KSRTC ನಿರ್ವಾಹಕಿ ಕ.ಣೀರು; 'ಪೀರೆಯಡ್ಸ್ ಆದರು ನನ್ನನ್ನು ಬಿಡುತ್ತಿಲ್ಲ'

 | 
Huh

ರಾಜ್ಯದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶವಿರುವ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಬಸ್‌ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವಿನ ಸಂಬಂಧವೇ ಹದಗೆಟ್ಟು ಹೋಗಿದೆ. ಜನದಟ್ಟಣೆ, ಒತ್ತಡಗಳಿಂದ ಕಂಗೆಟ್ಟು ಹೋಗಿರುವ ಬಸ್‌ ಸಿಬ್ಬಂದಿ ತಾಳ್ಮೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ಪ್ರಯಾಣಿಕರ ಜತೆ ಅಸೌಜನ್ಯದಿಂದ ವರ್ತಿಸುತ್ತಿದ್ದಾರೆ. ಪ್ರಯಾಣಿಕರು ಕೂಡಾ ತಮ್ಮ ಹಕ್ಕು ಸಾಧಿಸುವುದಕ್ಕಾಗಿ ಬಸ್‌ ಸಿಬ್ಬಂದಿ ಮೇಲೆ ಏರಿ ಹೋಗುತ್ತಿದ್ದಾರೆ.

ಲೇಡಿ ಕಂಡಕ್ಟರ್ ಪಾಡಂತೂ ಕೇಳಲೇ ಬೇಡಿ. ಒಂದಿಷ್ಟು ಲೇಟ್ ಆದರೆ ಬೈಯುತ್ತಾರೆ. ತಿಂಗಳ ತೊಂದರೆ ಎಂದರೂ ಕೇಳುವುದಿಲ್ಲ. ಕಂಡಕ್ಟರ್ ಕುಳಿತುಕೊಳ್ಳುವ ಹಾಗಿಲ್ಲ. ಒಂದೆಡೆ ಪ್ರಯಾಣಿಕರ ತೊಂದರೆಯಾದರೆ ಇನ್ನೊಂದೆಡೆ ಸಾರಿಗೆ ಸಂಸ್ಥೆಯ ಕಿರಿಕಿರಿ ಇವೆಲ್ಲವು ನಡುವೆ ಮಹಿಳಾ ಕಂಡಕ್ಟರ್ ಒದ್ದಾಡುತ್ತಾ ವೀಡಿಯೊ ಮಾಡ್ತಿದ್ದಾರೆ. ಅದು ಈಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

ಎರಡು ದಿನದ ಹಿಂದಷ್ಟೇ ತನಗೆ ಬಸ್‌ ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ತಮ್ಮ ಗಂಡ ಮತ್ತು ಇತರರನ್ನು ಕರೆಸಿ ಲೇಡಿ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಹಲ್ಲೆಕೋರರ ಮೇಲೆ ಕೇಸು ದಾಖಲಾಗಿತ್ತು. ಇದೀಗ ಟಿಕೇಟ್ ಕೇಳಿದ್ದಕ್ಕೆ  ಶಕ್ತಿ ಯೋಜನೆ ಎಂದು ಹೇಳಿ ಆಧಾರ್ ಕಾರ್ಡ್ ನೀಡದೆ ಕಾಡಿಸಿ ಲೇಡಿ ಕಂಡಕ್ಟರ್ ಗೆ ಸುಸ್ತು ಮಾಡಿ ಹಾಕಿದ್ದಾರೆ‌.

ಈ ನಡುವೆ ರಸ್ತೆ ಸಾರಿಗೆ ನಿಗಮ ಏನೇ ಆದರೆ, ಪ್ರಯಾಣಿಕರ ಜತೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿ ಕೆಲವೊಂದು ಸಲಹೆಗಳನ್ನೂ ಕೊಟ್ಟಿದೆ. ಆದರೆ ಲೇಡಿ ಕಂಡಕ್ಟರ್ ಕಷ್ಟ ಕೇಳುವವರಿಲ್ಲ ಎಂದು ಇವರು ಕಣ್ಣೀರು ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.