ಅನುಷ್ಕಾ ಶರ್ಮಾಗಿಂತ ಹೆಚ್ಚಾಗಿ ವಿರಾಟ್ ನನ್ನು ನಾನು ಪ್ರೀತಿ ಮಾಡುತ್ತಿದ್ದೆ; ಆದರೆ ಆತನಿಗೆ ನಾನು ಬೇಡವಾದೆ

 | 
Us
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಸೂಪರ್‌ ಬ್ಯಾಟ್ಸ್‌ʼಮನ್ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಆಟಗಾರರಲ್ಲಿ ಒಬ್ಬರು. ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿ ಹೆಣ್ಣುಮಕ್ಕಳೇ ಹೆಚ್ಚು ಫ್ಯಾನ್‌ʼಗಳಾಗಿದ್ದ ಸಮಯವೊಂದಿತ್ತು.ಅವರ ಫಿಟ್ನೆಸ್‌ ನೋಡಿಯೇ ಅನೇಕರು ಫಿದಾ ಆಗಿದ್ದುಂಟು. 
ಕ್ರಿಕೆಟ್‌ ನೋಡಿ ಒಂದಷ್ಟು ಜನ ಇಷ್ಟಪಟ್ಟರೆ, ಇನ್ನೂ ಕೆಲವರು ವಿರಾಟ್‌ ಕೊಹ್ಲಿಯ ಫಿಟ್ನೆಸ್‌ʼಗೆ ಅಭಿಮಾನಿಗಳಾಗಿದ್ದರು. ಭಾರತದ ಬಹುತೇಕ ಯುವಕರು ಕೊಹ್ಲಿಯನ್ನು ತಮ್ಮ ಆರಾಧ್ಯ ದೈವವೆಂದೇ ಪರಿಗಣಿಸುತ್ತಾರೆ. ಇನ್ನು ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಹ ವಿರಾಟ್ ಕೊಹ್ಲಿಯನ್ನು ಇಷ್ಟಪಡುತ್ತಾರೆ. ಅವರಲ್ಲಿ ಕೆಲವು ನಟಿಯರೂ ಇದ್ದಾರೆ.
 
ಇನ್ನು ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಕೂಡ ವಿರಾಟ್ ಕೊಹ್ಲಿಯನ್ನು ಒಂದು ಕಾಲದಲ್ಲಿ ಹುಚ್ಚರಂರೆ ಪ್ರೀತಿಸಿದ್ದರಂತೆ. ಹೀಗೆಂದು ಅವರೇ ಹೇಳಿಕೆ ನೀಡಿದ್ದಾರೆ. ನನ್ನ ಸಹೋದರನ ಕಾರಣದಿಂದ ನಾನು ಕ್ರಿಕೆಟ್‌ ನೋಡಲು ಶುರು ಮಾಡಿದೆ. ಆ ಬಳಿಕ ಕ್ರಿಕೆಟ್‌ ಇಷ್ಟವಾಯಿತು ಎಂದು ನಟಿ ಮೃಣಾಲ್ ಹೇಳಿಕೊಂಡಿದ್ದಾರೆ.
ಬಾಸ್ಕೆಟ್‌ಬಾಲ್ ಮತ್ತು ಫುಟ್‌ಬಾಲ್ ಸೇರಿದಂತೆ ವಲಯ ಮಟ್ಟದವರೆಗೆ ಅನೇಕ ಕ್ರೀಡೆಗಳನ್ನು ಆಡಿದ್ದ ಮೃಣಾಲ್‌, ಈಟಿಮ್ಸ್‌ʼಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ನಾನು ವಿರಾಟ್ ಕೊಹ್ಲಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಸಮಯವಿತ್ತು. ದೊಡ್ಡ ಅಭಿಮಾನಿಯಾಗಿರುವ ನನ್ನ ಸಹೋದರನಿಂದಾಗಿ ನಾನು ಕ್ರಿಕೆಟ್ ಇಷ್ಟಪಡಲು ಪ್ರಾರಂಭಿಸಿದೆ. 
ಸುಮಾರು ಐದು ವರ್ಷಗಳ ಹಿಂದೆ ಅವರ ಜೊತೆ ಸ್ಟೇಡಿಯಂನಲ್ಲಿ ಲೈವ್ ಮ್ಯಾಚ್ ನೋಡಿದ ನೆನಪುಗಳು ನನ್ನಲ್ಲಿವೆ. ನಾನು ನೀಲಿ ಜರ್ಸಿ ಧರಿಸಿ ಟೀಂ ಇಂಡಿಯಾವನ್ನು ಹುರಿದುಂಬಿಸುತ್ತಿದ್ದದ್ದು ನನಗೆ ನೆನಪಿದೆ ಎಂದಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.