ಮಗು ಬೇಡ ಅಂದಿದ್ದು ನಾನೇ; ಚಂದನ್ ನಿವೇದಿತಾ ಡಿವೋರ್ಸ್ ಗೆ ಸಿಕ್ತು ಕಾರ ಣ

 | 
Uu

ಸ್ಯಾಂಡಲ್​ವುಡ್​ ಕ್ಯೂಟ್​ ಕಪಲ್​ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಸಂಸಾರ ಸಾಗರಕ್ಕೆ ಪುಲ್​ ಸ್ಟಾಪ್​ ಹಾಕಿದ್ದಾರೆ. ಇಬ್ಬರು ಒಮ್ಮತದಿಂದ ದೂರವಾಗುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ವಿಚಾರ ಹಂಚಿಕೊಂಡಿದ್ದಾರೆ. ಆದರೆ ಇವರಿಬ್ಬರ ನಡುವಿನ ಸಂಬಂಧ ದೂರವಾಗುತ್ತಿರುವ ಸಂಗತಿ ಕೇಳಿ ಅನೇಕರು ಅಚ್ಚರಿ ಪಟ್ಟಿದ್ದಾರೆ.

ನಿವೇದಿತಾ ಗೌಡ ಮೊದಲಿನಿಂದಲೂ ನಾಯಕಿ ಆಗುವ ಆಸೆ. ಸಿನಿಮಾ ಮಾಡುವ ಕನಸಿತ್ತು. ಅದರಂತೆಯೆ ಕೆಲವು ಶೋಗಳನ್ನು ನಿವೇದಿತಾ ಗೌಡ ಮಾಡುತ್ತಾ ಬಂದಿದ್ದಾರೆ. ಈಗ ಒಂದಷ್ಟು ಸಿನಿಮಾಗಳು ನಿವೇದಿತಾ ಗೌಡರನ್ನು ಹುಡುಕಿಕೊಂಡು ಬರ್ತಿವೆ. ಈ ಸಂದರ್ಭದಲ್ಲಿ ಮಕ್ಕಳು ಬೇಡ ಅನ್ನೋದು ನಿವೇದಿತಾ ವಾದವಾದರೆ. ಚಂದನ್ ಶೆಟ್ಟಿ ಪೋಷಕರಿಗೆ ಮಕ್ಕಳು ಬೇಕು ಎಂಬ ಆಸೆ ಎಂಬುದನ್ನು ಫ್ಯಾನ್ಸ್​ ಹಂಚಿಕೊಳ್ಳುತ್ತಿದ್ದಾರೆ.

ಮತ್ತೊಂದು ಸಂಗತಿ ಎಂದರೆ ಚಂದನ್ ಶೆಟ್ಟಿ ಕೂಡ ನಟನಾಗಿ, ಸಂಗೀತ ನಿರ್ದೇಶಕನಾಗಿ ಸಾಕಷ್ಟು ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ದಾಂಪತ್ಯ ಮುಂದುವರೆಸುವ ಬದಲು ಸ್ನೇಹಿತರಾಗಿ ಉಳಿಯಲು ನಿರ್ಧಾರ ಮಾಡಿದ್ದಾರೆ. ಇದನ್ನು ಹೊರತು ಪಡಿಸಿ ಮತ್ಯಾವುದೇ ಮನಸ್ತಾಪ ಇಬ್ಬರ ಮಧ್ಯೆ ಇಲ್ಲ ಅನ್ನೋದು ಸಹ ಫ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಿವೇದಿತಾ ಅಮ್ಮ ನಿವೇದಿತಾ ಗೌಡ ಪರ ಮಾತನಾಡಿದರೆ ಚಂದನ್ ಶೆಟ್ಟಿ ಅಮ್ಮ ಮಕ್ಕಳ ಮಾಡಿಕೊಳ್ಳುವತ್ತ ಗಮನ ಹರಿಸು ಎಂದಿದ್ದಾರೆ.

ಇವರಿಬ್ಬರ ನಡುವೆ ಬಿರುಕು ಮೂಡಲು ವಯಸ್ಸಿನ ಅಂತರ, ಹಣ, ಮಗುವಿನ ವಿಚಾರ ಅಂತೆಲ್ಲಾ ಊಹಾಪೋಹಗಳು ಹರಿದಾಡತೊಡಗಿವೆ. ಆದರೆ ಕಾರಣ ಏನೇ ಇರಲಿ ಮನಸ್ತಾಪಗಳು ದಾಂಪತ್ಯದಲ್ಲಿ ಬರುವುದು ಸಹಜ. ಆದರೆ ವಿಚ್ಚೇದನ ನೀಡುವಷ್ಟು ಮುಂದುವರೆಯಬಾರದಿತ್ತು ಅಂತ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.