ಸ್ಪಂದನಾ ಸಾ.ವನ್ನಪ್ಪಿದ ಬಳಿಕ ರಾಘು ತನ್ನ ಮಗನ ಜೊತೆ ಹೇಗಿದ್ದಾರೆ ಗೊತ್ತಾ

 | 
ಕಿ

ಸ್ಯಾಂಡಲ್‌ವುಡ್‌ನ ಚಿನ್ನಾರಿ ಮುತ್ತ ವಿಜಯ್‌ ರಾಘವೇಂದ್ರ ಸಿನಿಮಾ ಬಿಡುಗಡೆಯ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಪತ್ನಿ ಸ್ಪಂದನಾ ಇಷ್ಟಪಟ್ಟಿದ್ದ ಕದ್ದ ಚಿತ್ರ ಸಿನಿಮಾ ನಿನ್ನೆ ಬಿಡುಗಡೆಯಾಗಿದೆ. ಟ್ರೇಲರ್‌ ಮೂಲಕ ಒಂದಷ್ಟು ಕುತೂಹಲ ಮೂಡಿಸಿರುವ ಈ ಸಿನಿಮಾದಲ್ಲಿ ಹಿಂದೆಂದೂ ಕಾಣಿಸದ ರೀತಿಯಲ್ಲಿ ವಿಜಯ್‌ ರಾಘವೇಂದ್ರ ಎದುರಾಗಿದ್ದಾರೆ. 

ಖ್ಯಾತ ಲೇಖಕನ ವೇಷದಲ್ಲಿ ಅವರ ಆಗಮನವಾಗುತ್ತಿದೆ. ಕೃತಿ ಚೌರ್ಯ ವಿಷಯವನ್ನೇ ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸುಹಾನ್‌ ಕೃಷ್ಣ ಅವರು.
ಆದರೆ, ಈ ಸಿನಿಮಾ ಬಿಡುಗಡೆಯ ಜತೆಗೆ ಮನದೊಳಗೆ ಹೇಳಿಕೊಳ್ಳಲಾರದಷ್ಟು ನೋವಿದ್ದರೂ, ಸಿನಿಮಾ ನಿರ್ಮಾಪಕರಿಗೆ ನಷ್ಟವಾಗಬಾರದೆಂಬ ಕಾರಣಕ್ಕೆ ಸಕ್ರಿಯರಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಮೂಡಿ ಬಂದ ರೀತಿಯ ಜತೆಗೆ ನಿಧನರಾದ ಪತ್ನಿ ಸ್ಪಂದನಾ ಅವರ ಬಗ್ಗೆಯೂ ವಿಜಯ್‌ ರಾಘವೇಂದ್ರ ಹೇಳಿಕೊಳ್ಳುತ್ತಲೇ ಬರುತ್ತಿದ್ದಾರೆ. 

ಸಂದರ್ಶನದ ವೇಳೆಯೇ ಕಣ್ಣೀರಾಗುತ್ತಿದ್ದಾರೆ.
ಬೆಳಗ್ಗೆ ಹಲ್ಲುಜ್ಜುವುದರಿಂದ ಹಿಡಿದು, ರಾತ್ರಿ ಮಲಗುವವರೆಗೂ ಅವಳ ನನ್ನ ಜತೆಗಿರುತ್ತಿದ್ದಳು. ತಮಾಷೆ ಮಾಡುವುದು, ಮಾತುಕತೆ, ಅದು ಬೇಕು, ಇದು ಬೇಡ ಹೀಗೆ ಇನ್ನೂ ಸಾಕಷ್ಟು. ಇನ್ಮೇಲೆ ನನಗೆ ಅವಳ ಕಾಲ್‌ ಬರಲ್ಲ. ಯಾಕೆ ಲೇಟ್‌ ಎಂದು ಕೇಳುವವರಿಲ್ಲ. ಬೇಗ ಬಂದ್ರಿ ಎಂದ್ರು ಹೇಳುವವರಿಲ್ಲ. ಆದರೆ, ಅವಳು ನನ್ನ ಜತೆ ಇದ್ದಷ್ಟು ದಿನ ನನಗೆ ಒಂದು ರೂಟ್‌ ಹಾಕಿಕೊಟ್ಟು ಹೋಗಿದ್ದಾಳೆ. 

ಏನ್‌ ಮಾಡಬೇಕು, ಏನು ಮಾಡಬಾರದು ಎಲ್ಲವನ್ನೂ ಹೇಳಿಕೊಟ್ಟಿದ್ದಾಳೆ. ನನಗಾಗಿಯೇ ಒಂದು ಬ್ಲೂ ಪ್ರಿಂಟ್‌ ಹಾಕಿಕೊಟ್ಟಿದ್ದಾಳೆ. ಹಾಗಾಗಿ ಅವಳಿಲ್ಲ ಎಂಬುದಕ್ಕಿಂತ, ಅವಳು ಹಾಕಿಕೊಟ್ಟ ದಾರಿಯಲ್ಲೇ ಸಾಗುತ್ತೇನೆ ಎಂದಿದ್ದಾರೆ ವಿಜಯ್‌ ರಾಘವೇಂದ್ರ. ಇನ್ನು ಕದ್ದಚಿತ್ರ ಸಿನಿಮಾ ವೀಕ್ಷಿಸಲು ಮಗನ ಜೊತೆ ಬಂದಿದ್ದ ರಾಘು ನಡುವೆ ಶೌರ್ಯ ಮಾಡಿದ ಕೆಲಸಗಳಿಗೆ ಕೆಂಗಣ್ಣು ಬೀರಿ ಆಮೇಲೆ ಸ್ಪಂದನಾ ನೆನಪಾಗಿ ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.