ಡಿಕೆಡಿಯಲ್ಲಿ ಕಾಣಿಸಲಿದ್ದಾರೆ ರಾಘು, ಪತ್ನಿ ನೆನಪು ಮರೆಮಾಚಲು ಹೊಸ ನಿರ್ಧಾರ ತೆಗೆದುಕೊಳ್ಳುತ್ತಾರಾ ವಿಜಯ್

 | 
ರಪ

ವಿಜಯ್ ರಾಘವೇಂದ್ರ ಅವರ ಬಾಳಲ್ಲಿ ದೊಡ್ಡ ಕಹಿ ಘಟನೆ ನಡೆಯಿತು. ಅವರ ಪತ್ನಿ ಸ್ಪಂದನಾ ಅವರು ಕಳೆದ ತಿಂಗಳು ಹೃದಯಾಘಾತದಿಂದ ಮೃತಪಟ್ಟರು. ಈ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ಅವರನ್ನು ನೆನಪಿಸಿಕೊಂಡಾಗಲೆಲ್ಲ ವಿಜಯ್​ಗೆ ಅಳು ಬರುತ್ತದೆ. ಆದರೆ, ಈ ನೋವನ್ನು ನುಂಗಿ ಮುಂದೆ ಸಾಗಲೇಬೇಕಿದೆ. ಈಗ ವಿಜಯ್ ರಾಘವೇಂದ್ರ ಅವರು ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. 

ಜೊತೆಗೆ ಕಿರುತೆರೆಯಲ್ಲೂ ತೊಡಗಿಕೊಂಡಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7’ ಜಡ್ಜ್​ ಸ್ಥಾನದಲ್ಲಿ ಅವರು ಮತ್ತೆ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ವಿಜಯ್ ಅವರ ಜೀವನೋತ್ಸಾಹ ಕಂಡು ಅನೇಕರು ಭೇಷ್ ಎಂದಿದ್ದಾರೆ.
ವಿಜಯ್ ಹಾಗೂ ಸ್ಪಂದನಾ ಪ್ರೀತಿಸಿ ಮದುವೆ ಆದವರು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಏಕಾಏಕಿ ಅವರು ಮೃತಪಟ್ಟರೆ ಯಾರಿಗಾದರೂ ಶಾಕ್ ಆಗುತ್ತದೆ. 

ವಿಜಯ್​ಗೂ ಸ್ಪಂದನಾ ಸಾವು ಆಘಾತಕಾರಿ ಆಗಿತ್ತು. ಅವರು ಹಲವು ದಿನಗಳಕಾಲ ಚಿತ್ರರಂಗದಿಂದ ದೂರವೇ ಇದ್ದರು. ‘ಡಿಕೆಡಿ’ ಶೋಗೂ ಅವರು ಬರುತ್ತಿರಲಿಲ್ಲ. ಈಗ ಅವರು ಎಲ್ಲವನ್ನೂ ಮರೆತು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಲು ನಿರ್ಧರಿಸಿದ್ದಾರೆ. ಡಿಕೆಡಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತ ಬಂದಿರುವ ಅನುಶ್ರೀ ಜೊತೆ ಹಾಡೊಂದಕ್ಕೆ ನೃತ್ಯ ಕೂಡ ಮಾಡಿದ್ದಾರೆ. ಆಕ್ಟಿವ್ ಆಗಿ ಎಲ್ಲರೊಂದಿಗೆ ಬೆರೆತು ತಮ್ಮ ನೋವುಗಳನ್ನು ಮರೆಯುವ ಪ್ರಯತ್ನ ಮಾಡಿದ್ದಾರೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 ಈ ವಾರದ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಜಡ್ಜ್​​ ಸ್ಥಾನದಲ್ಲಿ ವಿಜಯ್ ರಾಘವೇಂದ್ರ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಪ್ರೋಮೋಗೆ ಬಗೆಬಗೆಯ ಕಮೆಂಟ್​ಗಳು ಬಂದಿವೆ. ರಾಘು ಸರ್ ನೀವು ಬಂದಿದ್ದು ಖುಷಿ ಆಯ್ತು. ನೋವುಗಳ ಜೊತೆ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುವುದು ಮುಖ್ಯ ಅನ್ನೋದನ್ನು ಸಮಾಜಕ್ಕೆ ಕಲಿಸುವ ನಿಮ್ಮ ನಡವಳಿಕೆ ನಮಗೆಲ್ಲ ಮಾದರಿ ಎಂದು ಕೆಲವರು ಬರೆದುಕೊಂಡಿದ್ದಾರೆ. ನಿಮ್ಮ ಜೀವನೋತ್ಸಾಹ ನಮಗೆಲ್ಲ ಮಾದರಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.  (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.