ಹನುಮಂತನ ಪರ ನಿಂತ ಅನುಶ್ರೀ ಅಕ್ಕ, ಆಸಕ್ತಿ ಕಳೆದುಕೊಂಡ ಬಿಗ್ ಬಾಸ್ ಸಹಸ್ಪರ್ಧಿಗಳು
Jan 25, 2025, 08:11 IST
|

ಹನುಮಂತ ಎನ್ನುವ ವ್ಯಕ್ತಿ ಕರ್ನಾಟಕದಲ್ಲಿ ಬಲು ಫೇಮಸ್. ಹನುಮಂತ ಅಂದ ಅಂದಕೂಡಲೇ ಕೇಳುಗರು ಸರಿಗಮಪ ಹನುಮಂತನಾ? ಎಂದು ಪ್ರಶ್ನಿಸುವುದುಂಟು. ತನ್ನ ಮುಗ್ಧತೆ ಮೂಲಕ, ಹಾಡಿನ ಮೂಲಕ ಮನೆಮಾತಾದವರು ಹನುಮಂತ. ಇವರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಸರಿಗಮಪದಲ್ಲಿ ಹಾಡುವುದರ ಜೊತೆಗೆ ಡಾನ್ಸ್ ರಿಯಾಲಿಟಿ ಶೋನಲ್ಲಿ ಕುಣಿದು ತಾವು ಹಾಡೋದಕ್ಕೂ ಸೈ, ಕುಣಿಯೋದಕ್ಕೂ ಸೈ ಎಂದು ತೋರಿಸಿಕೊಟ್ಟರು ಈದೀಗ ಬಿಗ್ಬಾಸ್ ಮನೆಯಲ್ಲಿ ಕೂಡ ಮಿಂಚುತ್ತಿದ್ದಾರೆ.
ಸರಿಗಮಪ ಶೋನ ನಿರೂಪಕಿ ಅನುಶ್ರೀ, ಹನುಮಂತನನ್ನು ತಮ್ಮ ಎಂದು ಕರೆಯುತ್ತಿದ್ದರು.ಹನುಮಂತ ಪ್ರತಿನಿತ್ಯ ಒಂದಲ್ಲ ಒಂದು ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ. ಇವರ ಹಾಡಿಗಿಂತ ಇತರ ವಿಚಾರಗಳೇ ಸದ್ದು ಮಾಡಿದ್ದವು ಅಂದರೆ ತಪ್ಪೇನಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ತುಂಬ ಚರ್ಚೆಗಳಾಗಿವೆ. 'ಡಾನ್ಸ್ ಕರ್ನಾಟಕ ಡಾನ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಹನುಮಂತ ಅವರು ಚೆನ್ನಾಗಿ ನೃತ್ಯ ಪ್ರದರ್ಶನ ನೀಡಿದ್ದರು.
ಅನೇಕ ಸೆಲೆಬ್ರಿಟಿಗಳು ಕೂಡ ಇವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದರು. ಅಷ್ಟರಮಟ್ಟಿಗೆ ಫೇಮಸ್ ಆಗಿದ್ದರು ಹನುಮಂತ. ಈಗಲೂ ಹನುಮಂತ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ, ಹಾಡುತ್ತಾರೆ. ಹೀಗಾಗಿ ಇವರಿಗೆ 'ಬಿಗ್ ಬಾಸ್ ಕನ್ನಡ ಸೀಸನ್ 7' ಆಫರ್ ಬಂದಿತ್ತು ಎಂಬ ಗಾಸಿಪ್ ಕೂಡ ಇತ್ತು. ಆದರೆ ಹನುಮಂತ ಹೋಗಲಿಲ್ಲ. ಆದರೆ ಈದೀಗ ಬಿಗ್ಬಾಸ್ ಮನೆಯಲ್ಲಿ ಒಳ್ಳೆಯ ಆಟವಾಡಿ ಕರ್ನಾಟಕದ ಜನರ ಮನ ಗೆದ್ದಿದ್ದಾರೆ.
ಇನ್ನು ಅನುಶ್ರೀ ಹನುಮಂತ ಅವರಿಗೆ ಈ ಹಿಂದೆ ಬೈಕ್ ತೆಗೆದುಕೊಳ್ಳಲು ಹಣ ನೀಡಿದ್ದರು. ಅವರನ್ನು ತಮ್ಮನಂತೆ ಅಂದುಕೊಳ್ಳುತ್ತೇನೆ ಎಂದಿದ್ದರು. ಅವರ ಮನೆ ಕಟ್ಟುವಾಗ ಸಹ ಸಹಾಯ ಹಸ್ತ ಚಾಚಿದ್ದರು. ಇದೀಗ ಹನುಮಂತ ಪರ ವೋಟ್ ಮಾಡಲು ಮನವಿ ಮಾಡಿದ್ದಾರೆ ಈಗಾಗಲೇ ಒಳ್ಳೆಯ ಮನುಷ್ಯ ಎಂದೆನಿಸಿಕೊಂಡು ಉತ್ತಮ ಪ್ರದರ್ಶನ ನೀಡುತ್ತಿರುವ ಹನುಮಂತ ಬಿಗ್ಬಾಸ್ ಮನೆಯ ಟಫ್ ಸ್ಪರ್ಧಿ ಕೂಡ ಹೌದು. ಹಾಗಾಗಿ ಈ ಸಲ ಇವರು ಕಪ್ ಗೆಲ್ಲುವ ಎಲ್ಲ ಸೂಚನೆಗಳಿವೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.