ವಿಜಯ್ ಮಲ್ಯ ಮಗನ ಜೊತೆ ಅನುಷ್ಕಾ ಶರ್ಮಾ ಎರಡು ಬಾರಿ ಏನು ಮಾಡಿದ್ದಾರೆ ಗೊ ತ್ತಾ; ಬೆ ಚ್ಚಿಬಿದ್ದ ಕೊಹ್ಲಿ

 | 
೬೬

ವಿವಾದಿತ ಉದ್ಯಮಿ ವಿಜಯ್ ಮಲ್ಯ ಸಾಲ ತೀರಿಸಲಾರದೆ ದೇಶ ಬಿಟ್ಟು ಓಡಿ ಹೋಗಿದ್ದು ಗೊತ್ತಿರುವ ಸಂಗತಿ. ಮದ್ಯದ ದೊರೆಯಾಗಿದ್ದ ವಿಜಯ್ ಮಲ್ಯ ಹೆಸರು ಆಗಾಗ ಏನಾದರೂ ಒಂದು ವಿಷಯಕ್ಕೆ ಕೇಳಿ ಬರುತ್ತಲೇ ಇರುತ್ತೆ. ಫಾರ್ ಎ ಚೇಂಜ್, ಈಗ ಅವರ ಪುತ್ರ ಸಿದ್ಧಾರ್ಥ ಮಲ್ಯ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಬಾಲಿವುಡ್‌ನ ಇಬ್ಬರು ನಟಿಯರು. 

ಅವರು ದೀಪಿಕಾ ಪಡುಕೋಣೆ ಹಾಗೂ ಅನುಷ್ಕಾ ಶರ್ಮಾ.ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಇವರೊಂದಿಗೆ ತಳುಕು ಹಾಕಿಕೊಂಡಿದ್ದ ಇಬ್ಬರು ಬಾಲಿವುಡ್ ನಟಿಯರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಿಜಯ್ ಮಲ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾಗ, ಸಿದ್ಧಾರ್ಥ್ ದರ್ಬಾರ್ ನಡೆಯುತ್ತಿತ್ತು. ಈ ವೇಳೆ ವಿಜಯ್ ಮಲ್ಯ ಪುತ್ರನ ಜೊತೆ ದೀಪಿಕಾ ಪಡುಕೋಣೆ ಹಾಗೂ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹೆಸರು ತಳುಕು ಹಾಕಿಕೊಂಡಿತ್ತು.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ ಸಿದ್ದಾರ್ಥ್ ಮಲ್ಯ ಡೇಟಿಂಗ್ ಮಾಡುತ್ತಿರುವ ವೇಳೆನೇ ಅನುಷ್ಕಾ ಶರ್ಮಾ ಹೆಸರು ಕೂಡ ಕೇಳಿ ಬಂದಿತ್ತು. ಬಾಲಿವುಡ್‌ನ ಮತ್ತೊಬ್ಬ ನಟಿ ಅನುಷ್ಕಾ ಶರ್ಮಾ ಜೊತೆ ಸಿದ್ಧಾರ್ಥ್ ಮಲ್ಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಮಾತು ಕೇಳಿ ಬಂದಿದ್ದವು. ಅದಕ್ಕೆ ಇಂಡಿಯಾ ಟುಡೇ ನೀಡಿದ ಸಂದರ್ಶನದಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ.

2014ರಲ್ಲಿ ಸಿದ್ಧಾರ್ಥ್ ಮಲ್ಯ ಹಾಗೂ ಅನುಷ್ಕಾ ಶರ್ಮಾ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಅಲ್ಲಿಂದ ಇದೂವರೆಗೂ ಇಬ್ಬರ ನಡುವೆ ಲವ್ ಇತ್ತು ಅನ್ನೋ ಗುಸು ಗುಸು ಚಿತ್ರರಂಗದಲ್ಲಿ ಇತ್ತು. ಆದರೆ, ಈ ಸಂದರ್ಶನದಲ್ಲಿ ಸಿದ್ಧಾರ್ಥ್ ಮಲ್ಯ ಈ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ತನ್ನ ಅನುಷ್ಕಾ ಶರ್ಮಾ ಮಧ್ಯೆ ಹಬ್ಬಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ಅನುಷ್ಕಾ ಶರ್ಮಾರನ್ನು ಎರಡು ಬಾರಿ ಪಾರ್ಟಿಯಲ್ಲಿ ಭೇಟಿ ಆಗಿದ್ದೆ ಅಷ್ಟೇ ಎಂದಿದ್ದಾರೆ.

2014ರಲ್ಲಿ ನಾನು ದೀಪಿಕಾ ಜೊತೆ ಡೇಟಿಂಗ್ ಮಾಡುತ್ತಿದೆ. ಆ ವೇಳೆ ಪಾರ್ಟಿಗೆ ದೀಪಿಕಾ ಜೊತೆ ಹೋಗಿದ್ದಾಗ, ಅನುಷ್ಕಾ ಶರ್ಮಾರನ್ನು ಭೇಟಿ ಮಾಡಿದ್ದೆ ಅಷ್ಟೇ. ಅವರೊಂದಿಗೆ ಸರಿಯಾಗಿ ಮಾತು ಕೂಡ ಆಡಿಲ್ಲ. ನಾನು ದೀಪಿಕಾ ಜೊತೆ ಪಾರ್ಟಿಗೆ ಹೋಗಿದ್ದಾಗ, ಅಲ್ಲಿ ಅನುಷ್ಕಾ ಕೂಡ ಬಂದಿದ್ದರು. ಆ ವೇಳೆ ಭೇಟಿಯಾಗಿದ್ದೆ ಅಷ್ಟೇ. ನಾನು ಅನುಷ್ಕಾ ಶರ್ಮಾ ಜೊತೆ ಡೇಟಿಂಗ್ ಮಾಡಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.