ಸಪ್ತಮಿ ಮನೆಯಲ್ಲಿ ನೀರವ ಮೌನ, ಬೆ ಚ್ಚಿಬಿದ್ದ ಯುವರಾಜ್ ಕುಮಾರ್
Mar 13, 2025, 21:07 IST
|

ಕನ್ನಡ ಚಿತ್ರರಂಗದ ಖ್ಯಾತ ನಟಿ ಕಾಂತಾರ ಚಿತ್ರದ ನಾಯಕಿ ಸಪ್ತಮಿ ಗೌಡ ಮನೆಯಲ್ಲಿ ನೀರವ ಮೌನ ಆವರಿಸಿದೆ. ಸುಮಾರು 15 ವರ್ಷಗಳ ನಂಟೊಂದು ಕಳಚಿದ್ದು, ಎಲ್ಲರ ಪ್ರೀತಿಯ ಮುದ್ದಿನ ಸಿಂಬಾನನ್ನು ಕಳೆದುಕೊಂಡು ಸಪ್ತಮಿ ಗೌಡ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ನಟಿ ಸಪ್ತಮಿ ಗೌಡ ಅವರ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ಶ್ವಾನ ಸಿಂಬಾ ಮೃತಪಟ್ಟಿದೆ. ಸುಮಾರು 15 ವರ್ಷಗಳಿಂದ ನಟಿ ಸಪ್ತಮಿ ಗೌಡ ಅವರ ಮನೆಯಲ್ಲಿದ್ದ, ಸಿಂಬಾ ಮನೆಯ ಸದಸ್ಯನಂತೆ, ಮನೆಯ ಮಗುವಿನಂತೆ ಎಲ್ಲರ ಪ್ರೀತಿ ಪಾತ್ರನಾಗಿದ್ದ. ಚಿಕ್ಕ ಮರಿಯಾಗಿ ನಟಿ ಸಪ್ತಮಿ ಗೌಡ ಮನೆ ಪ್ರವೇಶಿಸಿದ್ದ ಸಿಂಬಾ 15 ವರ್ಷಗಳ ಕಾಲ ಅವರ ಕುಟುಂಬದ ಜೊತೆಯಲ್ಲೇ ಇದ್ದು, ಅವರ ಜೀವನದ ಭಾಗವಾಗಿದ್ದ. ಆದರೆ ಮಾರ್ಚ್ 10ರಂದು ಸಿಂಬಾ ಕೊನೆಯುಸಿರೆಳೆದಿದೆ.
ಮನೆಯಲ್ಲಿ ಸಾಕಿದ ಶ್ವಾನದ ಮೇಲೆ ಪ್ರತಿಯೊಬ್ಬರಿಗೂ ಕೂಡ ಅತಿಯಾದ ಪ್ರೀತಿ ಇದ್ದೇ ಇರುತ್ತದೆ. ಕೆಲವರಂತೂ ಮನೆಯ ಇತರ ಸದಸ್ಯರಿಗಿಂತ ಶ್ವಾನವನ್ನೇ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅದರೊಂದಿಗೆ ಸಮಯ ಕಳೆಯುತ್ತಾರೆ. ಅವುಗಳು ಕೂಡ ಅಷ್ಟೇ ನಿಶ್ಕಲ್ಮಶ ಪ್ರೀತಿಯನ್ನು ಮಾಲೀಕನಿಗೆ ಕೊಡುತ್ತವೆ. ಆದರೆ ಅವುಗಳನ್ನು ಕಳೆದುಕೊಳ್ಳುವ ನೋವು ಯಾವ ಶತ್ರುವಿಗೂ ಬೇಡ. ಇದೀಗ ನಟಿ ಸಪ್ತಮಿ ಗೌಡ ಅದೇ ನೋವಿನಲ್ಲಿದ್ದಾರೆ.
ಪ್ರೀತಿಯ ಸಿಂಬಾನನ್ನು ಕಳೆದುಕೊಂಡ ನೋವಿನಲ್ಲಿರುವ ಸಪ್ತಮಿ ಗೌಡ ಆತನ ಬಗ್ಗೆ ಸುದೀರ್ಘ ಪೋಸ್ಟ್‌ವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಪ್ರೀತಿಯ ಸಿಂಬಾ ಗುಂಡು ಇಲ್ಲದ ಜಗತ್ತಿನಲ್ಲಿ ನಾವು ಬದುಕ ಬೇಕಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ.. ಯೋಚಿಸಿಯೂ ಇರಲಿಲ್ಲ.. ಅವನು ಯಾವಾಗಲೂ ನಮ್ಮ ಜೊತೆಯಲ್ಲೇ ಇರುತ್ತಾನೆ ಎಂದು ಭಾವಿಸಿದ್ದೆ. ನಡೆಯಲು ತಿಳಿಯದ ಸಮಯದಲ್ಲಿ ನಮ್ಮ ಮನೆಗೆ ಬಂದ ನೀನು, ಪ್ರತಿಯೊಬ್ಬರ ಮನಸ್ಸಿನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದೀಯಾ. ನೀನು ನನ್ನ ಜೀವನದ ಭಾಗವಾಗಿ ಒಳ್ಳೆಯ ನೆನಪುಗಳನ್ನು ನೀಡಿರುವುದಕ್ಕೆ ಧನ್ಯವಾದಗಳು. ನೀನು ಕೊಟ್ಟ ನೆನಪುಗಳು ನಮಗೆ ತುಂಬಾ ಪ್ರಿಯವಾದದ್ದು, ನಾವು ಶಾಶ್ವತವಾಗಿ ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇವೆ ಎಂದು ಭಾವುಕ ಪೋಸ್ಟ್‌ಅನ್ನು ಸಪ್ತಮಿ ಗೌಡ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.