ಮಾಜಿ ಸಿಎಮ್ ಹೆಸರು ಹೇಳಿದ ಲಾಯರ್ ಜಗದೀಶ್; ಬೆ ಚ್ಚಿಬಿದ್ದ ಕರುನಾಡು
Aug 28, 2024, 21:15 IST
|

ಈ ಹಿಂದೆ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ವಿರುದ್ಧದ ಲೈಂಗಿಕ ಹಗರಣ ಸಿಡಿ ವಿಷಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯತೆ ಗಳಿಸಿದ್ದ ವಕೀಲ ಜಗದೀಶ್ ಕುಮಾರ್ ಅವರ ವಿರುದ್ಧ ಯಶವಂತಪುರ ಸೆನ್ ಪೊಲೀಸ್ ಠಾಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಪ್ತ ಸಹಾಯಕರು ದೂರು ದಾಖಲಿಸಿದ್ದಾರೆ
ತಮ್ಮ ವಿರುದ್ಧ ಬೊಮ್ಮಾಯಿ ಅವರ ಆಪ್ತ ಸಹಾಯಕರು ದೂರು ದಾಖಲಿಸಿರುವ ವಿಷಯವನ್ನು ಸ್ವತಃ ವಕೀಲ ಜಗದೀಶ್ ಅವರೇ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದು, ಯಶವಂತಪುರ ಸೆನ್ ಠಾಣೆಯ ಇನ್ಸ್ಪೆಕ್ಟರ್ ಸ್ವತಃ ಕರೆ ಮಾಡಿ ನಿಮ್ಮ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಅವರ ಆಪ್ತ ಸಹಾಯಕರು ದೂರು ನೀಡಿದ್ದಾರೆ. ಆ ಸಂಬಂಧ ನಿಮಗೆ ನೋಟಿಸ್ ಕೊಡಬೇಕಿದೆ ಎಂದು ತಿಳಿಸಿದ್ದಾರೆ.
ಹಾಗಾಗಿ ನಾವು ಸುಪ್ರೀಂಕೋರ್ಟಿನಲ್ಲಿ ದೂರು ದಾಖಲಿಸುವ ಮುನ್ನವೇ ಆ ಪ್ರಕರಣದ ಹಿಂದೆ ಇರುವವರು ಯಾರು ಎಂಬುದು ಕರ್ನಾಟಕದ ಜನತೆಗೆ ಗೊತ್ತಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.ಈ ಮುನ್ನ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕರಣದ ಕುರಿತು ಮಾಹಿತಿಯನ್ನು ಹೊರಗೆಡವಿದ್ದ ವಕೀಲ ಜಗದೀಶ್, ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ತಮ್ಮ ಅಧಿಕಾರವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ರಾಜ್ಯದ ಮತ್ತು ಪರ ರಾಜ್ಯದ ಹಲವು ನಟಿಯರಿಗೆ ಐಷಾರಾಮಿ ಕಾರು, ಬಂಗಲೆ ನೀಡಿ ಲೈಂಗಿಕ ಸಹಕಾರ ಪಡೆದಿದ್ದಾರೆ.
ಅಲ್ಲದೆ, ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಇಬ್ಬರು ವೈದ್ಯರು ಮುಖ್ಯಮಂತ್ರಿ ನಟಿಯರೊಂದಿಗೆ ಇರುವ ಖಾಸಗಿ ವಿಡಿಯೋಗಳನ್ನು ಬಳಸಿಕೊಂಡು ಅವರನ್ನು ಬ್ಲಾಕ್‌ಮೇಲ್ ಮಾಡಿ ತಮಗೆ ಬೇಕಾದ ಕಡತಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಆ ನಟಿಯರಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಷಯದಲ್ಲಿ ಸರ್ಕಾರದ ಆಡಳಿತ ಮತ್ತು ಅಧಿಕಾರವನ್ನುದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ, ಈ ಬಗ್ಗೆ ನಟಿಯರಿಂದ ದೂರು ಕೊಡಿಸುವುದಾಗಲೀ, ಅಥವಾ ಸಿಡಿ ಬಿಡುಗಡೆ ಮಾಡುವುದಾಗಲೀ ಮಾಡುವುದಿಲ್ಲ. ಬದಲಾಗಿ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌ಗೆ ಸಾಕ್ಷ್ಯಾಧಾರ ಸಹಿತ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದ್ದರು.
ಸುಪ್ರೀಂಕೋರ್ಟ್ ನಿಗಾದಲ್ಲೇ ಪ್ರಕರಣದ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಯೊಬ್ಬರಿಗೆ ಹುಡುಗಿಯರನ್ನು ಸರಬರಾಜು ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಗಂಭೀರವಾದ ವಿಷಯ. ಹಾಗಾಗಿ ನೇರವಾಗಿ ಕೋರ್ಟಿನಲ್ಲೇ ಮೊಕದ್ದಮೆ ಹೂಡಲಾಗುವುದು. ಆ ಹಿನ್ನೆಲೆಯಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಅವರನ್ನು ವಕೀಲರು ಭೇಟಿ ಮಾಡಿದ್ದಾರೆ. ಅವರ ಸಲಹೆ ಮೇರೆಗೆ ಹಾಲಿ ಸಂಸದರಾಗಿರುವ ಮಾಜಿ ಮುಖ್ಯಮಂತ್ರಿ ವಿರುದ್ಧ ದೂರು ದಾಖಲಿಸಲು ಸ್ಪೀಕರ್ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದೂ ಜಗದೀಶ್ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023