ಸ್ವಂತ ತಾಯಿ ಇಲ್ಲದೇ ಚಿಕ್ಕಮ್ಮನ ಜೊತೆ ಊಟ ಮಾಡಿದ ರಾಘು ಮಗ ಶೌಯ೯

 | 
ರಾ

 ಸ್ಪಂದನಾ ವಿಜಯ್​ ರಾಘವೇಂದ್ರ ಅವರು ಹೃದಯಾಘಾತದಿಂದ ನಿಧನರಾಗಿದ್ದು ಬಹಳ ನೋವಿನ ಸಂಗತಿ. ಸ್ಪಂದನಾ ಅವರ ಅಗಲಿಕೆ ಬಳಿಕ ವಿಜಯ್​ ರಾಘವೇಂದ್ರ ಅವರ ಕುಟುಂಬದಲ್ಲಿ ದುಃಖ ಆವರಿಸಿದೆ. ವಿಜಯ್​ ರಾಘವೇಂದ್ರ ಮತ್ತು ಸ್ಪಂದನಾ ದಂಪತಿಯ ಮಗ ಶೌರ್ಯ ಕೂಡ ಕಣ್ಣೀರು ಹಾಕುತ್ತಿದ್ದಾನೆ. 

ನಿನ್ನೆ ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಉತ್ತರ ಕ್ರಿಯೆ ನಡೆದಿವೆ. ಈ ವೇಳೆ ಶೌರ್ಯನ ಜೊತೆ ನಿಂತು ಕಾಳಜಿ ವಹಿಸಿದ್ದಾರೆ ಶ್ರೀಮುರಳಿ ಪತ್ನಿ ವಿದ್ಯಾ . ಇನ್ನು ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯಿತು. ಬಳಿಕ ಮಲ್ಲೇಶ್ವರದ ಮೈದಾನದಲ್ಲಿ ಅಭಿಮಾನಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಇನ್ನು ಸ್ಪಂದನಾ ಅವರ 11ನೇ ದಿನದ ಪುಣ್ಯಕಾರ್ಯ ವಿಜಯ್ ರಾಘವೇಂದ್ರ ಅವರ ಮಾವ ಬಿ.ಕೆ ಶಿವರಾಮ್‌ ಅವರ ನಿವಾಸದ ಬಳಿ ಮಾಡಲಾಗುತ್ತಿದೆ. ಮಲ್ಲೇಶ್ವರಂನ ಬಿಜೆಪಿ ಕಚೇರಿ ಎದುರಿನ ಮೈದಾನದಲ್ಲಿ ಸ್ಪಂದನಾ ಅವರ ಪುಣ್ಯಸ್ಮರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಸ್ಪಂದನಾ ಅವರ ಪುಣ್ಯಸ್ಮರಣೆ ಹಿನ್ನೆಲೆ ಬಿ.ಕೆ ಶಿವರಾಮ್ ಅವರ ನಿವಾಸಕ್ಕೆ ವಿಜಯ್ ರಾಘವೇಂದ್ರ ಹಾಗೂ ಅವರ ಮಗ ಶೌರ್ಯ ಭಾರವಾದ ಹೆಜ್ಜೆಯಿಡುತ್ತಾ ಆಗಮಿಸಿದರು.
ಇನ್ನು ಊಟಕ್ಕೆ ಹಾಗೂ ಎಲ್ಲ ಸಮಯದಲ್ಲೂ ಶೌರ್ಯ ತನ್ನ ಚಿಕ್ಕಮ್ಮನಾದ ವಿದ್ಯಾ ಅವರ ಜೊತೆಗೆ ಸಮಯ ಕಳೆಯುತ್ತಿದ್ದಾನೆ. ಊಟ ತಿಂಡಿಗಳಲ್ಲಿ ವಿದ್ಯಾ ಬಹಳ ಕಾಳಜಿ ತೋರಿಸುತ್ತಿದ್ದಾರೆ. ನಿಜಕ್ಕೂ ಅಮ್ಮನ ಕಳೆದುಕೊಂಡು ದುಃಖದಲ್ಲಿರುವ ಜೀವಕ್ಕೆ ಸಾಂತ್ವಾನ ನೀಡಿದ್ದಾರೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.