ಭಾರತವನ್ನು ಕಾಪಾಡಲು ಬರುತ್ತಿದ್ದಾರೆ ಯೋಗಿ ಸಿಎಮ್ ಗಳು, ಧರ್ಮ ಉಳಿಯಲು ಇದೊಂದು ಮಂತ್ರ

 | 
N

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಬಗ್ಗೆ ನಿಮಗೆ ಗೊತ್ತು. ಐದು ಬಾರಿ ಸಂಸದರಾಗಿ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಈಗ ರಾಜಸ್ಥಾನದಲ್ಲೂ ಮತ್ತೊಬ್ಬ ಯೋಗಿ ವಿಧಾನಸಭೆ ಚುನಾವಣೆ ಕಣದಲ್ಲಿದ್ದು ಮುನ್ನಡೆ ಕಾಯ್ದುಕೊಂಡಿದ್ಧಾರೆ.

ಉತ್ತರ ಪ್ರದೇಶದ ಯೋಗಿ ಅವರಂತೆಯೇ ರಾಜಸ್ಥಾನದಲ್ಲಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಹೌದು ಇವರ ಪೂರ್ಣ ಹೆಸರು ಮಹಾಂತ ಬಾಲಕನಾಥ ಯೋಗಿ. ವಯಸ್ಸು 39.ಇವರ ತಂದೆ ಸುಭಾಷ್‌ ಯಾದವ್‌ ಹಾಗೂ ತಾಯಿ ಊರ್ಮಿಳಾ ದೇವಿ. ರಾಜಸ್ಥಾಸ್ತನ್ ಆಳ್ವಾರ್‌ನಲ್ಲಿ ಜನಿಸಿದ ಮಹಾಂತ್‌ ಅವರು ಆರನೇ ವಯಸ್ಸಿನಲ್ಲಿಯೇ ಧರ್ಮದೀಕ್ಷೆ ಪಡೆದವರು.

ನಾಥ ಪಂತದ ಮಹಾಂತ ಬಾಲಕನಾಥಯೋಗಿಯಾಗಿ ಬದಲಾದವರು. ಅಲ್ಲಿಂದ ಶಿಕ್ಷಣ ಪಡೆದು ಧರ್ಮ ಕಾರ್ಯದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಬಂದವರು. ಹರಿಯಾಣದ ರೋಹ್ಟಕ್‌ನಲ್ಲಿರುವ ಬಾಬಾ ಮಸ್ತನಾಥ ಮಠದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಆಗಿದ್ದರು. ಎಂಟು ವರ್ಷದ ಹಿಂದೆ ಬಾಬಾ ಮಸ್ತನಾಥ ಮಠದ ಎಂಟನೇ ಪೀಠಾಧಿಪತಿಯಾಗಿ ಬಾಬಾ ರಾಮದೇವ್‌ ಹಾಗೂ ಯೋಗಿ ಆದಿತ್ಯನಾಥ್‌ ಅವರಿಂದಲೇ ಪೀಠ ದೀಕ್ಷೆ ಪಡೆದಿದ್ದರು.

ಮಠದ ಆಡಳಿತ ಹಾಗೂ ಬಾಬಾ ಮಸ್ತನಾಥ್‌ ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಮಹಾಂತ ಬಾಲಕನಾಥ್‌ ಯೋಗಿ ಅವರು ಬಿಜೆಪಿ ಸೇರಿದರು. 2019ರಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ರಾಜಸ್ಥಾನದಲ್ಲಿ ಇವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು. ಆಳ್ವಾರ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಭಂವರ್‌ ಜಿತೇಂದ್ರ ಸಿಂಗ್‌ ಅವರನ್ನು ಮಣಿಸಿದರು. ಮೊದಲ ಬಾರಿಗೆ ಮೂರು ಲಕ್ಷ ಮತಗಳ ಅಂತರದಿಂದ ಗೆದ್ದು ಲೋಕಸಭೆಯನ್ನೂ ಮಹಾಂತ ಯೋಗಿ ಪ್ರವೇಶಿಸಿದರು.

ನಾಲ್ಕು ವರ್ಷದಿಂದ ಲೋಕಸಭೆ ಸದಸ್ಯರಾಗಿದ್ದ ಯೋಗಿ ಅವರಿಗೆ ಈ ಬಾರಿ ಬಿಜೆಪಿ ವಿಧಾನಸಭೆ ಚುನಾವಣೆಯ ಹುರಿಯಾಳನ್ನಾಗಿ ಮಾಡಿದೆ.ತಿಜಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇಮ್ರಾನ್‌ ಖಾನ್‌ ವಿರುದ್ದ ಮಹಾಂತ ಯೋಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಈ ಬಾರಿ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಮಾದರಿಯಲ್ಲಿ ರಾಜಸ್ಥಾನದಲ್ಲಿ ಯೋಗಿ ಬಾಲಕನಾಥ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು ಈಗ ಅದು ನಿಜವಾಗುವ ಎಲ್ಲ ಲಕ್ಷಣಗಳೂ ಇವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.