ರೀಲ್ಸ್ ಹುಚ್ಚಿಗೆ ಸಿಗರೇಟ್ ಸೇವನೆ ಮಾಡಿದ ಯು ವತಿ; ಮನೆಯಲ್ಲಿ ಚಳಿಬಿಡಿಸಿದ ತಂದೆ

 | 
Uu

ರೀಲ್ಸ್  ಹುಚ್ಚು ನಮ್ಮಿಂದ ಯಾವ ಕೆಲಸವನ್ನು ಬೇಕಾದರೂ ಮಾಡಿಸುತ್ತದೆ ಎನ್ನುವುದಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಉದಾಹರಣೆಗಳು ಲಭ್ಯವಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳದ  ಯುವತಿಯೊಬ್ಬಳು ರೀಲ್ಸ್ ಮಾಡಿ ತಂದೆಯ ಕೈಯಿಂದ ಸರಿಯಾಗಿ ಹೊಡೆತ ತಿಂದಿರುವ ಘಟನೆ ನಡೆದಿದೆ. ಇದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ಭಾರೀ ವೈರಲ್  ಆಗಿದೆ.

ರೀಲ್ಸ್ ಗಾಗಿ ಯುವತಿಯೊಬ್ಬಳು ಸಿಗರೇಟ್ ಸೇದುತ್ತಿರುವ ವಿಡಿಯೋ ಮಾಡಿ ತಂದೆಯಿಂದ ಸರಿಯಾಗಿ ಏಟು ಕೂಡ ತಿಂದಿದ್ದಾಳೆ. ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಶೋನಿ ಕಪೂರ್ ಹಂಚಿಕೊಂಡ ವೈರಲ್ ವಿಡಿಯೋದಲ್ಲಿ ಅಪ್ರಾಪ್ತ ಯುವತಿಯೊಬ್ಬಳು ರೀಲ್ಸ್ ಗಾಗಿ ಬೀದಿಯಲ್ಲಿ ಧೂಮಪಾನ ಮಾಡುತ್ತಿರುವ ವಿಡಿಯೋ ಮಾಡಿದ್ದಾಳೆ. 

ಬಳಿಕ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಇದು ಮನೆಯವರಿಗೆ ತಿಳಿದು ತಂದೆಯಿಂದ ಸಾಕಷ್ಟು ಏಟು ಕೂಡ ತಿಂದಳು. ವೈರಲ್ ಆಗಿರುವ ವಿಡಿಯೋದ ಇನ್ನೊಂದು ಭಾಗದಲ್ಲಿ ಬೀದಿಯಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಅವಳ ತಂದೆ ಹೇಗೆ ಅವಳಿಗೆ ಬೆಲ್ಟ್‌ನಿಂದ ಹೊಡೆಯುತ್ತಿದ್ದಾರೆ ಎಂಬುದನ್ನು ನೋಡಬಹುದು. 

ಈ ಸಂಪೂರ್ಣ ಘಟನೆಯು ಯುವ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಒಂದು ಎಚ್ಚರಿಕೆಯ ಕಥೆಯಾಗಿದೆ. ರೀಲ್ಸ್ ಗಾಗಿ ನಾವು ಮಾಡುವ ಸ್ಟಂಟ್ ಗಳು ಮನೆಯವರಿಗೆ ಕೆಟ್ಟ ಹೆಸರು ತರಬಹುದು ಅಥವಾ ಅವರಿಗೆ ಮುಜುಗರ ಉಂಟು ಮಾಡಬಹುದು ಎನ್ನುವ ಯೋಚನೆ ನಮ್ಮಲ್ಲಿ ಇರಬೇಕು. 

ಆನ್ ಲೈನ್ ನಲ್ಲಿ ಜವಾಬ್ದಾರಿಯುತ ನಡವಳಿಕೆಯನ್ನು ತೋರಿಸುವುದು ಕೂಡ ಬಹು ಮುಖ್ಯವಾಗಿದೆ. ಮಕ್ಕಳು ಈ ಬಗ್ಗೆ ಪೋಷಕರೊಂದಿಗೆ ಮುಕ್ತವಾಗಿ ಮಾತನಾಡಬೇಕು ಎನ್ನುವುದನ್ನು ಈ ವಿಡಿಯೋದಲ್ಲಿ ಹೇಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.