ಈಗ ಅವ್ನು ನನ್ನ ಮಗ ಅಲ್ಲ, ರಾಧಿಕಾ ಪಂಡಿತ್ ಗಂಡ ಎಂದು ಕುಟುಂಬ ಒಳ ಜಗಳ ಹೊರಹಾಕಿದ ಯಶ್ ತಾಯಿ

 | 
Bi
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಇದೀಗ ನಿರ್ಮಾಪಕಿಯಾಗಿ ಮೊದಲ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ನಡೆಸ್ತಿದ್ದಾರೆ.  ತಮ್ಮ ಮೊದಲ ಸಿನಿಮಾ ಕೊತ್ತಲವಾಡಿಯ ಬಿಡುಗಡೆಗಾಗಿ, ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಅಣ್ಣಾವ್ರ ಆಶೀರ್ವಾದ ಪಡೆಯಲು ಡಾ.ರಾಜ್ ಸ್ಮಾರಕಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಕಿಂಗ್ ಸ್ಟಾರ್​ ಯಶ್​ ಅವರ ತಾಯಿ ಹಾಗೂ ತಂದೆಯವರು ಪಿಎ ಪ್ರೊಡಕ್ಷನ್ಸ್ ಶುರು ಮಾಡಿದ್ದಾರೆ.
 ಈ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಆಗ್ತಿರುವ ಮೊದಲ ಚಿತ್ರಕ್ಕೆ ಕೊತ್ತಲವಾಡಿ ಎಂದು ಹೆಸರಿಟ್ಟಿದ್ದಾರೆ. ಈ ವೇಳೆ ಮಾಧ್ಯಮದ ಮುಂದೆ ಯಶ್‌ ಬಗ್ಗೆ ಸ್ವಲ್ಪ ಗರಂ ಆಗಿಯೇ ಮಾತನಾಡಿದ್ದಾರೆ.ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಯಶ್​ಗೆ ಸಿನಿಮಾ ತೋರಿಸಿ ಅಭಿಪ್ರಾಯ ಪಡೆಯುತ್ತೀರಾ ಎಂದು ಕೇಳಿದ್ದಕ್ಕೆ ಪುಷ್ಪ ಅವರು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಯಶ್ ಆಗಲಿ ರಾಧಿಕಾ ಯಾರಿಗೂ ನಾನು ಸಿನಿಮಾ ತೋರಿಸಲ್ಲ. ಮಗ ಬೇರೆ, ಅಮ್ಮ ಬೇರೆ. ಮಗ ಎಂದಮಾತ್ರಕ್ಕೆ ನನ್ನ ಮಾತು ಕೇಳಬೇಕು ಅಂತ ಏನೂ ಇಲ್ಲ. ಅವನು ನನ್ನ ಸಿನಿಮಾ ನೋಡುತ್ತಾನೆ ಅಂತ ನಾನು ನಿರೀಕ್ಷಿಸಲ್ಲ. ಜನನೇ ಸಿನಿಮಾ ನೋಡಿ ಹೇಳ್ತಾರೆ. ಮೊದಲು ಜನ ನೋಡಬೇಕು.ಯಶ್ ನೋಡಿದ ತಕ್ಷಣ ಸಿನಿಮಾ ಓಡುತ್ತಾ? ನನ್ನ ದುಡ್ಡು ವಾಪಸ್ ಬರುತ್ತಾ? ಪ್ರೇಕ್ಷಕರು ನೋಡಬೇಕು. ಮಗನ ಅಭಿಪ್ರಾಯ ನನಗೆ ಬೇಕಿಲ್ಲ. ಜನರ ಅಭಿಪ್ರಾಯ ಬೇಕು ಎಂದು ಹೇಳಿದ್ದಾರೆ. ಹಾಗೇ ಯಶ್‌ ಹಾಗೂ ರಾಧಿಕಾ ಸದ್ಯ ಮುಂಬೈನಲ್ಲಿ ಇದ್ದಾರೆ ಎಂದಿದ್ದಾರೆ.
ಕೊತ್ತಲವಾಡಿ ಚಿತ್ರವನ್ನ ಶ್ರೀರಾಜ್‌ ಡೈರೆಕ್ಷನ್ ಮಾತ್ರ ಮಾಡಿಲ್ಲ. ಬದಲಾಗಿ ಈ ಚಿತ್ರದ ಕಥೆಯನ್ನೂ ಇವರೇ ಮಾಡಿದ್ದಾರೆ. ಎರಡು ಜವಾಬ್ದಾರಿಗಳ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಬೇರೆ ರೀತಿನೇ ಕಾಣಿಸುತ್ತಿದ್ದಾರೆ. ಈ ಹಿಂದಿನ ಸಿನಿಮಾಗಳ ಲೆಕ್ಕ ಒಂದು. ಆದರೆ, ಕೊತ್ತಲವಾಡಿ ಸಿನಿಮಾ ಖದರ್ ಬೇರೆ ಇದೆ ಅನ್ನೋದನ್ನೆ ಸಿನಿಮಾ ತಂಡ ಹೇಳಿಕೊಂಡು ಬರ್ತಿದೆ.ಇನ್ನು ಕಾವ್ಯ ಶೈವ ಈ ಸಿನಿಮಾ ನಾಯಕಿ. ಪೃಥ್ವಿ ಅಂಬಾರ್‌‌ ಅಬ್ಬರಿಸೋದು ನಾಯಕ, ನಾಯಕಿಯ ಲವ್‌ ಸ್ಟೋರಿ ಝಲಕ್‌ ಕೂಡ ಟೀಸರ್‌ನಲ್ಲಿದೆ. ಗೋಪಾಲ್‌‌ ದೇಶಪಾಂಡೆ ವಿಲನ್‌ ಆಗಿಯೂ ಅಬ್ಬರಿಸಿದ್ದಾರೆ. ಒಟ್ಟಾರೆ ಟೀಸರ್‌ ಕಂಡು ಸಖತ ಖುಷ್‌ ಆಗಿದ್ದಾರೆ ಸಿನಿ ಪ್ರಿಯರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.