ಅವಕಾಶಕ್ಕಾಗಿ ಮಂಚ ಏರಲೇ‌ಬೇಕು; ನಟರು ಬಿಟ್ಟರು ನಿರ್ಮಾಪಕರು ಬಿಡಲ್ಲ‌ ಎಂದ ನ ಟಿ

 | 
He

ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಶರ್ಟ್ ಬದಲಿಸುವಷ್ಟರ ಮಟ್ಟಿಗೆ ಸಾಮಾನ್ಯವಾಗಿಬಿಟ್ಟಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ಧ ಮನಸ್ಸುಗಳು ಖೆಡ್ಡಾ ಎಂಬ ಅರಿವಿದ್ದರೂ ಬಿದ್ದು ಏಳುವ ಸಿಚುವೇಷನ್ನುಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ. ಇದಕ್ಕೆ ಸಾಯಿ ತಮ್ಹಂಕರ್ ಮತ್ತೊಂದು ಉದಾಹರಣೆ.

ಹೌದು, ಸನಯ್ ಚೌಗಡೇ.. ಸುಂಬರಾನ್.. ನೋ ಎಂಟ್ರಿ ಫುಡೇ ದೋಖಾ ಹೈ.. ದುನಿಯಾ ದಾರಿ.. ತೆಂಡೂಲ್ಕರ್ ಔಟ್.. ಹೀಗೆ ಹಲವಾರು ಚಿತ್ರಗಳ ಮೂಲಕ ಮರಾಠಿ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಮತ್ತು ಮಾನ ಹೊಂದಿರುವ ಸಾಯಿ ತಮ್ಹಂಕರ್, ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಪಾತ್ರಕ್ಕಾಗಿ ಪಲ್ಲಂಗ ಹತ್ತಬೇಕು ಎಂಬ ಷರತ್ತನ್ನೂ ನನ್ನ ಮುಂದೆ ಕೂಡ ಹಾಕಿದ್ದರು ಎಂದು ಹೇಳಿದ್ದಾರೆ.

ಮಿಸ್ ಮಾಲಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಾಯಿ ತಮ್ಹಂಕರ್, ಅದೊಂದು ದಿನ ವ್ಯಕ್ತಿಯೊರ್ವ ನನಗೆ ಕರೆ ಮಾಡಿದ್ದ. ನಿಮಗೋಸ್ಕರ ಒಂದು ಅತ್ಯುತ್ತಮ ಪಾತ್ರ ಮತ್ತು ಚಿತ್ರ ಇದೆ ಎಂದ ಆ ವ್ಯಕ್ತಿ ಅರೆ ಕ್ಷಣವೂ ಯೋಚಿಸದೇ ನನ್ನನ್ನು ಸೀದಾ ಮಂಚಕ್ಕೆ ಕರೆದ ಎಂದಿದ್ದಾರೆ. ಮುಂದುವರೆದು ಮಾತನಾಡಿರುವ ಸಾಯಿ ತಮ್ಹಂಕರ್, ಪಾತ್ರ ನಿಮ್ಮದಾಗಲು ನೀವು ನಿರ್ಮಾಪಕ ಮತ್ತು ನಿರ್ದೇಶಕರ ಜೊತೆ ಹಾಸಿಗೆ ಹಂಚಿಕೊಳ್ಳಬೇಕು, ಸಾಮಾನ್ಯವಾಗಿ ನಾಯಕನ ಜೊತೆ ಕೂಡ ಮಲಗಬೇಕಾಗುತ್ತೆ.

ಆದರೆ.. ನೀವು ಆದ ಕಾರಣ, ನಾಯಕನ ಜೊತೆ ಮಲುಗುವ ಅವಶ್ಯಕತೆ ಇಲ್ಲ, ನಿರ್ಮಾಪಕ ಮತ್ತು ನಿರ್ದೇಶಕರ ಜೊತೆ ಒಂದು ಸಲ ಮಲಗಿ ಎದ್ದರೆ ಸಾಕು ಎಂದಿದ್ದ ಎಂದು ಹೇಳಿದ್ದಾರೆ.ಆ ವ್ಯಕ್ತಿಯ ನಿರ್ಭೀತಿಯ ಮಾತುಗಳಿಂದ ಆ ಕ್ಷಣಕ್ಕೆ ನಾನು ಹೈರಾಣಾಗಿದ್ದೆ ಎಂದಿರುವ ಸಾಯಿ ತಮ್ಹಂಕರ್, ನೀವು ಯಾಕೆ ನಿಮ್ಮ ತಾಯಿಯನ್ನು ಮಲಗಲು ಕಳುಹಿಸಬಾರದು ಎಂದು ನಾನು ಮರು ಪ್ರಶ್ನೆ ಮಾಡಿದ್ದೇ ಎಂದಿದ್ದಾರೆ. ನಾನು ಆಡಿದ ಈ ಮಾತುಗಳಿಗೆ ಆತನ ಬಳಿ ಉತ್ತರ ಇರಲಿಲ್ಲ.

ಎಂದು ಹೇಳಿರುವ ಸಾಯಿ ತಮ್ಹಂಕರ್ ಇನ್ನೊಂದು ಸಾರಿ ಈ ರೀತಿ ಹೇಳಿ ಕಾಲ್ ಮಾಡಿದರೆ ಗ್ರಹಚಾರ ಬಿಡಿಸುವುದಾಗಿ ಹೇಳಿ ನಾನು ಆ ಕರೆಯನ್ನ ಕಟ್ ಮಾಡಿದ್ದೇ ಎಂದು ಆ ದಿನವನ್ನ ಮೆಲುಕು ಹಾಕಿದ್ದಾರೆ. ಅದೇ ಕೊನೆ ಆ ನಂತರ ಆ ವ್ಯಕ್ತಿ ಮತ್ತೆ ನನಗೆ ಫೋನ್ ಮಾಡಲಿಲ್ಲ. ಆ ನಂತರ ಚಿತ್ರರಂಗದಲ್ಲಿ ನನಗೆ ಈ ತರಹದ ಕಹಿ ಅನುಭವ ಯಾವತ್ತು ಆಗಲಿಲ್ಲ ಎಂದಿದ್ದಾರೆ ಸಾಯಿ ತಮ್ಹಂಕರ್.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.