ಶೈನ್ ಶೆಟ್ಟಿಗೆ ಕೈಕೊಟ್ಟ ದೀಪಿಕಾ ದಾಸ್, ಸದ್ದಿಲ್ಲದೆ ದಿಡೀರ್ ಮದುವೆ ಆಗಿದ್ಯಾಕೆ

 | 
ಹದದ

ಬಿಗ್​ಬಾಸ್ ಖ್ಯಾತಿಯ ದೀಪಿಕಾ ದಾಸ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ತಮ್ಮ ವಿವಾಹದ ಫೋಟೋಸ್ ಅವರು ಶೇರ್ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ನಟಿ ಮದುವೆ ಫೋಟೋಸ್ ಅಪ್ಲೋಡ್ ಮಾಡಿದ್ದು ಅವು ಈಗ ವೈರಲ್ ಆಗಿವೆ. ಅದನ್ನು ನೋಡಿದ ನೆಟ್ಟಿಗರು ಶೈನ್ ಶೆಟ್ಟಿ ಅವರ ಫೋಟೋ ಹಾಕಿ ಕರಿಮಣಿ ಮಾಲೀಕ ನೀನಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

 ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಅವರು ಮದುವೆಯಾಗಲಿದ್ದಾರೆಂದೇ ಎಲ್ಲರೂ ಅಂದುಕೊಂಡಿದ್ದರು. ಅವರಿಬ್ಬರು ಬಿಗ್​ಬಾಸ್ ಮನೆಯಲ್ಲಿಯೂ ಕ್ಲೋಸ್ ಆಗಿದ್ದರು. ತುಂಬಾ ಅತ್ಮೀಯರಾಗಿದ್ದರು. ಇವರು ಲವರ್ಸ್ ಎಂದೇ ಫೇಮಸ್ ಆಗಿದ್ದು ಖಂಡಿತಾ ಮದುವೆಯಾಗುತ್ತಾರೆ ಎಂದು ನಂಬಿದ್ದರು ಜನ. ಆದರೆ ಈಗ ದೀಪಿಕಾ ಮದುವೆಯಾಗಿದ್ದಾರೆ.

ರಿಯಾಲಿಟಿ ಶೋ ಬಿಗ್‌ ಬಾಸ್‌ 9ನೇ ಆವೃತ್ತಿಯಲ್ಲಿ ಭಾಗವಹಿಸಿದ್ದ ದೀಪಿಕಾ ದಾಸ್ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿದ್ದರು ಮದುವೆಯಾದ ಹುಡುಗನ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಮಿಸ್ಟರ್ & ಅಂಡ್ ಮಿಸಸ್ ಡಿ ಎಂದು ಮಾತ್ರ ಬರೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ ನಟಿ ದೀಪಿಕಾ ದಾಸ್ ಗೋವಾದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ವೆಲ್‌ಕಮ್‌ ಟು ಅಡ್ವೆಂಚರ್ ವರ್ಲ್ಡ್ ಎಂದು ಅವರು ಬರೆದುಕೊಂಡಿದ್ದಾರೆ. ವಧು ವರರ ಕುಟುಂಬಸ್ಥರು ಮಾತ್ರ ಈ ಮದುವೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಇತ್ತೀಚೆಗೆ ಅಂತರಪಟ ಎನ್ನುವ ಧಾರವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು.

ದೇಶ-ವಿದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದ ದೀಪಿಕಾ ದಾಸ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರವಾಸದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಈಗ ದಿಢೀರ್ ಎಂದು ಮದುವೆ ಚಿತ್ರಗಳನ್ನು ಹಂಚಿಕೊಂಡಿದ್ದು, ಶಾಕ್ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.