ಈ ಇಬ್ಬರ ಹಣೆಬರಹ ಬಿಚ್ಚಿ ಟ್ಟ ಪ್ರಥಪ್; ಆ ಒಂದು ರೀಲ್ಸ್ ನಿಂದ ವಿಚ್ಚೇದನ ಆಯಿತು'

 | 
Gui

ಬಿಗ್‌ಬಾಸ್‌ ಕನ್ನಡ ಸೀಸನ್‌ 5ರಲ್ಲಿ ಸ್ಪರ್ಧಿಗಳಾಗಿದ್ದ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ, ಶುಕ್ರವಾರ ಅಧಿಕೃತವಾಗಿ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಜೋಡಿ ಪರಸ್ಪರರ ಒಪ್ಪಿಗೆ ಪಡೆದುಕೊಂಡೇ ಈ ನಿರ್ಧಾರಕ್ಕೆ ಬಂದಿದೆ. ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿ ಬೇರೆ ಬೇರೆಯಾಗಿದ್ದಕ್ಕೆ, ತರಹೇವಾರಿ ಚರ್ಚೆ ನಡೆಯುತ್ತಿದೆಯಾದರೂ, ವಿಚ್ಛೇದನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ಆದರೆ, ಆ ಬಗ್ಗೆಯೂ ಕೆಲವು ಬಗೆಬಗೆ ವಿಚಾರಗಳು ಕೇಳಿಬರುತ್ತಿವೆ. ಇವರಿಬ್ಬರ ಡಿವೋರ್ಸ್‌ ವಿಚಾರ ತಿಳಿಯುತ್ತಿದ್ದಂತೆಯೇ ಬಿಗ್‌ ಬಾಸ್‌ ವಿಜೇತ ಪ್ರಥಮ್‌ ಮಧ್ಯಪ್ರವೇಶಿಸಿದ್ದಾರೆ.ನಟ ಒಳ್ಳೆ ಹುಡುಗ ಪ್ರಥಮ್‌ ಇದೀಗ ಈ ಜೋಡಿಯನ್ನು ಶತಾಯ ಗತಾಯ ಒಂದು ಮಾಡಲು ಮುಂದಾಗಿದ್ದಾರೆ. ಅವರ ವೈಯಕ್ತಿಕ ವಿಚಾರದ ಬಗ್ಗೆ ಎಲ್ಲರೂ ಗೌರವ ನೀಡಬೇಕು ಎಂದು ಹೇಳಿ, ಇಬ್ಬರ ನಡುವಿನ ಸಮಸ್ಯೆ ಬಗೆಹರಿಸಲು ಧ್ರುವ ಸರ್ಜಾ ಅವರನ್ನು ಕರೆತರುವುದಾಗಿ ಹೇಳಿದ್ದಾರೆ ಪ್ರಥಮ್.‌ ನನ್ನ ಮತ್ತು ಚಂದನ್‌ ನಡುವೆ ಈ ಮೊದಲು ಬೇರೆ ಬೇರೆ ಅಭಿಪ್ರಾಯಗಳಿದ್ದವು. 

ಅದರಾಚೆಗೂ ನಾವಿಬ್ಬರೂ ಒಳ್ಳೆ ಸ್ನೇಹಿತರು. ಚಂದನ್‌ ತುಂಬ ಅಗ್ರೆಸ್ಸಿವ್‌ ಅಲ್ಲ. ನಿವೇದಿತಾ ಪುಕ್ಕ ಹುಡುಗಿ. ಅವರಿಗೆ ತಿಳಿವಳಿಕೆ ಹೇಳಿದ್ರೆ ಅರ್ಥ ಮಾಡಿಕೊಳ್ತಾರೆ. ಅವರ ಖಾಸಗಿತನವನ್ನು ಗೌರವಿಸಿ. ಇಬ್ಬರೂ ನಮ್ಮರೇ. ವಾರದ ಹಿಂದಷ್ಟೇ ರೀಲ್ಸ್‌ ಮಾಡಿದ್ದಾರೆ. ಏನೋ ಮನಸಿಗೆ ಬೇಸರ ಆಗುವಂಥದ್ದು ನಡೆದಿದೆ ಎಂದಿದ್ದಾರೆ.ಈ ಬಗ್ಗೆ ಧ್ರುವ ಸರ್ಜಾ ಅವರ ಜತೆಗೆ ನಾನು ಮಾತನಾಡ್ತಿನಿ.

ನನ್ನ, ಚಂದನ್‌ ಮತ್ತು ಧ್ರುವ ಅವರದ್ದು ಬಿಡಿಸಲಾಗದ ನಂಟಿದೆ. ಸುನಾಮಿ ಬಂದರೂ ನಮ್ಮನ್ನು ದೂರ ಮಾಡಲು ಆಗಲ್ಲ. ಹಾಗಾಗಿ ಧ್ರುವ ಅವರ ಮಾತನ್ನು ಚಂದನ್‌ ತೆಗೆದುಹಾಕಲ್ಲ ಅಂತ ನಾನು ಅಂದುಕೊಳ್ಳುತ್ತೇನೆ. ಚಿರು ಅವರ ಪುಣ್ಯ ಸ್ಮರಣೆ, ಅವರು ನೋವಲ್ಲಿ ಇರ್ತಾರೆ. ಹಾಗಾಗಿ ಈ ವಿಷಯವನ್ನು ನಾನೇ ಅವರ ಗಮನಕ್ಕೆ ತಂದು ಇತ್ಯರ್ಥಕ್ಕೆ ತರುತ್ತೇವೆ ಎಂದಿದ್ದಾರೆ ಪ್ರಥಮ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.