ಕಾಟೇರ ಸಿನಿಮಾ ಮೊದಲ ದಿನವೇ ಕೋಟಿಗಟ್ಟಲೆ ಕಲೆಕ್ಷನ್, ಪ್ಯಾನ್ ಇಂಡಿಯಾ ಬಿಡುಗಡೆಗೆ ಲೆಕ್ಕಾಚಾರ
![ರಕ](https://powerfullkannada.tech/static/c1e/client/98456/uploaded/87d2a03b9cb81c7d009a7fcf3ea5a9e1.jpg)
ಈಗ ಎಲ್ಲಿ ಕೇಳಿದರೂ ಎಲ್ಲಿ ನೋಡಿದರೂ ಒಂದೇ ಸೌಂಡು ಅದು ಕಾಟೇರ. ಹೌದು, ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಸಿ ಬೊಬ್ಬರಿಯುತ್ತಿದೆ.ಸಿನಿಮಾ ನೋಡಿದ ಪ್ರತಿಯೊಬ್ಬರಿಗೆ ಇಷ್ಟವಾಗುತ್ತಿದೆ. ಎಲ್ಲೆಡೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಸಿನಿಮಾ ಈ ಮಟ್ಟಕ್ಕೆ ಹಿಟ್ ಆಗೋಕೆ ಪ್ರಮುಖ ಕಾರಣ ಅದು ಚಾಲೆಂಜಿಗ್ ಸ್ಟಾರ್ ದರ್ಶನ ಅವರ ಅಭಿನಯ.
ಹೌದು ಕಾಟೇರ ಸಿನಿಮಾದಲ್ಲಿ ದರ್ಶನ್ ಒನ್‌ಮ್ಯಾನ್ ಶೋನಂತೆ ಮಿಂಚುತ್ತಿದ್ದಾರೆ. ತುಂಬಾ ದಿನಗಳ ನಂತರ ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರೋ ಪಾತ್ರದಲ್ಲಿ ದರ್ಶನ್ ಅವರು ಜೀವಿಸಿದ್ದಾರೆ.ಕಾಟೇರ ಸಿನಿಮಾದಲ್ಲಿರೋ ಕಥೆಯೇ ಅಷ್ಟು ಇಂಟ್ರೆಸ್ಟಿಂಗ್ ಆಗಿದೆ. 10ರಲ್ಲಿ ಒಂದು ಅನ್ನೋ ಥರ ಕಥೆ ಇದಲ್ಲ. ನಮ್ಮ ಮಣ್ಣಿನ ಕಥೆ, ನಮ್ಮ ರೈತರ ಕಥೆ. ಈ ಸಿನಿಮಾ ಕಟ್ಟುಕೊಡುವಲ್ಲಿ ತರುಣ್ ಸುಧೀರ್ ಗೆದ್ದಿದ್ದಾರೆ.
ಕುಲುಮೆಯಲ್ಲಿ ಮಚ್ಚು ತಟ್ಟುವಾಗ, ಎದುರಾಳಿಗಳ ಎದುರು ತೊಡೆ ತಟ್ಟುವಾಗ ದರ್ಶನ ಅವರ ಆ್ಯಕ್ಟಿಂಗ್ ಪೀಕ್ ಲೆವಲ್‌ನಲ್ಲಿದೆ. ಇನ್ನೂ ಎಮೋಷನಲ್ ಸೀನ್‌ಗಳಂತೂ ದರ್ಶನ್ ಅವರು ಅಭಿಮಾನಿಗಳ ಕಣ್ಣಿನಲ್ಲೂ ನೀರು ಬರುವಂತೆ ಅಭಿನಯಿಸಿದ್ದಾರೆ.ಫಸ್ಟ್ ಹಾಫ್‌ನಲ್ಲಿ ಬರುವ ಎರಡು ಫೈಟ್‌ಗಳು ಡಿಫ್ರೆಂಟ್ ಆಗಿದ್ದು ಸಿಕ್ಕಾಪಟ್ಟೆ ಇಷ್ಟವಾಗುತ್ತೆ.
ಇನ್ನೂ ಇದುವರೆಗೂ ತೆರೆಮೇಲೆ ಕಾಣಿಸಿಕೊಂಡಿದ್ದಕ್ಕಿಂತಲೂ ಭಿನ್ನವಾಗಿ, ಇಲ್ಲಿ ಬೇರೆಯದೇ ರೀತಿಯಲ್ಲಿ ಮಿಂಚಿದ್ದಾರೆ ನಟ ದರ್ಶನ್.ಇನ್ನೂ ಈ ಸಿನಿಮಾದಲ್ಲಿ ಹಿರಣ್ಯಕಶ್ಯಪುವಿನ ದೃಶ್ಯವೊಂದು ಬರುತ್ತದೆ. ಅದರಲ್ಲಿ ದರ್ಶನ್ ಅವರ ಅಭಿನಯ ನಿಜಕ್ಕೂ ಮೆಚ್ಚುವಂಥದ್ದು.
ಚಾಲೆಂಜಿಗ್ ಸ್ಟಾರ್ ಅವರ ಅಭಿನಯದ ಬಗ್ಗೆ ಈ ಸಿನಿಮಾದಲ್ಲಿ ಡೌಟೇ ಬೇಡ. ಈ ಸಿನಿಮಾದಲ್ಲಿ ದರ್ಶನ್ ಬೇರೆಯದ್ದೇ ರೀತಿಯಲ್ಲಿ ಕಾಣ್ತಾರೆ. ಆ್ಯಕ್ಟಿಂಗ್‌ನಲ್ಲಿ ಅವರ ತಾಕತ್ತೇನು ಅಂತ ಮತ್ತೊಮ್ಮೆ ಸಾಬೀತಾಗಿದೆ. ಅಭಿಮಾನಿಗಳು ಕೂಡ ಉಘೇ ಎನ್ನುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.