ಧ್ರುವ ಸರ್ಜಾ ಮಗಳ ತುಂಟಾಟಕ್ಕೆ ಎದ್ದು ಬಿದ್ದು ಕುಣಿದಾಡಿದ ಮೇಘನಾ ರಾಜ್
ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಎಂದೇ ಫೇಮಸ್ ಆಗಿರುವ ಧ್ರುವ ಸರ್ಜಾ ಅಂದರೆ, ಜನವರಿ 22 ರಂದು ತಮ್ಮ ಇಬ್ಬರು ಮಕ್ಕಳಿಗೆ ಅದ್ಧೂರಿಯಾಗಿ ನಾಮಕರಣ ಮಾಡಿದ್ದು, ಕಾರ್ಯಕ್ರಮದಲ್ಲಿ ಬಂಧುಗಳು ಮತ್ತು ಸಿನಿಮಾ ತಾರೆಯರು ಆಗಮಿಸಿದ್ದರು. ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ ಮಕ್ಕಳಿಗೆ ದೇವರ ಹೆಸರನ್ನಿಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದರು. ಮಗಳಿಗೆ ರುದ್ರಾಕ್ಷಿ ಮತ್ತು ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ.
ಅಷ್ಟಕ್ಕೂ ಹನುಮ ಭಕ್ತನಾಗಿರುವ ಧ್ರುವ ಸರ್ಜಾ ಅವರು ಮಕ್ಕಳ ನಾಮಕರಣಕ್ಕೆ ಜನವರಿ 22 ಆಯ್ಕೆ ಮಾಡಿಕೊಳ್ಳುವ ಹಿಂದೆಯೂ ಬಹುದೊಡ್ಡ ಉದ್ದೇಶವೇ ಇದೆ. ಅದು ಎಲ್ಲರಿಗೂ ತಿಳಿದಿರುವಂತೆ ಅಯೋಧ್ಯೆಯಲ್ಲಿ ಅಂದು ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದಿತ್ತು. ಅದೇ ದಿನ ಹನುಮ ಭಕ್ತ ಧ್ರುವ ಮಕ್ಕಳಿಗೆ ನಾಮಕರಣ ನೆರವೇರಿಸಿದ್ದಾರೆ. ಧ್ರುವ ಸರ್ಜಾ ಮಕ್ಕಳ ನಾಮಕರಣವನ್ನು ಮಾವ ಅರ್ಜುನ್ ಸರ್ಜಾ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ.
ಆಗ್ಗಾಗ್ಗೆ ಹನುಮಾನ ದೇಗುಲಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆಯನ್ನೂ ನೆರವೇರಿಸುತ್ತಿರುತ್ತಾರೆ. 24 ನವೆಂಬರ್ 2019ರಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರ, ಅಂದರೆ 2022ರ ಅಕ್ಟೋಬರ್ 2 ರಂದು ಪ್ರೇರಣಾ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಕಳೆದ ಸಪ್ಟೆಂಬರ್ 18ರಂದು ಎರಡನೆಯ ಮಗುವಿನ ಪಾಲಕರಾಗಿದ್ದಾರೆ ಧ್ರುವ ಮತ್ತು ಪ್ರೇರಣಾ.
ಇದೀಗ ಎರಡೂ ಮಕ್ಕಳ ಲಾಲನೆ ಪಾಲನೆಯಲ್ಲಿದ್ದಾರೆ ಪ್ರೇರಣಾ. ಆಗಾಗ್ಗೆ ಮಗಳ ಕ್ಯೂಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಎರಡನೆಯ ಮಗು ಹುಟ್ಟಿದರೂ ಮೊದಲ ಮಗಳ ಹೆಸರನ್ನು ಇವರು ರಿವೀಲ್ ಮಾಡಿರಲಿಲ್ಲ. ಕೊನೆಗೂ ಇಬ್ಬರ ನಾಮಕರಣ ಮಾಡಿ ಫ್ಯಾನ್ಸ್ ಕಾತರಕ್ಕೆ ತೆರೆ ಎಳೆದರು. ಇದೀಗ ಪುಟಾಣಿ ತಮ್ಮನಿಗೆ ರುದ್ರಾಕ್ಷಿ ಲಾಲಿ ಹಾಡುತ್ತಾ ತೊಟ್ಟಿಲಲ್ಲಿ ಮಲಗಿಸುತ್ತಿದ್ದು ಅದರ ವಿಡಿಯೋ ವೈರಲ್ ಆಗಿದೆ. ತಮ್ಮ ಪುಟ್ಟು ತಮ್ಮನನ್ನು ಮುದ್ದುಮಾಡುವ ಈ ಪುಟಾಣಿ ಅಕ್ಕನ ಲಾಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾರ್ಟ್ ಇಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿ ಹೋಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.