ಎರಡನೇ ಹಂತದ ಆಟದಲ್ಲಿ ಫಿನಾಲೆಗೆ ಆಯ್ಕೆಯಾದ ಹನುಮಂತ, ಮಂಜಣ್ಣ ಈ ವಾರ ಎಲಿಮಿನೇಷನ್

 | 
ರೇ
ಬಿಗ್​​ಬಾಸ್​ ಮನೆಯಲ್ಲಿ ಫಿನಾಲೆ ಟಿಕೆಟ್ ಬಗ್ಗೆ ಟಾಸ್ಕ್​ ನಡೆದಿದ್ದವು. ಎಲ್ಲ ಸ್ಪರ್ಧಿಗಳು ಸಾಕಷ್ಟು ಕಷ್ಟಪಟ್ಟು ಟಾಸ್ಕ್​ಗಳನ್ನು ಪೂರ್ಣಗೊಳಿಸಿದ್ದರು. ಸದ್ಯ ಮನೆಯಲ್ಲಿರುವ 9 ಸ್ಪರ್ಧಿಗಳಲ್ಲಿ ಯಾರು ಬಿಗ್​ಬಾಸ್​ ಫಿನಾಲೆ ಟಿಕೆಟ್ ಪಡೆದುಕೊಂಡಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಇದಕ್ಕೆ ಉತ್ತರ ಕೂಡ ಈಗಾಗಲೇ ಸಿಕ್ಕಾಗಿದೆ. ಗ್ರ್ಯಾಂಡ್​ ಫಿನಾಲೆ ಟಿಕೆಟ್​ ಅನ್ನು ಒಟ್ಟು ನಾಲ್ವರು ಸ್ಪರ್ಧಿಗಳು ಪಡೆದುಕೊಂಡಿದ್ದಾರೆ. ​ ​
ಸೀಸನ್ 11ರ ಬಿಗ್​ಬಾಸ್​ ಮನೆಯಲ್ಲಿನ ಟಾಸ್ಕ್​ಗಳು ತುಂಬಾ ಕಷ್ಟ ಇದ್ದವು ಎನ್ನಬಹುದು. ಸ್ಪರ್ಧಿಗಳು ನಾನು, ನೀನು ಎನ್ನುವಂತೆ ಟಾಸ್ಕ್​ಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ ಅಚ್ಚರಿ ಎಂದರೆ ಬಿಗ್​ಬಾಸ್​ನಲ್ಲಿ ಸಖತ್​ ಬಲಿಷ್ಠ ಎನ್ನಲಾಗಿದ್ದ ಗೌತಮಿ ಹಾಗೂ ಉಗ್ರಂ ಮಂಜು ಟಿಕೆಟ್​ ಟು ಫಿನಾಲೆಗೆ ಆಯ್ಕೆ ಆಗಿಲ್ಲ. ಧನರಾಜ್, ಚೈತ್ರಾ ಈ ಮೊದಲೇ ಟಿಕೆಟ್​ ಕಳೆದುಕೊಂಡಿದ್ದರು. ಹೀಗಾಗಿ ಈ ಬಾರಿ ಬಿಗ್​ಬಾಸ್ ಟಿಕೆಟ್ ಟು ಫಿನಾಲೆ ಟಾಸ್ಕ್​ಗೆ ಕ್ಯಾಪ್ಟನ್ ರಜತ್, ಭವ್ಯ, ಹನುಮಂತ ಹಾಗೂ ತ್ರಿವಿಕ್ರಮ್​ ​ ಆಯ್ಕೆಯಾಗಿದ್ದಾರೆ. ಮೋಕ್ಷಿತಾ ಕೂಡ ಟಿಕೆಟ್ ಟು ಫಿನಾಲೆ ಟಾಸ್ಕ್​ ಅನ್ನು ಮಿಸ್​ ಮಾಡಿಕೊಂಡಿದ್ದಾರೆ.
ರಜತ್, ಹನುಮಂತ, ಭವ್ಯ ಹಾಗೂ ತ್ರಿವಿಕ್ರಮ್ ಇವರಲ್ಲಿ ಒಬ್ಬರಿಗೆ ಇಂದು ಗ್ರ್ಯಾಂಡ್ ಫಿನಾಲೆ ಟಿಕೆಟ್​ ಸಿಗಲಿದೆ. ಇದಕ್ಕಾಗಿ ಕನ್ನಡ ಸಿನಿ ರಂಗದ ಖ್ಯಾತ ನಟ, ನಟಿ ಬಿಗ್​ಬಾಸ್​ ಮನೆಗೆ ಬರುವ ಸಾಧ್ಯತೆ ಇದೆ. ಏಕೆಂದರೆ ಗ್ರ್ಯಾಂಡ್​ ಫಿನಾಲೆ ಟಿಕೆಟ್ ಅನ್ನು ಸೆಲೆಬ್ರಿಟಿಗಳಿಂದ ಕೊಡಿಸುವುದು ಸಾಮಾನ್ಯವಾಗಿದೆ. ಬಿಗ್​ಬಾಸ್ ಕೊಡುವ ಟಾಸ್ಕ್​​ಗಳನ್ನು ಈ ನಾಲ್ವರು ಸ್ಪರ್ಧಿಗಳು ಎಷ್ಟು ವೇಗವಾಗಿ, ಎಷ್ಟು ಚೆನ್ನಾಗಿ, ಯಾವುದೇ ರೂಲ್ ಬ್ರೇಕ್ ಮಾಡದಂತೆ ಕಡಿಮೆ ಅವಧಿಯಲ್ಲಿ ಮುಗಿಸುತ್ತಾರೋ ಅವರಿಗೆ ಫಿನಾಲೆ ಬಾಗಿಲು ಓಪನ್ ಆಗಿರುತ್ತದೆ.
ಹಾಗೇ ನೋಡಿದರೆ ಮೋಕ್ಷಿತಾ ಆಟದ ನಿಯಮ ಪಾಲಿಸದೇ ಇದ್ದಿದ್ದಕ್ಕಾಗಿ ಮಂಜು ಗೆಲ್ಲಬೇಕಿತ್ತು. ಆದರೆ ರಜತ್ ತಪ್ಪಾದ ನಿರ್ಧಾರದಿಂದ ಮೋಕ್ಷಿತಾ ಹಾಗೂ ಭವ್ಯಾ ಗೆಲುವು ಸಾಧಿಸಿದ್ದಾರೆ. ರಜತ್‌ ಮೋಸದ ಆಟವನ್ನು ಹನುಮಂತನ ವಿಚಾರದಲ್ಲಿ ಆಡಿದರು. ಆದರೆ ಹನುಮಂತ ಆಡಿ ಗೆದ್ದು ಫಿನಾಲೆ ಟಿಕೆಟ್ ಪಡೆದರು. ಇದೀಗ ಮಂಜು ಅವರಿಗೂ ಮೋಸ ಆಗಿದೆ. 
ಇದಕ್ಕೆ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ರಜತ್‌ ಅವರಿಗೆ ತರಾಟೆ ತೆಗೆದುಕೊಳ್ಳುವುದು ಮಾತ್ರ ಗ್ಯಾರಂಟಿ.ಒಟ್ಟಿನಲ್ಲಿ ಗ್ರ್ಯಾಂಡ್ ಫಿನಾಲೆ ತಲುಪಲು ರಜತ್ ಮೋಸದ ಆಟ ಆಡುತ್ತಿದ್ದು ವೀಕ್ಷಕರಿಗೆ ಬೇಸರ ತಂದಿದೆ. ಇದು ರಜತ್ ಅವರ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.