ಸೊಸೆ ಜೊತೆ ಯಶ್ ತಾಯಿಗೆ ಅಷ್ಟಕಷ್ಟೆ, ನನ್ನನ್ನು ಇಲ್ಲೇ ಬಿಟ್ಟು ಅವರು ಅಮೆರಿಕಾಗೆ ಹೋಗಿದ್ದಾರೆ ಎಂದ ಯಶ್ ತಾಯಿ
Jul 3, 2025, 16:33 IST
|

ಈ ಹಿನ್ನೆಲೆ ಪುಷ್ಪ ಅವರು ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್ ಸ್ಮಾರಕಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಮಾಧ್ಯಮಗಳು ಯಶ್ ಅವರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ತಾಯಿ ಪುಷ್ಪ ಅವರು ಗರಂ ಆಗಿದ್ದಾರೆ. ಯಶ್.. ಯಶ್.. ಅನ್ನೋದಾದ್ರೆ ಅವನ ಹತ್ತಿರವೇ ಹೋಗಿ ಎಂದಿದ್ದಾರೆ.ಹೋಗಿ ಯಶ್ ಹತ್ರಾನೇ ಪ್ರಶ್ನೆ ಕೇಳಿ, ನಾನು ಯಶ್ ಬಗ್ಗೆ ಏನೂ ಹೇಳಲ್ಲ. ಯಶ್ ನಿಮಗೆ ಮಾತ್ರವಲ್ಲ, ನಮಗೂ ಸಿಗಲ್ಲ ಎಂದಿದ್ದಾರೆ.
ಅಮ್ಮನ ಮೊದಲ ಸಿನಿಮಾ ಬರ್ತಿದೆ ಅನ್ನೋ ಸೆಂಟಿಮೆಂಟ್ ಎಲ್ಲ ನಮ್ಮ ಮನೇಲಿ ಇಟ್ಟುಕೊಂಡಿಲ್ಲ. ನಾವು ಮನೆ ಕಟ್ಟಿದ ಮೇಲೆ ಯಶ್ ಇಲ್ಲ ಅಂದ್ರೂ ಗೃಹಪ್ರವೇಶ ಮಾಡ್ತೀವಿ ಎಂದು ಖಡಕ್ ಆಗಿ ಹೇಳಿದ್ದಾರೆ. ನಮ್ಮ ಚೊಚ್ಚಲ ಕೊತ್ತಲವಾಡಿ ಸಿನಿಮಾವನ್ನು ಯಶ್, ರಾಧಿಕಾ ಯಾರಿಗೂ ತೋರಿಸುವುದಿಲ್ಲ. ಈ ಸಿನಿಮಾ ನೋಡ್ತಾರೋ ಬಿಡ್ತಾರೋ ಅನ್ನೋದನ್ನ ಅವರ ಬಳಿಯೇ ಕೇಳಿ. ಇಲ್ಲಿ ಮಗ ಬೇರೆ, ಅಮ್ಮ ಬೇರೆ, ಎಲ್ಲವೂ ಬೇರೆ ಬೇರೆ ಎಂದು ಪುಷ್ಪ ಅವರು ಹೇಳಿದ್ದಾರೆ.
ಯಶ್ ನಮ್ಮ ಸಿನಿಮಾ ನೋಡ್ತಾನೋ, ನೋಡಲ್ವೋ ನಾನು ನಿರೀಕ್ಷೆ ಮಾಡಲ್ಲ. ಪ್ರೇಕ್ಷಕರು ನೋಡಬೇಕು. ಯಶ್ ನೋಡಿದ ತಕ್ಷಣ ಸಿನಿಮಾ ಓಡುತ್ತಾ? ನನ್ನ ಹಣ ವಾಪಸ್ ಬರುತ್ತಾ? ಇಲ್ಲಿ ನನಗೆ ಮಗನ ಅಭಿಪ್ರಾಯ ಬೇಕಾಗಿಲ್ಲ, ಪ್ರೇಕ್ಷಕರ ಅಭಿಪ್ರಾಯ ಮುಖ್ಯ. ಯಶ್ ಒಬ್ಬನಿಂದ ಸಿನಿಮಾ ಓಡಲ್ಲ, ನನ್ನ ಹಣ ಮತ್ತೆ ಬರಲ್ಲ ಎಂದು ಹೇಳಿದ್ದಾರೆ. ಮಗ ಎಂದಾಕ್ಷಣ ಅವನು ನನ್ನ ಮಾತು ಕೇಳಬೇಕು ಎಂದೇನಿಲ್ಲ.
ಈಗ ಅವನೂ ಸಿನಿಮಾ ಮಾಡ್ತಿದ್ದಾನಲ್ಲ, ಅದನ್ನ ಮಾಡಲಿ. ಅಮ್ಮ ಚೆನ್ನಾಗಿ ಸಿನಿಮಾ ಮಾಡಿದ್ದಾರೆ ಅಂತ ಆ ಮೇಲೆ ಅವನಿಗೆ ಜನರೇ ಹೇಳ್ತಾರೆ. ಯಶ್ ಎಲ್ಲ ನಿಮಗಾಗಿ ಮಾಡುತ್ತಿದ್ದಾನೆ, ಯಶ್ ಸಿಕ್ಕಿರುವ ಅವಕಾಶ ಎಷ್ಟೋ ಜನಕ್ಕೆ ಸಿಕ್ಕಿದೆ, ಬೇರೆಯವರೂ ಬೆಳೆಯಲಿ ಬಿಡಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullka.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023