ಫಿನಾಲೆಗೆ ರೆಡಿಯಾದ ದೊಡ್ಮನೆ, ಕಿಚ್ಚನ ಗ್ರಾಂಡ್‌ ಎಂಟ್ರಿಗೆ ಸ್ಪರ್ಧಿಗಳು ಫಿದಾ

 | 
Je
ಪ್ರೇಕ್ಷಕರೆಲ್ಲಾ ಇಂದು ಮತ್ತು ನಾಳೆ ನಡೆಯುವ ಬಿಗ್​ಬಾಸ್ ಶೋಗಾಗಿ ಎದುರು ನೋಡುತ್ತಿದ್ದಾರೆ. ಕನ್ನಡದ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್ ಫಿನಾಲೆಗೆ ಬಂದು ತಲುಪಿದೆ. ಕಿಚ್ಚ ಸುದೀಪ್ ಅವರ ಕೊನೆ ಸೀಸನ್​​ನಲ್ಲಿ ಏನೇನು ಹೇಳಲಿದ್ದಾರೆ ಎನ್ನುವುದು ಜನರ ಮನ ಕದಡಿದೆ. ಗ್ರ್ಯಾಂಡ್ ಫಿನಾಲೆಗೆ ಭರ್ಜರಿಯಾಗಿ ರೆಡಿಯಾಗಿರುವ ವೇದಿಕೆ ಮೇಲೆ ಕಿಚ್ಚ ಸುದೀಪ್ ಅವರು ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಸ್ನೇಹಿತರೇ... ಇದು ಬಿಗ್ಬಾಸ್ ಶೋ ಅಲ್ಲಿ ಸುದೀಪ್‌ ಅವರ ಕೊನೆಯ ನಿರೂಪಣೆ. ಈ ಹೊತ್ತಿನಲ್ಲಿ ಮನೆಯಲ್ಲಿರುವ 6 ಸ್ಪರ್ಧಿಗಳ ಪೈಕಿ ಒಬ್ಬರಿಗೆ ಅತಿ ಹೆಚ್ಚು ಮತಗಳು ಬಂದಿವೆ ಎಂದು ಈಗಾಗಲೇ ಹೇಳಲಾಗುತ್ತಿದೆ. ಆದರೆ ನಿಖರವಾಗಿ ಯಾರಿಗೆ ಎಂದು ತಿಳಿದಿಲ್ಲ. ಸೀಸನ್‌ 11 ರ ವಿನ್ನರ್‌ ಯಾರೆಂಬುದು ಸಾಕಷ್ಟು ಚರ್ಚೆಗಳು ಪ್ರೇಕ್ಷಕರಲ್ಲಿ ನಡೆಯುತ್ತಿವೆ. 
ಇನ್ನು ಜಗಮಗಿಸೋ ವೇದಿಕೆಯಲ್ಲಿ ಬಾದಷಾ ಕಿಚ್ಚ ಸುದೀಪ್ ಸಖತ್ ಆಗಿಯೇ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡ ಮ್ಯಾಕ್ಸ್ ಸಿನಿಮಾದ ಸಾಂಗ್​ಗೆ ಕಿಚ್ಚ ಸೂಪರ್​ ಆಗಿಯೇ ಸ್ಟೆಪ್ಸ್ ಹಾಕಿದ್ದಾರೆ. ಅಷ್ಟು ಸುಲಭವಾಗಿ ಎಲ್ಲಿಯು ಸುದೀಪ್ ಅವರು ವೇದಿಕೆ ಮೇಲೆ ಡ್ಯಾನ್ಸ್ ಮಾಡಲ್ಲ. ಆದರೆ ಬಿಗ್​ಬಾಸ್​​ನ ಕಲರ್ ಫುಲ್ ಆಗಿ ಅದ್ಧೂರಿಯಾಗಿರುವ ಸ್ಟೇಜ್ ಮೇಲೆ ಸುದೀಪ್ ಒಂದೆರಡು ಹೆಜ್ಜೆಗಳನ್ನು ಹಾಕಿ ರಂಜಿಸಿದ್ದಾರೆ
17ನೇ ವಾರದ ಬಿಗ್​ಬಾಸ್​ ಜರ್ನಿ ಇನ್ನೇನು ಮುಕ್ತಾಯ ಆಗುತ್ತಿದೆ. ಮೊದಲು 17 ಸ್ಪರ್ಧಿಗಳು ಮನೆಗೆ ನೇರವಾಗಿ ಎಂಟ್ರಿಕೊಟ್ಟಿದ್ದರು. ಇದಾದ ಮೇಲೆ ಹನಮಂತು, ರಜತ್ ಸೇರಿ ಮೂವರು ವೈಲ್ಡ್ ಕಾರ್ಡ್ ಮೂಲಕ ಮನೆಯೊಳಕ್ಕೆ ಬಂದಿದ್ದರು. ಈ ರೀತಿ ವೈಲ್ಡ್ ಕಾರ್ಡ್​ನಲ್ಲಿ ಎಂಟ್ರಿ ಕೊಟ್ಟವರ ಪೈಕಿ ಇಬ್ಬರು ಈಗ ಫಿನಾಲೆ ಹಂತದಲ್ಲಿರುವುದು ವಿಶೇಷವಾಗಿದೆ. ಒಟ್ಟು 6 ಜನರಲ್ಲಿ ಒಬ್ಬರು ಮಾತ್ರ ಫೈನಲ್​ನಲ್ಲಿ ಟ್ರೋಫಿ ಎತ್ತಿ ಹಿಡಿಯಲಿದ್ದಾರೆ.