ಪವಿತ್ರ ಗೌಡ ಕುತ್ತಿಗೆಯಲ್ಲಿ ತಾಳಿ, ದರ್ಶನ್ ಸಂಸಾರಕ್ಕೆ ಬತ್ತಿ ಇಡಲು ಮುಂದಾದ ಅಪವಿತ್ರ

 | 
Nz
ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒಬ್ಬರನ್ನ ಬಿಟ್ಟು ಮತ್ತೊಬ್ಬರು ಬದುಕಲಾರದಷ್ಟು ಆತ್ಮೀಯ ಸ್ನೇಹ ಹೊಂದಿದ್ದರು. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್‌ನ ಮಾಡಿ, ಅಶ್ಲೀಲ ಫೋಟೋಗಳನ್ನ ಕಳುಹಿಸಿದ್ದ ಕಾರಣಕ್ಕೆ ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯ ಭೀಕರ ಕೊಲೆ ಮಾಡಲಾಗಿದೆ ಎಂಬ ಆರೋಪ ಕೂಡ ಇದೆ. 
ಡಿ-ಬಾಸ್ ದರ್ಶನ್ ತೂಗುದೀಪ್ & ಅವರ ಗೆಳತಿ ಪವಿತ್ರಾ ಗೌಡ ರೇಣುಕಾಸ್ವಾಮಿಯ ಮರ್ಡರ್ ಕೇಸಲ್ಲಿ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ. ಆದರೆ ಇದಕ್ಕೂ ಮೊದಲೇ ಪವಿತ್ರಾ ಗೌಡ ಒಂದು ಮದುವೆ ಆಗಿ, ಕೆಲ ವರ್ಷಗಳ ಹಿಂದೆ ಹಳೇ ಗಂಡನಿಗೆ ಡಿವೋರ್ಸ್ ಕೂಡ ನೀಡಿದ್ದರು. ನಂತರ 2014 ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಸ್ನೇಹ ಶುರುವಾಗಿತ್ತು ಎಂಬ ಮಾತಿದೆ.
ಪವಿತ್ರಾ ಗೌಡ ಮಾಜಿ ಗಂಡ & ಪವಿತ್ರಾ ಗೌಡ ದೂರವಾಗಿ ಹಲವು ವರ್ಷ ಕಳೆದಿದ್ದು, ಈ ಇಬ್ಬರ ಪ್ರೀತಿಗೆ ಸಾಕ್ಷಿಯಗಿ ಒಂದು ಮಗು ಕೂಡ ಇದೆ. ಪವಿತ್ರಾ ಗೌಡ ಅವರ ಮಾಜಿ ಗಂಡ ಆರಂಭದಲ್ಲಿ ತಮ್ಮ ಹೆಂಡತಿ ಅಂದ್ರೆ ಪವಿತ್ರಾ ಗೌಡ ಅವರನ್ನ ತುಂಬಾನೇ ಇಷ್ಟ ಪಡುತ್ತಿದ್ದರಂತೆ, ಆ ನಂತರ ಇಬ್ಬರ ನಡುವೆ ಬಿರುಕು ಮೂಡಿ ದೂರವಾಗಿದ್ದರು. ಇಷ್ಟೆಲ್ಲಾ ಆಗಿ ಇಬ್ಬರೂ ಡಿವೋರ್ಸ್ ಕೂಡ ಪಡೆದಿದ್ದಾರೆ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೇ ಸಮಯದಲ್ಲಿ ಪವಿತ್ರಾ ಗೌಡ ಕುತ್ತಿಗೆಯಲ್ಲಿ ಈಗಲೂ ತಾಳಿ ಇದೆ ಅಂತ ಇತ್ತೀಚಿಗಷ್ಟೇ ವೈರಲ್ ಆಗಿತ್ತು. ಅಷ್ಟಕ್ಕೂ ಹಳೆಯ ಗಂಡನಾ ಇಲ್ಲ ಪ್ರಖ್ಯಾತ ನಟನಾ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಸಂಬಂಧ ಡಿ-ಬಾಸ್ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡ ಕೋರ್ಟ್ ಎದುರು ಹಾಜರಾದರು. ವಿಚಾರಣೆ ವೇಳೆ ಇಬ್ಬರೂ ಎದುರಾಗಿ ಬಂದರೂ ಮಾತನಾಡಿಲ್ಲ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು. ಈ ಮೂಲಕ ಇಬ್ಬರೂ ದೂರವಾಗಿ ಹೋಗಿದ್ದು, ಇಬ್ಬರ ನಡುವೆ ಇದೀಗ ಮಾತುಕತೆಯೇ ಇಲ್ಲ ಎಂಬ ಸುದ್ದಿ ಹಬ್ಬಿದೆ. ಅಲ್ಲದೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆಯವರು ಕೂಡ ಪವಿತ್ರಾ ಗೌಡ ಅವರಿಂದ ದೂರ ಇಡಲು ಪ್ರಯತ್ನ ಮಾಡುತ್ತಿದ್ದು, ಇದೀಗ ಯಾರೂ ಕೂಡ ನೇರ ಡಿ-ಬಾಸ್ ಅವರನ್ನ ಭೇಟಿ ಮಾಡಲು ಅಥವಾ ಸಂಪರ್ಕ ಮಾಡಲು ಆಗುತ್ತಿಲ್ಲವಂತೆ ಹಾಗಾಗಿ ಜನರಿಗೆ ಇದು ಬಿಡಿಸಲಾಗದ ಕಗ್ಗಂಟಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.