ಬಿಗ್ ಬಾಸ್ ಮನೆಗೆ ಡಾ ಬ್ರೋ ಜೊತೆಗೆ ಹಲವಾರು ಯೂಟ್ಯೂಬ್ ಸ್ಟಾರ್ ಗಳು ಕೂಡ ಆಯ್ಕೆ
Aug 31, 2024, 09:25 IST
|
ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸಿದ್ಧತೆಗಳು ಜೋರಾಗಿದೆ. ಲಕ್ಷಾಂತರ ಪ್ರೇಕ್ಷಕರ ಮೆಚ್ಚಿನ ಶೋಗೆ ತೆರೆ ಮರೆಯಲ್ಲಿ ಸಿದ್ಧತೆ ಆರಂಭವಾಗಿದೆ. ಅಕ್ಟೋಬರ್ ತಿಂಗಳ ಮೊದಲ ವಾರದಲ್ಲೇ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಲಿದ್ದು, ಸಂಭವನೀಯ ಅನೇಕ ಪಟ್ಟಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಕೆಳಗಿನ ನಟ-ನಟಿಯರು ಈ ಬಾರಿಯ ಬಿಗ್‌ಬಾಸ್‌ಗೆ ಸ್ಪರ್ಧಿಗಳಾಗಿ ಬರುವ ಸಾಧ್ಯತೆಗಳು ಹೆಚ್ಚಿವೆ.
ಕನ್ನಡ ಚಿತ್ರರಂಗದ ಹಿರಿಯ ನಟ ನಿರ್ದೇಶಕ ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ಬಿಗ್ ಬಾಸ್‌ಗೆ ಬರಬಹುದು ಎನ್ನಲಾಗುತ್ತಿದೆ. ಚೆಲುವಿನ ಚಿಲಿಪಿಲಿ, ದುಷ್ಟ, ಚೈತ್ರದ ಚಂದ್ರಮ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಪಂಕಜ್ ನಾರಾಯಣ್ ಇತ್ತೀಚಿಗೆ ಸಿರಿಗನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಊರ್ಮಿಳಾ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.
ಲಕ್ಷ್ಮೀ ಬಾರಮ್ಮ ಧಾರಾವಾಹಿ ಕೀರ್ತಿ ಪಾತ್ರದ ಮೂಲಕ ಸಖತ್ ಫೇಮಸ್ ಆಗಿರುವ ನಟಿ ತನ್ವಿ ರಾವ್ ಈ ಬಾರಿ ಬಿಗ್ ಬಾಸ್‌ಗೆ ಬರುವ ಸಾಧ್ಯತೆ ಹೆಚ್ಚಿದೆ. ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿರುವ ತನ್ವಿ ರಾವ್ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿ ಎನ್ನಲಾಗುತ್ತಿದೆ. ಸದ್ಯ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರವನ್ನು ಅಂತ್ಯಗೊಳಿಸಲಾಗಿದೆ.
ಸೋಶಿಯಲ್ ಮೀಡಿಯಾ ಸ್ಟಾರ್, ಯೂಟ್ಯೂಬರ್ ವರ್ಷಾ ಕಾವೇರಿ ಕೂಡ ಬಿಗ್ ಬಾಸ್‌ಗೆ ಬರುವ ನಿರೀಕ್ಷೆ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಕಳೆದ ಸೀಜನ್‌ನಲ್ಲಿಯೂ ಇವರ ಹೆಸರು ಕೇಳಿಬಂದಿತ್ತ. ಆದರೆ ಈ ಬಾರಿ ಬರುವ ನಿರೀಕ್ಷೆ ಹೆಚ್ಚಾಗಿದೆ. ಕಿರುತೆರೆ ನಟಿ ಶರ್ಮಿತಾ ಗೌಡ ಬಿಗ್ ಬಾಸ್‌ಗೆ ಬರುವ ನಿರೀಕ್ಷೆ ಇದೆ. ವಿಲನ್ ಪಾತ್ರದಲ್ಲೇ ಹೆಚ್ಚು ಗಮನ ಸೆಳೆದಿರುವ ಶರ್ಮಿತಾ ಗೌಡ 'ಗೀತಾ' ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು.
ಮಜಾ ಭಾರತ 'ಗಿಚ್ಚಿ ಗಿಲಿಗಿಲಿ' ಶೋ ಖ್ಯಾತಿಯ ರಾಘವೇಂದ್ರ ಈ ಬಾರಿ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಹೆಚ್ಚಿದೆ. ಕಿರುತೆರೆಯಲ್ಲೂ ನಟನೆ ಮಾಡುತ್ತಿರುವ ರಾಘವೇಂದ್ರ ಮಹಿಳಾ ಪಾತ್ರಗಳ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯ' ಧಾರಾವಾಹಿಯಲ್ಲಿ ಇನ್ಸ್‌ಪೆಕ್ಟರ್ ಸತ್ಯ ಪಾತ್ರದ ಮೂಲಕ ಸಖತ್ ಫೇಮಸ್ ಆಗಿರುವ ಟಿ ಗೌತಮಿ ಜಾಧವ್ ಈ ಬಾರಿ ಬಿಗ್ ಬಾಸ್‌ಗೆ ಬರುವ ಸಾಧ್ಯತೆ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.