಿಮಾ ರಿಲೀಸ್ ಗೂ ಮುನ್ನವೇ ಯಶ್ ತಾಯಿ ಪುಷ್ಪಾ ಸಂಭ್ರಮ

 | 
Js

      ಟಾಕ್ಸಿಕ್' ಮತ್ತು 'ರಾಮಾಯಣ' ಮೂಲಕ ಬಹಳಷ್ಟು ನಿರೀಕ್ಷೆ ಉಂಟಾಗಲು ಕಾರಣರಾದ ರಾಕಿಂಗ್ ಸ್ಟಾರ್ ಯಶ್ ಎಂದರೆ ಅಪಾರ ಗೌರವ, ಅಭಿಮಾನ ಮತ್ತು ವಿಶೇಷ ಪ್ರೀತಿಯಿದೆ. ಇಂತಹ ಅಭಿಮಾನಕ್ಕೆ ಕುತ್ತು ಬರುತ್ತಿದಿಯಾ? ಅದಕ್ಕೆ ಮುನ್ಸೂಚನೆ ಸಿಗುವಂತಹ ಬೆಳವಣಿಗೆಗಳು ನಡೆಯುತ್ತಿವೆಯೆ ಎಂದು ಇತ್ತೀಚಿಗೆ ಅನ್ನಿಸುತ್ತಿದೆ. ಯಶ್ ಅಭಿಮಾನಿಗಳಲ್ಲಿ ಕೊಂಚ ಚಿಂತೆ ಕಾಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

     ಯಶ್ ಅವರ ತಾಯಿ ಪುಷ್ಪಾ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದು, 'ಕೊತ್ತಲವಾಡಿ'ಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ತೆರೆಗೆ ಬರುವುದು ಬಾಕಿ ಇದೆ. ಹೀಗಿದ್ದಾಗಲೇ ಅವರು ನೀಡುತ್ತಿರುವ ಹೇಳಿಕೆಗಳು ಚಿತ್ರರಂಗದಲ್ಲಿ, ಮೇಲಾಗಿ ಅಭಿಮಾನಿಗಳಲ್ಲಿ ಕಸಿವಿಸಿಗೆ ಕಾರಣವಾಗುತ್ತಿವೆ. ಯಶ್ ಬೆಳವಣಿಗೆ ಅವರ ಮೇಲಿನ ಗೌರವಕ್ಕೂ ಚ್ಯುತಿ ಬರುವ ಸಾಧ್ಯತೆ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. 
     ಮಾಧ್ಯಮಗಳ ಮುಂದೆ ಯಶ್ ತಾಯಿ ಮತ್ತು ನಿರ್ಮಾಪಕಿ ಪುಷ್ಪಾ ಅವರು ಕೊಡುವ ಹೇಳಿಕೆಗಳು ಚರ್ಚೆಗೀಡಾಗುತ್ತಿವೆ. ಕೆಲವು ಹೇಳಿಕೆಗಳಿಗೆ ಮಿಶ್ರ ಪ್ರತಿಕ್ರಿಯೆಯು ವ್ಯಕ್ತವಾಗಿದೆ. ಕೆಲವರು ಇದನ್ನು ದುಡ್ಡಿನ ದರ್ಪದ ಮಾತುಗಳು ಅಂತಲೂ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಸಮೇತ ಮಾತನಾಡುತ್ತಿದ್ದಾರೆ.
     ಪುಷ್ಪಾ ಅವರು ನಿರ್ಮಿಸಿದ್ದು 'ಕೊತ್ತಲವಾಡಿ' ಸಿನಿಮಾ. ಇದು ಅವರ ಮೊದಲ ಸಿನಿಮಾ ಇನ್ನೂ ತೆರೆ ಕಂಡಿಲ್ಲ. ಅದಕ್ಕೂ ಮುನ್ನವೇ 2000 ಕೊಟಿ ರೂಪಾಯಿ, 5000 ಕೋಟಿ ರೂಪಾಯಿ ಎಂದು ಮಾತನಾಡುತ್ತಿದ್ದಾರೆ. ಇದರಿಂದ ಯಶ್ ಫ್ಯಾನ್ಸ್‌ಗೆ ಕಸಿವಿಸಿ ಆಗುತ್ತಿದೆ.
News Hub