ದುನಿಯಾ‌ ವಿಜಯ್ ಮೊದಲ ಹೆಂಡತಿ ಮಗಳನ್ನು ಮೋಹಕ‌ ತಾರೆ ರಮ್ಯಾಗೆ ಹೋಲಿಕೆ ಮಾಡಿದ ನೆಟ್ಟಿಗರು

 | 
Bnjj
ಕಳೆದ ಒಂದು ವಾರದಿಂದ ಸೋಷಿಯಲ್ ಮೀಡಿಯಾದಲ್ಲಿ ದುನಿಯಾ ವಿಜಯ್ ಮಕ್ಕಳದ್ದೇ ದರ್ಬಾರ್. ಹಿರಿ ಮಗಳು ಮೊನಿಕಾ ಹಾಗೂ ಕಿರಿ ಮಗಳು ಮೊನಿಷಾ ಫೋಟೋಗಳು ಸೆನ್ಸೇಷನ್ ಸೃಷ್ಟಿಸಿದೆ. ವಿಜಯ ಅವರ ಮುದ್ದಾದ ಇಬ್ಬರು ಮಕ್ಕಳು ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದು, ಫ್ಯೂಚರ್​ ಹೀರೋಯಿನ್ಸ್​ ಅಂತ ದೃಷ್ಟಿ ತೆಗೆಯುತ್ತಿದ್ದಾರೆ. ನಿಜಕ್ಕೂ ವಿಜಯ್ ಪುತ್ರಿಯರು ಚಿತ್ರರಂಗಕ್ಕೆ ಬರ್ತಿದ್ದಾರೆ . 
ನೋಡೋಕೆ ರಮ್ಯಾ ಅವರ ತರನೇ ಕಾಣುತ್ತಿರುವ ಮೋನಿಕಾ ಫೋಟೋಗಳನ್ನೇ ನೋಡಿಯೇ ಇವ್ರು ಫ್ಯೂಚರ್​ ಸ್ಟಾರ್ಸ್​ ಅಂತ ಕಮಿಟ್​ ಆಗ್ತಿದ್ದಾರೆ. ಸೋಶಿಯಲ್ ಮೀಡಿಯಾದಂತೆ ನೀವು ಕನ್​ಫ್ಯೂಸ್ ಆಗೋದು ಬೇಡ. ತಮ್ಮ ಪುತ್ರಿಯರ ಎಂಟ್ರಿ ಬಗ್ಗೆ ಸ್ವತಃ ದುನಿಯಾ ವಿಜಯ್ ಅವರೇ ಕ್ಲಾರಿಟಿ ಕೊಟ್ಟಿದ್ದಾರೆ. ಬರೀ ಕ್ಲಾರಿಟಿ ಮಾತ್ರವಲ್ಲ ತಮ್ಮ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಹಾಕಿಕೊಂಡಿರೋ ಪ್ಲಾನಿಂಗ್​ನೂ ಬಿಚ್ಚಿಟ್ಟಿದ್ದಾರೆ.
ದುನಿಯಾ ವಿಜಯ್ ಅವರ ಇಬ್ಬರು ಹೆಣ್ಣು ಮಕ್ಕಳು ಸಿನಿಮಾರಂಗ ಪ್ರವೇಶಿಸೋದು ಖಚಿತ. ಇದನ್ನ ಸ್ವತಃ ವಿಜಯ್ ಘೋಷಿಸಿದ್ದಾರೆ. ಆದರೆ ನೀವು ಗೆಸ್​ ಮಾಡಿದಂತೆ ಕಿರಿ ಮಗಳು ಮೊನಿಷಾ ಮೊದಲು ಇಂಡಸ್ಟ್ರಿ ಪ್ರವೇಶಿಸ್ತಿಲ್ಲ. ಹಿರಿಯ ಮಗಳು ಮೊನಿಕಾ ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಮೊನಿಕಾ ವಿಜಯ್ ಅವರ ಎಜುಕೇಷನ್ ಕಂಪ್ಲೀಟ್ ಆಗಿದೆ. ರಿಸೆಂಟ್​ ಆಗಿ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್​ ಸಹ ಮುಗಿಸಿ ಬಂದಿದ್ದಾರೆ. ಮುಂಬೈನ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಬಂದಿರುವ ಮೊನಿಕಾ, ಸದ್ಯ ಬೆಂಗಳೂರಿನಲ್ಲಿ ಕಲಾತಂಡವೊಂದರ ಜೊತೆ ಕೆಲಸ ಮಾಡ್ತಿದ್ದಾರೆ. 
ಹಾಗಾಗಿ ಹಿರಿ ಮಗಳು ಮೊನಿಕಾ ಸಿನಿಮಾ ಎಂಟ್ರಿಗೆ ತಯಾರಾಗಿದ್ದು, ಶೀಘ್ರದಲ್ಲೇ ಸಿನಿಮಾ ಅನೌನ್ಸ್​ ಆಗುವ ನಿರೀಕ್ಷೆಯಿದೆ. ಆದ್ರೆ ಕಿರಿ ಮಗಳು ಮೊನಿಷಾ ಇನ್ನೂ ಎಜುಕೇಷನ್ ಮಾಡ್ತಿದ್ದು, ಈಗ ಹೆಚ್ಚಿನ ಶಿಕ್ಷಣಕ್ಕಾಗಿ ನ್ಯೂಯಾರ್ಕ್​ಗೆ ಹೋಗ್ತಿದ್ದಾರಂತೆ. ಜೊತೆಗೆ ಮೊನಿಷಾ ಸಹ ಆ್ಯಕ್ಟಿಂಗ್ ಟ್ರೈನಿಂಗ್ ಪಡೆದುಕೊಳ್ಳಲಿದ್ದು, ಅದು ಮುಗಿದು ವಾಪಸ್ ಆದ ಬಳಿಕವಷ್ಟೇ ಮೊನಿಷಾ ಬಣ್ಣದ ಜಗತ್ತಿಗೆ ಬಲಗಾಲಿಡಲಿದ್ದಾರಂತೆ. ಈಗಾಗಲೇ ಬೇರೆ ದೇಶಕ್ಕೆ ಹೋಗಿ ಏನೇನೋ ಸರ್ಜರಿಗಳ ಮಾಡಿಸಿಕೊಂಡು ಬಂದಿರುವ ಇವರು ಮತ್ತಷ್ಟು ವೈಟ್ ಆಂಡ್ ಬ್ಯೂಟಿ ಫುಲ್ ಕಾಣ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.