ಶಿವರಾತ್ರಿ ದಿನ ಶಿವಪರ್ವತಿಯಾದ ಕಿಶನ್ ಹಾಗೂ ನಮೃತಾ ಗೌಡ
Mar 1, 2025, 14:29 IST
|

ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಮತ್ತು ಬಿಗ್‌ಬಾಸ್ ಕನ್ನಡ ಸೀಸನ್ 7ರ ಕಿಶನ್ ಬಿಳಗಲಿ ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸುತ್ತಿದ್ದಾರೆ. ಇದಾಗಲೇ ಇಬ್ಬರೂ ಸೇರಿ ಕೆಲವು ಡ್ಯೂಯೆಟ್ ಹಾಡಿದ್ದು, ಅದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇವರಿಬ್ಬರು ರವಿಚಂದ್ರನ್ ನಟನೆಯ ಶಾಂತಿಕ್ರಾಂತಿ ಸಿನಿಮಾದ ಮಧ್ಯರಾತ್ರಿಲಿ ಹೈವೆ ರಸ್ತೇಲಿ" ಹಾಡು, ಸಪ್ತಸಾಗರದಾಚೆ ಎಲ್ಲೋ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳ ಹೃದಯ ಗೆದ್ದಿದ್ದರು.
ಇದೀಗ ಮೊನ್ನೆ ಶಿವರಾತ್ರಿಯ ನಿಮಿತ್ತ ಈ ಜೋಡಿ ಶಿವ-ಪಾರ್ವತಿಯರನ್ನೇ ಧರೆಗಿಳಿಸಿದರು. ಇವರ ಪರ್ಫಾರ್ಮೆನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದ್ಭುತ ನಟನೆಯಿಂದ ಮೋಡಿ ಮಾಡಿದೆ ಜೋಡಿ. ಅಂದಹಾಗೆ ಕಿಶನ್ ಅವರು ಮೂಲತಃ ಡಾನ್ಸರ್ ಚಿಕ್ಕಮಗಳೂರಿನ ಇವರು ಬಿಗ್‌ಬಾಸ್ 7ರಿಂದ ಸಕತ್ ಫೇಮಸ್ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ.
ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್. ಡಾನ್ಸ್ ಮಾತ್ರವಲ್ಲದೇ ಬಿರಿಯಾನಿ ಪ್ಯಾಲೇಸ್ ಫ್ರಾಂಚೈಸಿ ಕೂಡ ಇವರು ಹೊಂದಿದ್ದು, ಬೆಂಗಳೂರಿನಲ್ಲಿ ಇವರ ಔಟ್ಲೆಟ್ಗಳಿವೆ. ಇದಕ್ಕೆ ಸಾಕ್ಷಿ ಎಂಬಂತೆ ಖುದ್ದು ಇವರೇ ಬಿರಿಯಾನಿ ತಯಾರಿಸುತ್ತಿದ್ದ ವಿಡಿಯೋ ಒಂದು ವೈರಲ್ ಆಗಿತ್ತು.ಇನ್ನು ನಮ್ರತಾ ಗೌಡ ಅವರ ಕುರಿತು ಹೇಳುವುದೇ ಬೇಡ. ಬಿಗ್‌ಬಾಸ್ 10 ಮೂಲಕ ಸಕತ್ ಫೇಮಸ್ ಆಗಿರುವವರು ಇವರು. ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಆಗಿರುವ ನಮ್ರತಾ 1993 ಏಪ್ರಿಲ್ 15ರಲ್ಲಿ ಬೆಂಗಳೂರಿನಲ್ಲಿ ಜನಿಸಿದವರು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಕಿರುತೆರೆ ಪದಾರ್ಪಣೆ ಮಾಡಿದ ನಮ್ರತಾ ಅದಾದ ಬಳಿಕ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಹಿಮಾ ಪಾತ್ರದ ಮೂಲಕ ಗಮನ ಸೆಳೆದರು.
ನಂತರ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದ ಮೂಲಕ ಗಮನ ಸೆಳೆದರು. ಈಗ ಎಲ್ಲಕ್ಕಿಂತಲೂ ಹೆಚ್ಚು ಖ್ಯಾತಿ ತಂದುಕೊಟ್ಟಿರುವುದು ಬಿಗ್‌ಬಾಸ್ 10. ಇಲ್ಲಿ ಇವರು ಮತ್ತು ಸ್ನೇಹಿತ್ ಸ್ನೇಹ ಸಾಕಷ್ಟು ಸದ್ದು ಕೂಡ ಮಾಡಿತ್ತು. ಈ ಹಿಂದೆ ಸಂದರ್ಶನವೊಂದರಲ್ಲಿ ಈ ಜೋಡಿ ಮಾತನಾಡುತ್ತಾ ತಮ್ಮ ಫ್ರೆಂಡ್ಷಿಪ್ ಬಗ್ಗೆ ಹೇಳಿಕೊಂಡಿದ್ದರು. ಮನೆ ಪಕ್ಕದಲ್ಲೇ ಇದ್ದರೂ ನಮ್ರತಾ ನನಗೆ ಕರೆ ಮಾಡುವುದಿಲ್ಲ, ತಿಂಡಿ ತಿನ್ನಲು ಸುತ್ತಾಡಲು ಬೇರೆ ಬೇರೆ ಸ್ನೇಹಿತರು ಇದ್ದಾರೆ ನಾನು ಲೆಕ್ಕನೇ ಇಲ್ಲ ಎಂದು ಕಿಷನ್ ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.