// custom css

ಮೈಯಲ್ಲಾ ಡ್ರೋನ್ ಪ್ರತಾಪ್ ಟ್ಯಾಟೊ ಹಾಕಿಸಿಕೊಂಡ ಅಭಿಮಾನಿ, 'ಕಾಗೆ ಎಂದವರಿಗೆ ಇದೇ ಉತ್ತರ ಎಂದ ಪ್ರತಾಪ್'

 | 
ಕದದ

ಬಿಗ್‌ಬಾಸ್ ಕನ್ನಡ ಸೀಸನ್ 10ಗೆ ಅದ್ಧೂರಿಯಾಗಿ ತೆರೆಬಿದ್ದಿದೆ. ನಿನ್ನೆ ನಡೆದ ಬಿಗ್‌ಬಾಸ್ ಫಿನಾಲೆಯಲ್ಲಿ ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿ ಹೊರಬಂದಿದ್ದಾರೆ. ಅವರೇ ಗೆಲ್ಲಬಹುದು ಅನ್ನೋ ನಿರೀಕ್ಷೆಯನ್ನು ಹುಟ್ಟಾಕಿದ್ದರೂ, ಕೊನೆಯ ಹಂತದಲ್ಲಿ ಗೆಲುವು ಕಾರ್ತಿಕ್ ಕಡೆಗೆ ವಾಲಿತ್ತು.

ಡ್ರೋನ್ ಪ್ರತಾಪ್ ಮೊದಲ ರನ್ನರ್ ಆಗಿ ಹೊರಹೊಮ್ಮಿದ್ದಾರೆ. ಇವರಿಗೆ 10 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಹಾಗೂ ಬೌನ್ಸ್ ಕಡೆಯಿಂದ ಒಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಹುಮಾನವಾಗಿ ನೀಡಲಾಗಿದೆ. ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದಂತೆ ಡ್ರೋನ್ ಪ್ರತಾಪ್ ಇದೆಲ್ಲವನ್ನೂ ಅಸಹಾಯಕರಿಗೆ ನೀಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ.

ಇಷ್ಟೇ ಅಲ್ಲದೆ.. ಬಿಗ್ ಬಾಸ್‌ನಿಂದ ಈಗತಾನೇ ಹೊರಗೆ ಬಂದಿರೋ ಡ್ರೋನ್ ಪ್ರತಾಪ್ ತಮ್ಮ ಮುಂದಿನ ನಡೆಯ ಬಗ್ಗೆನೂ ಹೇಳಿಕೆ ಕೊಟ್ಟಿದ್ದಾರೆ. ಇದೂವರೆಗೂ ಕೊಟ್ಟಿರುವ ಪ್ರೀತಿಯನ್ನು ಮುಂದೆನೂ ಕೊಡಿ ಎಂದಿದ್ದಾರೆ. ಹಾಗೇ ಸಾಮಾಜಿಕ ಜಾಲ ತಾಣದಲ್ಲಿ ಇನ್ಮುಂದೆ ಅವರು ಮಾಡುವ ಕೆಲಸಗಳನ್ನು ನೋಡಿ, ಪ್ರೀತಿಸಿ. ಕೆಲಸ ಮುಖಾಂತರ ಉತ್ತರ ಕೊಡುತ್ತೇನೆ. ಇನ್ಮುಂದೆ ಜಾಸ್ತಿ ಮಾತಾಡಲ್ಲ ಎಂದು ಹೇಳಿದ್ದಾರೆ.

ಇನ್ನು ಕೈ ಮೇಲೆ ಇವರ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯೊಬ್ಬನ ಭೇಟಿಯಾಗಿ ಆನಂದ ಭಾಷ್ಪ ಸುರಿಸಿದ್ದಾರೆ. ಡ್ರೋನ್ ಪ್ರತಾಪ್ ತೆಗೆದುಕೊಂಡ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚಿಗೆ ವ್ಯಕ್ತವಾಗುತ್ತಿದೆ. ಡ್ರೋನ್ ಪ್ರತಾಪ್ ಮುಂದಿನ ಹೆಜ್ಜೆ ಶುಭಕೋರಿದ್ದಾರೆ. ಮತ್ತೆ ಕೆಲವರು ಬದಲಾಗಿ ಬಂದ ಡ್ರೋನ್ ಪ್ರತಾಪ್‌ಗೆ ಜಾಗರೂಕರಾಗಿ ಹೆಜ್ಜೆ ಇಡುವಂತೆ ಸಲಹೆಯನ್ನೂ ನೀಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.