ಮಗು ಮಾಡುವುದಕ್ಕೆ ನಟಿ ಹಿಂದೇಟು, ಕನ್ನಡದ ಸೀರಿಯಲ್ ನಟಿಯಿಂದ ಮಹತ್ವದ ಸ್ಪಷ್ಟತೆ

 | 
Jjoo
ಸ್ನೇಹದ ಕಡಲಲ್ಲಿ.. ನೆನಪಿನ ದೋಣಿಯಲಿ.. ಪಯಣಿಗ ನಾನಮ್ಮ.. - 1975ರಲ್ಲಿ ತೆರೆಕಂಡ 'ಶುಭಮಂಗಳ' ಚಿತ್ರದ ಈ ಹಾಡನ್ನ ಕನ್ನಡ ಸಿನಿಪ್ರಿಯರು ಮರೆಯೋಕೆ ಸಾಧ್ಯವೇ ಇಲ್ಲ. ಈ ಎವರ್‌ಗ್ರೀನ್ ಹಾಡಿನ ಸಾಲನ್ನೇ ಕನ್ನಡದ ಹೊಸ ಧಾರಾವಾಹಿಗೆ ಶೀರ್ಷಿಕೆಯಾಗಿ ಇಡಲಾಗಿದೆ. ಹೌದು.. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸ ಸೀರಿಯಲ್‌ ಶುರುವಾಗುತ್ತಿದೆ. ಅದೇ ಸ್ನೇಹದ ಕಡಲಲ್ಲಿ.
ಪ್ರೀತಂ ಶೆಟ್ಟಿ ನಿರ್ಮಾಣ ಹಾಗೂ ನಿರ್ದೇಶನದ ಸ್ನೇಹದ ಕಡಲಲ್ಲಿ ಧಾರಾವಾಹಿ ಇದೇ ಸೋಮವಾರದಿಂದ ಆರಂಭವಾಗಲಿದೆ. ಮೇ 12 ಸೋಮವಾರದಿಂದ ಪ್ರತಿದಿನ ರಾತ್ರಿ 8.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ. ಸ್ನೇಹದ ಕಡಲಲ್ಲಿ ಸೀರಿಯಲ್‌ನ ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಸುಮನ್ ತಲ್ವಾರ್, ಚಂದು ಗೌಡ ಹಾಗೂ ಕಾವ್ಯ ಮಹದೇವ್ ನಟಿಸಲಿದ್ದಾರೆ.
ನಮ್ಮನೆ ಯುವರಾಣಿ ಸೀರಿಯಲ್ ಬಳಿಕ, ಕಾವ್ಯಾ ನಟನೆಯಿಂದ ದೂರ ಇದ್ದರು. ಆದರೆ ರಿಯಾಲಿಟಿ ಶೋಗಳಲ್ಲಿ ನಟಿಸಿದ್ದರು. ಗಂಡ ಕುಮಾರ್ ಜೊತೆ ರಾಜಾ ರಾಣಿ ಶೋನಲ್ಲಿ ಸ್ಪರ್ಧಿಸಿ, ಕಾರ್ಯಕ್ರಮದ ವಿನ್ನರ್ ಕೂಡ ಆಗಿದ್ದರು. ನಂತರ ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದರು. ಕಳೆದ ಕೆಲವು ಸಮಯದಿಂದ ಕಾವ್ಯಾ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೊ ಶೂಟ್ ಮೂಲಕ ಕಾಣಿಸಿಕೊಳ್ಳುತ್ತಿದ್ದರು.  
ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಸ್ನೇಹದ ಕಡಲಲ್ಲಿ ಧಾರಾವಾಹಿಯಲ್ಲಿ ಕಾವ್ಯಾ ಮಹಾದೇವ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಸೀರಿಯಲ್ ಪ್ರೊಮೋ ಬಿಡುಗಡೆಯಾಗಿದ್ದು, ಜನರಿಗೆ ಕಥೆ ಇಷ್ಟವಾಗಿದೆ. ವಿಭಿನ್ನ ಕಥೆಯ ಮೂಲಕ ಕಾವ್ಯಾ ಬಹಳ ವರ್ಷಗಳ ನಂತ್ರ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಅವರ ಈ ನಟನೆಗೆ ಅವರ ಗಂಡ ತುಂಬಾನೇ ಸಪೋರ್ಟ್ ಮಾಡಿದ್ದಾರೆ ಎಂದು ಸಂದರ್ಶನಗಳಲ್ಲಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub