ಶಿಲ್ಪಾ ಶೆಟ್ಟಿ ಫಿಗರ್ ನೋಡಿ ಅದೆಷ್ಟು ಯುವಕರು ಮೈಒದ್ದೆ ಮಾಡಿದ್ದಾರೆ ಗೊ.ತ್ತಾ; ವಯಸೇ ಆಗದ ಸುಂದರಿ

 | 
Ghu

ಬಾಲಿವುಡ್ ತಾರೆಯರು ಆಗಾಗ ತಮ್ಮ ಸೌಂದರ್ಯ  ಹಾಗೂ ಫಿಟ್ ನೆಸ್ ನ ಗುಟ್ಟುಗಳನ್ನು ಬಿಟ್ಟುಕೊಡುತ್ತಾರೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ, ಓಡುತ್ತಿರುವ, ಬೆವರು ಹರಿಸುತ್ತಿರುವ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ. ಅದರಲ್ಲೂ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಇದರಲ್ಲಿ ಒಂದು ಹೆಜ್ಜೆ ಮುಂದೆ.

ದೈಹಿಕ ಸದೃಢತೆ ಹಾಗೂ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಶಿಲ್ಪಾ ಶೆಟ್ಟಿ ಅನೇಕ ವರ್ಷಗಳಿಂದಲೂ ಯೋಗದ  ಮೊರೆ ಹೋಗಿರುವುದು ಎಲ್ಲರಿಗೂ ತಿಳಿದಿದೆ. ಇದನ್ನು ಅವರು ಎಂದಿನಿಂದಲೂ ಬಹಿರಂಗವಾಗಿ ಹೇಳುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲ, ತಾವೇ ಸ್ವತಃ ಸಾರ್ವಜನಿಕ ವೇದಿಕೆಗಳಲ್ಲಿ ಯೋಗ ಮಾಡಿ ಪ್ರಚಾರವನ್ನೂ ಕೈಗೊಂಡಿದ್ದಾರೆ. 

ಯೋಗವನ್ನು ಶಿಲ್ಪಾ ಶೆಟ್ಟಿ ದೈನಂದಿನ ಫಿಟ್ ನೆಸ್ ಭಾಗವಾಗಿಸಿಕೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿದ್ದರೂ, ಮದುವೆಯಾಗಿ ಇಷ್ಟೆಲ್ಲ ವರ್ಷಗಳಾಗಿದ್ದರೂ ಶಿಲ್ಪಾ ಶೆಟ್ಟಿ ಎಂದರೆ ಶಿಲ್ಪಾ ಶೆಟ್ಟಿಯೇ. ಅವರಿಗೆ ಬೇರ್ಯಾರೂ ಸಾಟಿಯಿಲ್ಲ. ಎಲ್ಲರೂ ಒಮ್ಮೆ ಅಸೂಯೆ ಪಡುವಷ್ಟು ದೈಹಿಕ ಅಂದಚೆಂದ ಕಾಪಾಡಿಕೊಂಡು, ಫಿಗರ್  ಮೆಂಟೇನ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಮತ್ತೊಮ್ಮೆ ತಮ್ಮ ಸೌಂದರ್ಯದ ಗುಟ್ಟನ್ನು ಅನಾವರಣಗೊಳಿಸಿದ್ದಾರೆ. 

ತಮ್ಮ ಈ ಚೆಲುವಿಗೆ ಯೋಗವೇ ಕಾರಣ ಎಂದು ಇನ್ ಸ್ಟಾಗ್ರಾಮ್  ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಇತ್ತೀಚೆಗೆ ಸ್ವಲ್ಪ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಬಹುದು. ಪತಿ ರಾಜ್ ಕುಂದ್ರಾ  ಬಂಧನ, ತಮ್ಮ ಮೇಲೆ ಬಂದಿರುವ ಮೋಸದ ಆರೋಪ ಇತ್ಯಾದಿಗಳಲ್ಲಿ ಅವರು ಸಿಲುಕಿದ್ದಾರೆ. ಈ ನಡುವೆಯೂ ಅವರು ಯೋಗಾಸನ ಮಾಡುವುದನ್ನು ನಿಲ್ಲಿಸಿಲ್ಲ. ಬದಲಿಗೆ, ಮನಸ್ಸನ್ನು ಚೆನ್ನಾಗಿಟ್ಟುಕೊಳ್ಳಲು ಯೋಗ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. 
 
ಜಿಮ್ ನಲ್ಲಿ ಬೆವರು ಹರಿಸುವ ಮಂದಿಗಿಂತ ಶಿಲ್ಪಾ ಶೆಟ್ಟಿ ಭಿನ್ನ. ತಮ್ಮ ಮನೆಯ ಆವರಣದಲ್ಲಿಯೇ ಮುಕ್ತ ವಾತಾವರಣದಲ್ಲಿ ಬೆಳಗಿನ ಹೊತ್ತು ಯೋಗ ಮಾಡುತ್ತಾರೆ. ಹೊಸ ಹೊಸ ಆಸನಗಳನ್ನು ಮಾಡುವುದು, ದಿನವೂ ವಿಭಿನ್ನ ಆಸನಗಳನ್ನು ಟ್ರೈ ಮಾಡುವುದು ಅವರ ಇಷ್ಟದ ಕೆಲಸ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.