'ನೀನು ದೇಶ ಬಿಟ್ಟು ತೊಳಗು' ಆಲಿಯಾ ಭಟ್ ವಿರು ದ್ದ ಹೆಚ್ಚಾಯಿತು ಕೂಗು

 | 
Uu

ಇತ್ತೀಚಿಗೆ ಮುಂಬೈ ಅಲ್ಲಿ ನೆಡೆದ ಲೋಕ ಸಭಾ ಚುನಾವಣೆಯಲ್ಲಿ ಅಮಿತಾಭ್ ಬಚ್ಚನ್, ಹೃತಿಕ್ ರೋಷನ್, ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮೊದಲಾದವರು ವೋಟ್ ಮಾಡಿದ್ದಾರೆ. ರಣಬೀರ್ ಕಪೂರ್ ಕೂಡ ಮತ ಚಲಾಯಿಸಿದ್ದಾರೆ. ಆದರೆ, ರಣಬೀರ್ ಪತ್ನಿ ಆಲಿಯಾ ವೋಟ್ ಮಾಡಿಲ್ಲ.

ನಟಿ ಆಲಿಯಾ ಭಟ್ ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದು. ಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ ಬರೋಬ್ಬರಿ 8.45 ಕೋಟಿ ಹಿಂಬಾಲಕರು ಇದ್ದಾರೆ. ಇದು ಅವರ ಜನಪ್ರಿಯತೆಗೆ ಇರೋ ಸಾಕ್ಷಿ. ಈ ಮಧ್ಯೆ ಆಲಿಯಾ ಭಟ್ ಅವರ ನಾಗರಿಕತ್ವ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಅಸಲಿಗೆ ಆಲಿಯಾ ಭಾರತೀಯ ಪ್ರಜೆ ಅಲ್ಲ. ಅವರು ಬ್ರಿಟನ್ ನಾಗರಿಕತ್ವ ಹೊಂದಿದ್ದಾರೆ. 

ಹೀಗಾಗಿ, ಅವರಿಗೆ ವೋಟ್ ಮಾಡೋ ಹಕ್ಕು ಇಲ್ಲ. ಆಲಿಯಾ ಭಾರತೀಯ ನಾಗರಿಕತ್ವ ಪಡೆದುಕೊಳ್ಳಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಆಲಿಯಾಗೆ ಭಾರತ ಬಿಟ್ಟು ಹೋಗಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ. ಈ ಮೊದಲು ಅಕ್ಷಯ್ ಕುಮಾರ್ ಅವರು ಈ ವಿಚಾರಕ್ಕೆ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಅವರು ಭಾರತದ ನಾಗರಿಕತ್ವ ಬಿಟ್ಟು ಕೆನಡಾ ಪೌರತ್ವ ಪಡೆದಿದ್ದರು. 

ಆ ಬಳಿಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರು ಭಾರತೀಯ ಪೌರತ್ವ ಪಡೆದರು. ಈ ಬಾರಿ ಅವರು ವೋಟ್ ಕೂಡ ಮಾಡಿದ್ದಾರೆ. ಆಲಿಯಾ ಭಟ್ ಕೂಡ ಭಾರತೀಯ ಪೌರತ್ವ ಪಡೆಯ ಬೇಕು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.ಈ ಮಧ್ಯೆ ಆಲಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ನಿಗೂಡಾರ್ಥದ ಪೋಸ್ಟ್ ಒಂದನ್ನು ಮಾಡಿದ್ದಾರೆ. 

ಈ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆಲಿಯಾ ಭಟ್ ಅವರು ಈ ಮೊದಲು ಅವರ ಹಾಲಿವುಡ್ ಸಿನಿಮಾ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದ ಪ್ರಚಾರಕ್ಕೆ ಇಂಗ್ಲೆಂಡ್ ತೆರಳಿದ್ದರು. ಈ ವೇಳೆ ಆಲಿಯಾಗೆ ಬ್ರಿಟನ್ ನಾಗರಿಕತ್ವದ ಬಗ್ಗೆ ಪ್ರಶ್ನೆ ಎದುರಾಗಿತ್ತು. ‘ನನ್ನ ತಾಯಿ ಬರ್ನಿಂಗ್​ಹ್ಯಾಮ್​ನವರು. ನಾನು ಭಾರತದಲ್ಲಿ ಹುಟ್ಟಿ ಬೆಳೆದೆ. ನನ್ನ ಅಜ್ಜಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಇಂಗ್ಲೆಂಡ್​ನಲ್ಲಿ ಕಳೆದರು. ಅವರಿಗೆ ಇಂಗ್ಲೆಂಡ್ ಇಂಗ್ಲಿಂಷ್ ಆ್ಯಕ್ಸೆಂಟ್ ಬರುತ್ತಿತ್ತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.