ಡ್ರೋನ್ ಪ್ರತಾಪ್ ಎಷ್ಟು ದೊಡ್ಡ ವ್ಯಕ್ತಿ ಗೊತ್ತಾ, ನೀವು ಏನು ಅಂದು ಕೊಂಡಿದ್ದೀರಾ ಈತನ ಬಗ್ಗೆ

 | 
Bc

ಎರಡು ವರ್ಷದ ಹಿಂದೆ ಡ್ರೋನ್ ಬಾಯ್ ಎಂದು ಪ್ರಪಂಚದಾದ್ಯಂತ ಗುರುತಿಸಿಕೊಂಡಿದ್ದ ಮಂಡ್ಯದ ಹುಡುಗ ಪ್ರತಾಪ್ ಮಾಡಿದ ಸಾಧನೆಗೆ ಯಾವುದೇ ಪುರಾವೆಗಳಿಲ್ಲ. ಡ್ರೋಣ್ ಪ್ರತಾಪ್ ಸಾಧನೆ ನೋಡಿ ರಾಜ್ಯ ಸರ್ಕಾರ ಹಲವು ಸರ್ಕಾರಿ ಕೆಲಸ ನೀಡಲು ಮುಂದಾಗಿತ್ತು. ಅಲ್ಲದೇ ಈತನಿಗೆ ಹಲವಾರು ಚಿನ್ನದ ಪದಕಗಳನ್ನ ಕೂಡ ನೀಡಲಾಗಿದೆ. 

87 ರಾಷ್ಟ್ರಗಳಲ್ಲಿ ಈತನನ್ನು ಆಹ್ವಾನಿಸಲಾಗಿತ್ತು. ಸೆಲೆಬ್ರಿಟಿಗಳು, ರಾಜಕಾರಣಿಗಳು, ಮಾಧ್ಯಮದವರು, ನೆಟ್ಟಿಗರು ಎಲ್ಲರೂ ಈತನ ಸಾಧನೆ ಮೆಚ್ಚಿ ಕೊಂಡಾಡಿದ್ದರು. ಇಷ್ಟೇ ಅಲ್ಲದೇ ಮೋದಿ ಕೂಡ ಈತನ ಸಾಧನೆಗೆ ಮಾರುಹೋಗಿದ್ದರು. ಮುರಿದ ಮಿಕ್ಸರ್ ಗ್ರೈಂಡರ್ ಮತ್ತು ಟೆಲಿವಿಶನ್ ಬಳಸಿ ಪ್ರತಾಪ್ 600 ಡ್ರೋಣ್‌ಗಳನ್ನ ತಯಾರಿಸಿದ್ದ ಎನ್ನಲಾಗಿತ್ತು. 

ಆದ್ರೆ ಇದ್ಯಾವೂದಕ್ಕೂ ಸಾಕ್ಷಿಗಳಿಲ್ಲ. ಈ 600 ಡ್ರೋಣ್‌ಗಳ ಫೋಟೋಗಳು ಕೂಡ ಇಲ್ಲ. ಇನ್ನು ಈತ ಡ್ರೋಣ್ ಫೋಟೋ ಎದುರಿಗೆ ನೀಡಿದ ಪೋಸ್‌ ನೋಡಿದ್ರೆ ಇವೆಲ್ಲದರಲ್ಲೂ ಬೇರೆ ಬೇರೆ ಕಂಪೆನಿಯ ಪಾರ್ಟ್ ಹೊಂದಿದ ಡ್ರೋಣ್‌ಗಳೇ ಕಂಡುಬಂದಿತ್ತು. ಡ್ರೋಣ್ ಪ್ರತಾಪ್, ಮಾಡರ್ನ್ ಡ್ರೋಣಾಚಾರ್ಯ ಅಂತೆಲ್ಲಾ ಬಿರುದು ಗಿಟ್ಟಿಸಿಕೊಂಡಿದ್ದ ಪ್ರತಾಪ್ ಎರಡು ವರ್ಷಗಳಿಂದ ಎಲ್ಲರಿಗೂ ಚಿರಪರಿಚಿತ. 

ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಈತನ ಸಾಧನೆ ಬಗ್ಗೆ ಎಲ್ಲರೂ ಇಲ್ಲಿಯತನಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೆ ಕೆಲ ರಿಯಾಲಿಟಿ ಚೆಕ್ ಮಾಡಿದಾಗ, ಈತ ಡ್ರೋಣ್ ಕಂಡು ಹಿಡಿದಿರುವ ಬಗ್ಗೆ ಎಲ್ಲೂ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಇನ್ನು ಈತನನ್ನು ನಂಬಿ ಜಗತ್ತಿಗೆ ಪರಿಚಯಿಸಿದ ನಟ ಜಗ್ಗೇಶ್ ಅವರು ಕೂಡ ಒಂದು ಕ್ಷಣ ನಿಬ್ಬೆರಗಾಗಿದ್ದಾರೆ. ಅತ್ಯಂತ ಮೇಧಾವಿಯಂತೆ ಮಾತನಾಡುವ ಇವರು ಈಗಾಗಲೆ ಸಾಧಾನಂದ ಗೌಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಷ್ಟೇ ಏಕೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರೊಂದಿಗೆ ಕೂಡಾ ಫೋಟೋಗೆ ಪೋಸ್ ನೀಡಿದ್ದಾರೆ. 

ಅಲ್ಲದೆ ಸೆಲೆಬ್ರಿಟಿಗಳು ಖ್ಯಾತ ನಟ ರು ಆದ ಉಪೇಂದ್ರ, ಗಣೇಶ್ , ಜಗ್ಗೇಶ್ ಅವರೊಂದಿಗೆ ಕೂಡಾ ಫೋಟೋ ತೆಗೆದುಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಅಲ್ಲಿರುವ ಡ್ರೋನ್ ಪ್ರತಾಪ್ ಅವರು ತಮ್ಮ  ಒಳ್ಳೆಯ ಗುಣದಿಂದ ಹಲವರ ಮನ ಗೆದ್ದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.