ಕಾನೂನು ಕಾಯೋ ಪೊಲೀಸನೇ ಹೀಗೆ ಮಾಡಿದ್ರೆ ಹೇಗೆ, ಈ ಮಹಿಳೆಯ ಪಾಡು ಯಾರಿಗೂ ಬೇಡ
Sep 16, 2024, 12:28 IST
|
ಗುಣನೋಡು ಹೆಣ್ಣು ಕೊಡು ಎನ್ನುವ ಮಾತೊಂದಿದೆ. ಅದು ಮದುವೆ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸಲೇಬೇಕು. ಕೆಲವೊಮ್ಮೆ ಮೋಸ ಹೋಗುವ ಸನ್ನಿವೇಶವೂ ಎದುರಾಗಬಹುದು. ಇಂದು ನಾವು ಹೇಳೋ ಕಥೆಯಲ್ಲಿ ಕೂಡ ಅದೇ ಆಗಿರುವುದು. ಹುಡುಗ ಪೋಲಿಸ್ ಅಧಿಕಾರಿ. ಮಗಳು ನೆಮ್ಮದಿಯಾಗಿ ಇರುತ್ತಾಳೆ ಎಂದು ಮದುವೆ ಮಾಡಿಕೊಟ್ಟು ಇಂದು ಪಾಲಕರು ಬೇಸರ ಪಡುವಂತಾದರೆ ಪತ್ನಿ ತ್ರಿವೇಣಿ ಕಣ್ಣೀರು ಹಾಕುವಂತಾಗಿದೆ.
ಇನ್ಸ್ಪೆಕ್ಟರ್ ಮುರುಳಿ ಪೋಲಿಸ್ ಅಧಿಕಾರಿ. ರಾಜಕಾರಣಿಗಳ ಸೆಕ್ಯೂರಿಟಿ ಆಗಿ ಕೂಡ ಕೆಲಸ ಮಾಡಿರುವ ಇವರಿಗೆ ಮಕ್ಕಳು ಹೆಂಡತಿಯೊಂದಿಗೆ ಸಂಸಾರ ಮಾಡಲು ಮನಸ್ಸಿಲ್ಲ. ಹೌದು ಇದೀಗ ಅವರ ಪತ್ನಿ ತ್ರಿವೇಣಿ ಕಣ್ಣೀರಿಡುತ್ತಾ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾ ಅಲ್ಲಿ ಹಾಕಿದ್ದಾರೆ. ಹಣದ ಅವಶ್ಯಕತೆ ಇದೆಯೋ ಅಥವಾ ದುರಾಸೆಗೆ ಬಿದ್ದಿದ್ದರೋ ತಿಳಿದಿಲ್ಲ ಕಳೆದೊಂದು ತಿಂಗಳಿಂದ ಮನೆಗೆ ಬಂದಿಲ್ಲ.
ಮದುವೆ ಆದ ನಂತರದಲ್ಲಿ ನಾನು ಅವರ ತಂದೆ ತಾಯಿಯ ಜೊತೆ ವಾಸವಾಗಿದ್ದೆ. ಹಣದ ಅನಿವಾರ್ಯತೆ ಇದೆ ಎಂದು ನನ್ನ ತಾಳಿಯನ್ನು ಸಹ ತೆಗೆದುಕೊಂಡು ಹೋದರು. ಅವರ ತಂದೆ ತಾಯಿ ನನ್ನನ್ನು ಮನೆಯಿಂದ ಹೊರ ಹಾಕುವಂತೆ ಮಾಡಿದರು. ಈಗ ನಕಲಿ ತಾಳಿ ಹಾಕಿಕೊಂಡಿದ್ದೇನೆ. ಅಮ್ಮನ ಮನೆಗೆ ಹೋಗಿ ಉಳಿದರೆ ನಿನ್ನ ಗಂಡ ಎಲ್ಲಿ ಎಂದು ಎಲ್ಲರೂ ಕೇಳುತ್ತಾರೆ.
ಹಾಗಾಗಿ ಅಲ್ಲಿಗೆ ಹೋಗಲಾಗುವುದಿಲ್ಲ. ಇಲ್ಲಿ ಇರಲಾಗುವುದಿಲ್ಲ. ಕಾನೂನು ಬಡವರಿಗಿಲ್ಲವೆ ಇದ್ದರೆ ನನ್ನ ಗಂಡ ಮನೆಗೆ ಬರುವಂತೆ ಮಾಡಿ. ಕಳೆದೊಂದು ತಿಂಗಳಿಂದ ಮನೆಗೆ ಬಂದಿಲ್ಲ. ಮಗುವಿನ ಮುಖ ನೋಡಿಲ್ಲ. ಇಲ್ಲವಾದ್ರೆ ನಮಗೆ ಸಾಯಲು ಅನುಮತಿ ನೀಡಿ ಒಂದಿಷ್ಟು ವಿಷ ಕುಡಿದು ಪ್ರಾಣ ಬಿಡ್ತೇನೆ ಎಂದು ಕಣ್ಣೀರು ಹಾಕುತ್ತ ಬೇಡಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.