ಒಬ್ಬ ನನ್ನ ಟೀ ಶ.ರ್ಟ್ ಒಳಗೆ ಕೈ ಹಾಕಿದ; ಆದರೂ ನಾನು ಸುಮ್ಮನಿದ್ದೆ ಎಂದ ತಮಿಳು ತಾರೆ
ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಮೀಟು ಅಭಿಯಾನದ ಅಡಿ ಸಾಕಷ್ಟು ನಟ-ನಟಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಬಿಚ್ಚಿಡುತ್ತಿದ್ದಾರೆ. ಕಾಸ್ಟಿಂಗ್ ಕೌಚ್ ಎನ್ನುವ ಚಿತ್ರರಂಗದ ಕರಾಳ ಮುಖದ ಬಗ್ಗೆ ಮಾತನಾಡುತ್ತಿದ್ದಾರೆ. ಬಣ್ಣದ ಲೋಕದಲ್ಲಿ ಮಾತ್ರವಲ್ಲ ಚಿಕ್ಕಂದಿನಿಂದಲೂ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಕೆಲವರು ಮೌನ ಮುರಿದಿದ್ದಾರೆ.
ಸಾಕಷ್ಟು ಸಂದರ್ಭಗಳಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯ ನಡೆದಾಗ ಏನು ಮಾಡಬೇಕೆಂದು ಗೊತ್ತಿಲ್ಲದೇ ಎಲ್ಲವನ್ನು ಮುಚ್ಚಿಟ್ಟು ನೋವು ಅನುಭವಿಸುತ್ತಾರೆ. ಚಿಕ್ಕಂದಿನಲ್ಲೇ ಕೆಲವರಿಗೆ ಇಂತಹ ಕಹಿ ಅನುಭವ ಆಗಿರುತ್ತದೆ. ಆದರೆ ಯಾರಿಗೆ ಹೇಳಬೇಕು? ಹೇಳಿದರೆ ಏನಾಗುತ್ತೋ? ಎಂದು ಹೆದರುವಂತಾಗುತ್ತದೆ. ಇಂತದ್ದೇ ಪರಿಸ್ಥಿತಿಯನ್ನು ಎದುರಿಸಿರುವ ಕೆಲ ನಟಿಯರು ಇದ್ದಾರೆ. ಇತ್ತೀಚೆಗೆ ಆ ಬಗ್ಗೆ ಮಾತನಾಡುತ್ತಿದ್ದಾರೆ.
ಬಹುಭಾಷಾ ನಟಿ ಆಂಡ್ರಿಯಾ ಜೆರೆಮಿಯಾಗೂ ಚಿಕ್ಕಂದಿನಲ್ಲಿ ಇಂತಹ ಅನುಭವ ಆಗಿತ್ತಂತೆ. ಸಂದರ್ಶನವೊಂದರಲ್ಲಿ ಆಕೆ ಈ ಬಗ್ಗೆ ಮಾತನಾಡಿದ್ದ ವಿಡಿಯೋ ವೈರಲ್ ಆಗುತ್ತಿದೆ. ಒಮ್ಮೆ ಬಸ್‌ನಲ್ಲಿ ತಂದೆ ಜೊತೆ ಪ್ರಯಾಣಿಸುವಾಗ ಯಾರೋ ನನ್ನ ಟೀಶರ್ಟ್ ಒಳಗೆ ಕೈಬಿಟ್ಟಿದ್ದರು. ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ ಎಂದು ಆಕೆ ಹೇಳಿದ್ದಾರೆ.
ನಾನು ಒಮ್ಮೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ನನ್ನೊಟ್ಟಿಗೆ ನಮ್ಮ ಅಪ್ಪ ಇದ್ದರು. ನಾನು ಒಂದು ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಿದ್ದೆ. ನನಗೆ ಆಗ 11 ವರ್ಷ ವಯಸ್ಸು ಇರಬಹುದು. ದಿಢೀರನೆ ಒಂದು ಕೈ ನನ್ನ ಹಿಂದೆ ಟೀ ಶರ್ಟ್ ಒಳಗೆ ಇಟ್ಟಂತೆ ಆಯ್ತು. ಗೊತ್ತಿಲ್ಲದೇ ಅಪ್ಪನ ಕೈ ತಾಗಿರಬಹುದು ಎಂದುಕೊಂಡೆ. ಟೀ ಶರ್ಟ್ ಒಳಗೆ ಕೈ ಹೋಗುತ್ತಿದೆ. ನನ್ನ ಪಕ್ಕದಲ್ಲೇ ಅಪ್ಪು ಕುಳಿತಿದ್ದರು. ಅವರ ಎರಡೂ ಕೈ ಮುಂದಿಟ್ಟುಕೊಂಡಿದ್ದಾರೆ.
ನಾನು ನಮ್ಮ ಅಪ್ಪನಿಗೆ ಏನೂ ಹೇಳಲಿಲ್ಲ ನನ್ನ ಅಮ್ಮನಿಗೂ ಏನು ಹೇಳಲಿಲ್ಲ. ಸುಮ್ಮನೆ ಮುಂದೆ ಜರುಗಿ ಕುಳಿತುಕೊಂಡೆ. ನಾನು ಯಾಕೆ ಅವತ್ತು ಮಾತನಾಡಲಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನಾನು ಹೇಳಲಿಲ್ಲ. ನನಗೆ ಗೊತ್ತು. ಆ ಕ್ಷಣದಲ್ಲಿ ಏನೋ ತಪ್ಪು ನಡೆಯುತ್ತಿದೆ ಎಂದು. ಯಾರದ್ದೋ ಕೈ ನನ್ನ ಟೀ ಶರ್ಟ್ ಒಳಗೆ ಯಾಕೆ ಹೋಗುತ್ತದೆ? ಅಪ್ಪ ಯಾರೋ ಹೀಗೆ ಮಾಡ್ತಿದ್ದಾರೆ ಎಂದು ಅವತ್ತು ಹೇಳಿದ್ದರೆ, ಏನಾದರೂ ಮಾಡುತ್ತಿದ್ದರು. ನಾನು ಹೇಳಲಿಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.