ನಿನ್ನ ಕುಟುಂಬ ನಿನಗೆ ದೂರ ಆಗುತ್ತೆ, ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೆ ಭವಿಷ್ಯ ನುಡಿದ ಸ್ವಾಮೀಜಿ

 | 
Bs

 ಬಿಗ್‌ ಬಾಸ್‌ ಸೀಸನ್‌ -10 ಶುರುವಾಗಿ 80 ದಿನ ಮೇಲಾಗಿದೆ. ಫಿನಾಲೆ ವಾರದತ್ತ ಮನೆಯ ಆಟ ಸಾಗುತ್ತಿದ್ದಂತೆ ಸ್ಪರ್ಧಿಗಳ ಆಟವೂ ಕಾವು ಪಡೆದುಕೊಳ್ಳುತ್ತಿದೆ.ಈ ವಾರ ಪ್ರತಾಪ್‌, ಮೈಕಲ್‌, ಕಾರ್ತಿಕ್‌ , ತುಕಾಲಿ ಸಂತೋಷ್‌, ವರ್ತೂರು ಸಂತೋಷ್‌ ನಾಮಿನೇಟ್‌ ಆಗಿದ್ದಾರೆ. ಇವರಲ್ಲಿ ಒಬ್ಬರು ಮನೆ ಬಿಟ್ಟು ಹೋಗುತ್ತಾರೋ ಅಥವಾ ಎಲಿನೇಷನ್‌ ನಲ್ಲಿ ಏನಾದರೂ ಟ್ವಿಸ್ಟ್‌ & ಟರ್ನ್‌ ಇರಲಿದೆಯೋ ಎನ್ನುವುದನ್ನು ಕಾದುನೋಡಬೇಕಿದೆ.


ಇನ್ನೊಂದೆಡೆ ಬಿಗ್‌ ಬಾಸ್‌ ಮನೆಗೆ ಶ್ರೀವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಬಂದು ಸ್ಪರ್ಧಿಗಳ ಭವಿಷ್ಯ ಹೇಳಿದ್ದಾರೆ.
ಕಾಲಿನ ಮೇಲೆ  ಹಾಕಿಸಿಕೊಳ್ಳದ ಜಾಗದಲ್ಲಿ ಟ್ಯಾಟೋವೊಂದನ್ನು ಹಾಕಿದ್ದೀರಿ. ಅಂದಿನಿಂದ ನಿಮ್ಮ ಮನಸ್ಸಿನಲ್ಲಿದ್ದ ನೆಮ್ಮದಿಯಲ್ಲ ಹೋಯಿತು ಎಂದು ವರ್ತೂರು ಅವರ ಭವಿಷ್ಯವನ್ನು ಗುರೂಜಿ ಹೇಳಿದ್ದಾರೆ.


ಇನ್ನು ಇನ್ನು ನಮೃತಾ ಅವರ ಜೀವನದಲ್ಲಿ ಹೊಸ ಬೆಳಕು, ಹೊಸ ವ್ಯಕ್ತಿಯ ಆಗಮನವಾಗಿತೆಂದು ಗುರೂಜಿ ಹೇಳಿದ್ದಾರೆ. ಅದನ್ನು ಕೇಳಿ ನಾಚಿ ನೀರಾದ ನಮೃತಾ ಹೌದು ಅಂದಿದ್ದಾರೆ. ಹಾಗಾಗಿ ಎಲ್ಲರ ಮನದಲ್ಲಿ ಸ್ನೇಹಿತ್ ನೆನಪು ಮೂಡಿ ಬಂದಿದೆ. ಬಿಗ್ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಮದುವೆ ಎನ್ನುತ್ತಿದ್ದ ಅವರ ಮಾತು ನೆನಪಿಗೆ ಬಂದಿದೆ.


ಕಳೆದ ಮೂರು ವರ್ಷಗಳಿಂದ ಮನೆಯವರಿಂದ ದೂರವಿರುವ ಡ್ರೋನ್‌ ಪ್ರತಾಪ್‌ ಅವರ ಬಳಿ,  ಈ ವಿಚಾರವನ್ನು ಹೇಳಲು ನನಗೆ ಸಂಕಟವಾಗುತ್ತದೆ. ನೀನು ಕುಟುಂಬದಿಂದ ದೂರವಿರಬೇಕು. ಕುಟುಂಬದ ಜೀವನ ಅಷ್ಟು ಸರಿಯಲ್ಲ. ದೂರವಿದ್ದು ದೂತನಾಗುತ್ತೀಯ, ಹತ್ತಿರ ಹೋಗಿ ಹೇಸಿಗೆ ಆಗುತ್ತೀಯ ಅನ್ನೋದು ನಿನಗೆ ಬಿಟ್ಟದು ಎಂದು ಹೇಳಿದ್ದಾರೆ. ಅದನ್ನು ಕೇಳಿ ಪ್ರತಾಪ್ ಕಣ್ಣೀರು ಇಟ್ಟಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.