ಗೆಳತಿ ವಿಚಾರದಲ್ಲಿ ಸಣ್ಣ ಸಿಗ್ನಲ್ ಕೊಟ್ಟ ಯುವರಾಜ್ ಕುಮಾರ್, ಇದೇ ವರ್ಷ ಸಿಹಿಸುದ್ದಿ ಪಕ್ಕಾ
Jun 9, 2025, 17:40 IST
|

ಸ್ಯಾಂಡಲ್‌ವುಡ್‌ನ ಭರವಸೆ ನಟರಲ್ಲಿ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಕೂಡ ಒಬ್ಬರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರನ್ನು ಅಭಿಮಾನಿಗಳು ಯುವ ಅವರಲ್ಲಿ ಕಾಣುತ್ತಿದ್ದಾರೆ. ಅಂದಹಾಗೆ ʻಯುವʼ ಸಿನಿಮಾ ಮೂಲಕವೇ ಅಭಿಮಾನಿಗಳ ಮನಸ್ಸು ಗೆದ್ದಿರುವ ಯುವ ರಾಜ್‌ಕುಮಾರ್ ಇದೀಗ ʻಎಕ್ಕʼ ಸಿನಿಮಾದ ಮೂಲಕ ಸಖತ್ ಮಾಸ್ ಆಗಿ ಎಂಟ್ರಿ ಕೊಡೋಕೆ ಸಜ್ಜಾಗಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.
ಯುವ ರಾಜ್‌ಕುಮಾರ್ ಅಭಿನಯದ ʻಎಕ್ಕʼ ಸಿನಿಮಾ ಜುಲೈ 18ರಂದು ರಿಲೀಸ್ ಆಗುತ್ತಿದೆ. ಇದೇ ಖುಷಿಯಲ್ಲಿರುವ ಅಭಿಮಾನಿಗಳಿಗೆ ಯುವ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯುವ ರಾಜ್‌ಕುಮಾರ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ, ಎಲ್ಲರೂ ಹೇಗಿದ್ದೀರಾ? ವೆದರ್ ಅಂತೂ ಸಖ್ಖತ್ತಾಗಿದೆ. ಈ ಟೈಮ್‌ಗೆ ಒಂದು ಕಪ್ ಕಾಫಿ ಕುಡಿದರೆ ಸೂಪರ್ ಆಗಿರುತ್ತದೆ. ಅದು ಸರಿ.. ಎಲ್ಲಾ ಹುಡುಗರಿಗೂ ಒಂದು ಪ್ರಶ್ನೆ, ನಿಮ್ಮ ಹುಡುಗಿಯನ್ನು ನೀವು ಏನೆಂದು ಕರೆಯುತ್ತೀರಾ? ಪ್ರೀತಿಯಿಂದ ಒಂದು ಹೆಸರು ಇಟ್ಟಿರುತ್ತೀರಾ ಅಲ್ವಾ? ಏನಂಥ ಸ್ವಲ್ಪ ಹೇಳುತ್ತೀರಾ? ಯಾಕಂದ್ರೆ ನಾನು ಏನಂಥ ಕರಿತೀನಿ ಗೊತ್ತಾ? ಎಂದಿದ್ದಾರೆ ಯುವ ರಾಜ್‌ಕುಮಾರ್. ಅಲ್ಲದೇ ಸ್ಟೇ ಟ್ಯೂನ್ಡ್ ಎಂದು ಕ್ಯಾಪ್ಶನ್ ಕೂಡ ಬರೆದುಕೊಂಡಿದ್ದಾರೆ.
ಈ ವಿಡಿಯೋಗೆ ಹಲವರು, ನಮಗೆ ಆ ಪುಣ್ಯ ಇಲ್ಲ ಬಾಸು, ನಾವು ಸಿಂಗಲ್ ಆಗಿದ್ದೇವೆ ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೂ ಹಲವರು, ಓ ದೊಡ್ಮನೆ ಯುವರಾಜ್ ಯಜಮಾನ್ರು ಯಾವ್ದೋ ಸಕ್ಕತ್ ಆಗಿರೋ ಪ್ರೀತಿ ಸಾಂಗ್ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದಂಗಿದೆ. ಪಕ್ಕಾ ಇದು ಎಕ್ಕ ಸಿನಿಮಾದ ಸಾಂಗ್ ಅಪ್ಡೇಟ್ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಯುವ ರಾಜ್‌ಕುಮಾರ್ ನಟನೆಯ ʻಎಕ್ಕʼ ಸಿನಿಮಾ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ನಿರ್ಮಾಣ ಮಾಡಿರುವ ಈ ಸಿನಿಮಾಗೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ. ಯುವ ರಾಜ್‌ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಮೂವಿ ಒಳ್ಳೆಯ ಹೆಸರು ಪಡೆಯೋದ್ರಲ್ಲಿ ಎರಡು ಮಾತಿಲ್ಲ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.