ಊರೆಲ್ಲಾ ಸುಳ್ಳು ಹೇಳಿ ಮಾನ ಮರ್ಯಾದೆ ತೆಗೆದಿದ್ದ ಮಗನಿಗೆ ವಿಷ ಹಾಕಲು ಮುಂದಾಗಿದ್ದೆ; ಜೀ ಕನ್ನಡ‌ ವೇದಿಕೆಯಲ್ಲಿ‌ ಡ್ರೋನ್ ತಂದೆ ಬಾವುಕ

 | 
Nnn
ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ರಲ್ಲಿ ಈ ವಾರ ಫ್ಯಾಮಿಲಿ ರೌಂಡ್‌ʼ ನಡೆಯುತ್ತಿದೆ. ವೇದಿಕೆಗೆ ಬ್ಯಾಚುಲರ್ಸ್‌ಗಳ ಕುಟುಂಬಸ್ಥರು ಆಗಮಿಸಿದ್ದಾರೆ. ಇಷ್ಟು ದಿನ ವಿಭಿನ್ನವಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಬ್ಯಾಚುಲರ್ಸ್‌ ವೇದಿಕೆ ಈ ವೀಕೆಂಡ್‌ ಮನಮಿಡಿಯುವ ಸಂಭ್ರಮದ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಈ ವೇಳೆ ಹಳೆಯ ಘಟನೆಯನ್ನು ನೆನೆದು ಡ್ರೋನ್‌ ಪ್ರತಾಪ್‌ ತಮ್ಮ ತಂದೆಯ ಬಗ್ಗೆ ಮಾತನಾಡಿರುವ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.
ಭರ್ಜರಿ ಬ್ಯಾಚುಲರ್ಸ್‌ ಶೋನ ಫ್ಯಾಮಿಲಿ ರೌಂಡ್‌ʼನಲ್ಲಿ ಡ್ರೋನ್‌ ಪ್ರತಾಪ್‌ ಅವರ ಕುಟುಂಬಸ್ಥರು ವೇದಿಕೆಗೆ ಬಂದಿದ್ದಾರೆ. ಇದೇ ವೇಳೆ ಡ್ರೋನ್‌ ಪ್ರತಾಪ್‌ ಅವರು ಈ ಹಿಂದೆ ಅನುಭವಿಸಿದ ಟೀಕೆಗಳ ಬಗ್ಗೆ ನೆನೆದು,ಹಲವರು ನಿಮ್ಮ ಮಗನಿಗೆ ಯಾಕೆ ವಿಷ ಹಾಕಿ ಸಾಯಿಸಬಾರದು ಅನ್ನೋ ಮಾತುಗಳನ್ನೆಲ್ಲಾ ನನ್ನ ತಂದೆ - ತಾಯಿಗೆ ಹೇಳಿದ್ದಾರೆ. ಆದರೆ ನಮ್ಮಪ್ಪ ಇವತ್ತಿಗೂ ನನಗೆ ಒಂದು ಮಾತು ಕೂಡ ಅನ್ನಲಿಲ್ಲ ಎಂದು ವೇದಿಕೆಯಲ್ಲಿ ತಮ್ಮ ಅಪ್ಪನ ಬಗ್ಗೆ ಮಾತನಾಡುತ್ತಾ ಡ್ರೋನ್‌ ಪ್ರತಾಪ್‌ ಭಾವುಕರಾಗಿದ್ದಾರೆ. ಅಪ್ಪ - ಅಮ್ಮನಿಗೆ ಡ್ರೋನ್‌ ಪ್ರತಾಪ್‌ ಪಾದ ಪೂಜೆ ಮಾಡಿದ್ದಾರೆ. ಈ ದೃಶ್ಯ ಹಲವರ ಕಣ್ಣಂಚಲ್ಲಿ ನೀರು ತರಿಸುವಂತಿದೆ.
ಡ್ರೋನ್‌ ಪ್ರತಾಪ್‌ ಬಿಗ್‌ ಬಾಸ್‌ ರಿಯಾಲಿಟಿ ಶೋ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಬಿಗ್‌ ಬಾಸ್‌ ನಂತರ ಬ್ಯಾಕ್‌ ಟು ಬ್ಯಾಕ್‌ ರಿಯಾಲಿಟಿ ಶೋಗಳಲ್ಲಿ ಡ್ರೋನ್‌ ಪ್ರತಾಪ್‌ ಕಮಾಯಿ ಮಾಡುತ್ತಿದ್ದು, ಸದ್ಯ ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಜೀವನದಲ್ಲಿ ಹಲವು ಟೀಕೆಗಳನ್ನು ಎದುರಿಸಿ ಫ್ಯಾಮಿಲಿಯಿಂದಲೂ ಡ್ರೋನ್‌ ಪ್ರತಾಪ್‌ ದೂರಾಗಿದ್ದರು. ಆ ಬಗ್ಗೆ ನೆನದು ಇದೀಗ ಭರ್ಜರಿ ಬ್ಯಾಚುಲರ್ಸ್‌ ವೇದಿಕೆಯಲ್ಲಿ ಅಪ್ಪನ ಬಗ್ಗೆ ಮಾತನಾಡುತ್ತಾ ಕಣ್ಣೀರಾಗಿದ್ದಾರೆ.
ಬಿಗ್‌ ಬಾಸ್‌ ಹೋಗುವ ಮುನ್ನವೇ ಡ್ರೋನ್‌ ಪ್ರತಾಪ್‌ ಅವರ ಸುತ್ತಲೂ ಕಾಂಟ್ರವರ್ಸಿಗಳು ಹರಿದಾಡಿದ್ದವು. ದಿನ ಕಳೆಯುತ್ತಿದ್ದಂತೆ ಡ್ರೋನ್‌ ಪ್ರತಾಪ್‌ ಅವರು ಹೇಳಿದ ಸಾಲು ಸಾಲು ವಿಷಯಗಳು ಸುಳ್ಳು ಎಂಬ ವಿಚಾರ ಗೊತ್ತಾಗಿತ್ತು. ಡ್ರೋನ್‌ ಪ್ರತಾಪ್‌ ಅವರ ಸಂಶೋಧನೆಗೆ ಸಂಬಂಧಪಟ್ಟ ಹಲವು ವಿಚಾರಗಳು ಸುಳ್ಳು ಅಂತ ಕೆಲವರು ಆರೋಪ ಮಾಡಿದ್ದರು. ಇದೇ ಕಾರಣಕ್ಕೆ ಕುಟುಂಬದಿಂದಲೂ ಡ್ರೋನ್‌ ಪ್ರತಾಪ್‌ ಅವರು ದೂರ ಆಗಿದ್ದರು. ಸೋಶಿಯಲ್‌ ಮೀಡಿಯಾದಲ್ಲಂತೂ ಡ್ರೋನ್‌ ಸಖತ್‌ ಟ್ರೋಲ್‌ ಆಗಿದ್ದರು.
ಡ್ರೋನ್‌ ಪ್ರತಾಪ್‌, ಅವರ ತಂದೆ - ತಾಯಿ ಜೊತೆಗೆ ಮಾತನಾಡದೇ ಅನೇಕ ವರ್ಷಗಳೇ ಕಳೆದಿತ್ತು. ʻಬಿಗ್‌ ಬಾಸ್‌ʼ ಮನೆಗೆ ಬಂದು ತಂದೆ - ತಾಯಿಯನ್ನು ನೋಡುವ ಮತ್ತು ಮಾತನಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ದೊಡ್ಮನೆಗೆ ಬಂದು ಡ್ರೋನ್‌ ಪ್ರತಾಪ್‌ರನ್ನು ಅವರ ತಂದೆ - ತಾಯಿ ಸಂತೈಸಿದ್ದರು. ಏನೇ ಆಗಲಿ, ನೀನು ಮುಖ್ಯ ಎಂದು ಪ್ರತಾಪ್‌ ತಂದೆ ಹೇಳಿದ್ದರು. ಸದ್ಯ ಡ್ರೋನ್‌ ಪ್ರತಾಪ್‌ ಅವರ ತಂದೆ - ತಾಯಿ ಜೊತೆಗೆ ಖುಷಿಯಾಗಿ ಜೀವನ ಮಾಡುತ್ತಿದ್ದಾರೆ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub